ETV Bharat / city

ಬ್ಯಾಂಕ್​ ಉದ್ಯೋಗಿಗೆ ಹನಿಟ್ರ್ಯಾಪ್ ಖೆಡ್ಡಾ.. ಬೆಂಗಳೂರಿನಲ್ಲಿ ಓರ್ವನ ಬಂಧನ, ಗ್ಯಾಂಗ್ ಪತ್ತೆಗೆ ಬಲೆ ಬೀಸಿದ ಪೊಲೀಸರು

ಹನಿಟ್ರ್ಯಾಪ್ ಮಾಡುತ್ತಿದ್ದ ಗ್ಯಾಂಗ್​​ನ ಕಿಂಗ್ ಪಿನ್ ಒಬ್ಬನನ್ನು ಗೋವಿಂದಪುರ ಪೊಲೀಸರು ಬಂಧಿಸಿದ್ದಾರೆ. ಓರ್ವ ಯುವತಿ ಸೇರಿ ಮೂವರು ಆರೋಪಿಗಳಿಂದ ಕೃತ್ಯ ನಡೆದಿದೆ ಎಂದು ಗೋವಿಂದಪುರ ಠಾಣೆಯಲ್ಲಿ ದೂರು ದಾಖಲಾಗಿತ್ತು. ಓರ್ವ ಆರೋಪಿಯನ್ನು ಬಂಧಿಸಿ ಜೈಲಿಗಟ್ಟಿರುವ ಪೊಲೀಸರು ಸದ್ಯ ಪರಾರಿಯಾಗಿರುವ ಓರ್ವ ಯುವತಿ ಹಾಗು ಇನ್ನಿಬ್ಬರು ಆರೋಪಿಗಳ ಪತ್ತೆಗಾಗಿ ಬಲೆ ಬೀಸಿದ್ದಾರೆ.

ಮೊಹಮ್ಮದ್ ಬಂಧಿತ ಆರೋಪಿ
ಮೊಹಮ್ಮದ್ ಬಂಧಿತ ಆರೋಪಿ
author img

By

Published : Nov 4, 2021, 1:23 PM IST

ಬೆಂಗಳೂರು: ಮಧ್ಯ ವಯಸ್ಕರು, ಅವಿವಾಹಿತರು ಹಾಗು ವಿಧುರರು (ಹೆಂಡತಿ ಮೃತಪಟ್ಟ)ವ್ಯಕ್ತಿಗಳನ್ನೇ ಟಾರ್ಗೆಟ್ ಮಾಡಿ ಹನಿಟ್ರ್ಯಾಪ್ ಮಾಡುತ್ತಿದ್ದ ಗ್ಯಾಂಗ್​​ನ ಕಿಂಗ್ ಪಿನ್ ಒಬ್ಬನನ್ನು ಗೋವಿಂದಪುರ ಪೊಲೀಸರು ಬಂಧಿಸಿದ್ದಾರೆ.

ಮೊಹಮ್ಮದ್ ಬಂಧಿತ ಆರೋಪಿ. ಆರೋಪಿಗಳು ಮೊದಲಿಗೆ ಮಿಸ್ಡ್ ಕಾಲ್ ಕೊಟ್ಟು ನಂತರ ವಾಟ್ಸ್ ಆ್ಯಪ್​​​ನಲ್ಲಿ ಮೆಸೇಜ್​​ ಮಾಡುತ್ತಿದ್ದರು. ವಾಟ್ಸ್​ ಆಪ್ಯ್​​ನಲ್ಲಿ ರಿಪ್ಲೈ ಮಾಡಿದರೆ ಬಳಿಕ ಮತ್ತೆ ಕರೆ ಮಾಡಿ ಖೆಡ್ಡಾಕ್ಕೆ ಬೀಳಿಸಿಕೊಳ್ಳುತ್ತಿದ್ದರು ಎಂದು ತಿಳಿದುಬಂದಿದೆ.

ಮೋಸ ಹೋಗಿದ್ದರ ಕುರಿತು ಮಾರತ್ತಹಳ್ಳಿ ವ್ಯಕ್ತಿ ದೂರು

ಮಾರತ್ತಹಳ್ಳಿ ನಿವಾಸಿಯಾಗಿರುವ 50 ವರ್ಷ ವಯಸ್ಸಿನ ವ್ಯಕ್ತಿಗೆ ವಾಟ್ಸ್​​​ ಆ್ಯಪ್​ನಲ್ಲಿ ಯುವತಿಯ ಹೆಸರಿನಲ್ಲಿ ಮೆಸೇಜ್ ಮಾಡುತ್ತಿದ್ದರು. ನಗರದಲ್ಲೇ ಕುಳಿತು ತಾವು ಉತ್ತರ ಭಾರತ ಮೂಲದವರು ಎಂದು ಹೇಳಿ ಬೆಂಗಳೂರಿಗೆ ಬಂದಾಗ ಭೇಟಿಯಾಗುವುದಾಗಿ ಸ್ನೇಹ ಬೆಳೆಸುತ್ತಿದ್ದರು.

ಕಳೆದ ಅ.10 ರಂದು ವ್ಯಕ್ತಿಗೆ ನಗರಕ್ಕೆ ಬಂದಿರುವುದಾಗಿ ಆರೋಪಿಗಳು ತಿಳಿಸಿದ್ದರು. ಯುವತಿಯೊಬ್ಬಳಿಂದ ಕರೆ ಮಾಡಿಸಿ ಭೇಟಿ ಮಾಡುವುದಾಗಿ ತಿಳಿಸಿದ್ದಾರೆ. ಹಾಗಾಗಿ ದೂರುದಾರ ವ್ಯಕ್ತಿ ಯುವತಿಯನ್ನು ಭೇಟಿ ಮಾಡಲು ರಾತ್ರಿಯ ವೇಳೆ ನಗರದ ವೀರಣ್ಣಪಾಳ್ಯದ ಹೋಟೆಲ್ ಬಳಿ ಬಂದಿದ್ದರು.

ನಂತರ ಹೋಟೆಲ್ ಒಳಗೆ ತೆರಳುತ್ತಿದ್ದಂತೆ ಯುವತಿ ಸಲುಗೆಯಿಂದ ಮಾತನಾಡಲು ಆರಂಭಿಸಿದ್ದಳು. ಈ ವೇಳೆ ಹೋಟೆಲ್ ರೂಂಗೆ ಪೊಲೀಸರ ಹೆಸರಿನಲ್ಲಿ ಎಂಟ್ರಿ ಕೊಟ್ಟ ಆರೋಪಿಗಳು ನೀನು ಡ್ರಗ್ಸ್​​ ಮಾರುತ್ತಿದ್ದೀಯಾ ಎಂಬ ಮಾಹಿತಿ ಇದೆ ಎಂದು ಅವಾಜ್ ಹಾಕಿದ್ದಾರೆ.

ಬಳಿಕ ವ್ಯಕ್ತಿಯ ಮೊಬೈಲ್ ಕಸಿದುಕೊಂಡು ಫೋನ್​​ ಪೇ, ಗೂಗಲ್ ಪೇನಲ್ಲಿ ಆತ ಅಟ್ಯಾಚ್ ಮಾಡಿದ್ದ ಅಕೌಂಟ್ ಗಳನ್ನು ಚೆಕ್ ಮಾಡಿ ವ್ಯಕ್ತಿಯ 3 ಅಕೌಂಟ್​​​ಗಳಿಂದ 5 ಲಕ್ಷದ 91 ಸಾವಿರ ರೂ. ವರ್ಗಾಯಿಸಿಕೊಂಡಿದ್ದರು. ನಂತರ ಹೋಟೆಲ್ ರೂಂನಲ್ಲಿ ಕೂಡಿ ಹಾಕಿ ಎಸ್ಕೇಪ್ ಆಗಿದ್ದರು.

ಓರ್ವ ಯುವತಿ ಸೇರಿ ಮೂವರು ಆರೋಪಿಗಳಿಂದ ಕೃತ್ಯ ನಡೆದಿದೆ ಎಂದು ಮಾರತ್ತಹಳ್ಳಿಯ ಪ್ರತಿಷ್ಠಿತ ಬ್ಯಾಂಕ್​​ನಲ್ಲಿ ಉದ್ಯೋಗಿಯಾಗಿರುವ ವ್ಯಕ್ತಿ ಗೋವಿಂದಪುರ ಠಾಣೆಯಲ್ಲಿ ದೂರು ದಾಖಲಿಸಿದ್ದರು.

20ಕ್ಕೂ ಹೆಚ್ಚು ಜನರಿಗೆ ಹನಿಟ್ರ್ಯಾಪ್:

ಓರ್ವ ಆರೋಪಿಯನ್ನು ಬಂಧಿಸಿ ಜೈಲಿಗಟ್ಟಿರುವ ಪೊಲೀಸರು ಬೆಂಗಳೂರು ನಗರವೊಂದರಲ್ಲೇ ಸುಮಾರು 20ಕ್ಕೂ ಹೆಚ್ಚು ಜನರಿಗೆ ಈ ರೀತಿಯಲ್ಲೇ ಹನಿಟ್ರ್ಯಾಪ್ ಮಾಡಿರುವುದನ್ನು ಪತ್ತೆ ಮಾಡಿದ್ದಾರೆ. ಸದ್ಯ ಪರಾರಿಯಾಗಿರುವ ಓರ್ವ ಯುವತಿ ಹಾಗು ಇನ್ನಿಬ್ಬರು ಆರೋಪಿಗಳ ಪತ್ತೆಗಾಗಿ ಗೋವಿಂದಪುರ ಪೊಲೀಸ್ ಠಾಣೆಯ ಸಿಬ್ಬಂದಿ ಬಲೆ ಬೀಸಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.