ಬೆಂಗಳೂರು: 3ನೇ ಅಲೆಯ ಕೋವಿಡ್ 19 ಅಲೆಯನ್ನು ತಡೆಯಲು ವೀಕೆಂಡ್ ಕರ್ಫ್ಯೂ ಘೋಷಣೆಯ ಹಿನ್ನೆಲೆಯಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಪೊಲೀಸ್ ಆಯುಕ್ತ ಕಮಲ್ ಪಂಥ್ ಜೊತೆ ನಗರ ಸುತ್ತಿದರು.
ಶನಿವಾರ ಸಂಜೆ 5 ಗಂಟೆಯಿಂದ ರಾತ್ರಿಯವರೆಗೆ ಗೊರಗುಂಟೆಪಾಳ್ಯ ಜಂಕ್ಷನ್, ನಾಯಂಡಹಳ್ಳಿ ಜಂಕ್ಷನ್, ಜೆಪಿ ನಗರ, ಡೈರಿ ಸರ್ಕಲ್, ವಿಲ್ಸನ್ ಗಾರ್ಡನ್, ಡಬಲ್ ರೋಡ್, ಹಡ್ಸನ್ ವೃತ್ತ ಮತ್ತು ಮೆಜೆಸ್ಟಿಕ್ಗೆ ತೆರಳಿ ವೀಕೆಂಡ್ ಕರ್ಫ್ಯೂ ಪರಿಶೀಲನೆ ನಡೆಸಿದರು.
ಕಮಿಷನರ್ ಜೊತೆಗೆ ಸಿಟಿ ರೌಂಡ್ಸ್ ನೆಡೆಸಿದ ಗೃಹ ಸಚಿವ ಆರಗ ಜ್ಞಾನೇಂದ್ರ ತುಮಕೂರು ರಸ್ತೆಯ ಗೊರಗುಂಟೆಪಾಳ್ಯ ಜಂಕ್ಷನ್‌ನಲ್ಲಿ ನಿಂತಿದ್ದ ಪ್ರಯಾಣಿಕರನ್ನು ಮಾತಾಡಿಸಿದರು. ಗೃಹ ಸಚಿವರಿಗೆ ನಗರ ಪೊಲೀಸ್ ಆಯುಕ್ತ ಕಮಲ್ ಪಂತ್, ಹೆಚ್ಚುವರಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಸಿಟಿ ರೌಂಡ್ಸ್ಗೆ ಸಾಥ್ ನೀಡಿದರು.ಪೊಲೀಸರಿಗೆ ಆತ್ಮ ವಿಶ್ವಾಸ ತುಂಬಲು ಸಿಟಿ ರೌಂಡ್ಸ್: ಸಿಟಿ ರೌಂಡ್ಸ್ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಆರಗ ಜ್ಞಾನೇಂದ್ರ, ಬೆಂಗಳೂರು ಪ್ರಮುಖ ಸ್ಥಳಗಳಿಗೆ ಭೇಟಿ ನೀಡಿದ್ದು, ಪೊಲೀಸರಿಗೆ ಆತ್ಮ ವಿಶ್ವಾಸ ತುಂಬುವ ನಿಟ್ಟಿನಲ್ಲಿ ರೌಂಡ್ಸ್ ಹಾಕಿದೆ. ಜನ ಕಫ್ಯೂ ನಿಬಂಧನೆಗಳಿಗೆ ಗೌರವ ಕೊಟ್ಟಿದ್ದಾರೆ. ನನಗೆ ತುಂಬಾ ಸಂತೋಷವಾಗಿದೆ ಎಂದರು.1200 ಕ್ಕೂ ಹೆಚ್ಚು ವಾಹನ ಸೀಜ್: ಇನ್ನು ಕರ್ಫ್ಯೂ ನಿಯಮ ಉಲ್ಲಂಘಿಸಿದ ಕಾರಣಕ್ಕೆ 1200 ಕ್ಕೂ ಹೆಚ್ಚು ವಾಹನಗಳನ್ನು ಸೀಜ್ ಮಾಡಲಾಗಿದೆ. ಜನರು ತಮ್ಮ ಆರೋಗ್ಯ ದ ಕಡೆ ಹೆಚ್ಚು ಗಮನ ಕೊಡಬೇಕು. ಎರಡನೇ ಅಲೆಯಲ್ಲಿ ತುಂಬಾ ಜನರು ಪ್ರಾಣ ಕಳೆದುಕೊಂಡಿದ್ದಾರೆ. ಹಾಗಾಗಿ ಎರಡನೇ ಅಲೆಯಲ್ಲಿ ಆದ ತೊಂದರೆ ಈ ಸಂದರ್ಭದಲ್ಲಿ ಅಗಬಾರದ ಅನ್ನೋ ನಿಟ್ಟಿನಲ್ಲಿ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದರು.ಪಾದಯಾತ್ರೆ ಮಾಡಲು ಟೈಂ ಅಲ್ಲ:
ಮೇಕೆದಾಟು ಯೋಜನೆಗಾಗಿ ನಾಳೆ ಕಾಂಗ್ರೆಸ್‌ನಿಂದ ಪಾದಯಾತ್ರೆ ವಿಚಾರವಾಗಿ ಆರಗ ಜ್ಞಾನೇಂದ್ರ ಪ್ರತಿಕ್ರಿಯೆ ನೀಡುತ್ತಾ ಪಾದಯಾತ್ರೆ ಬೆಂಗಳೂರಿನಲ್ಲಿ ಇಲ್ಲ ಎಂದು ಹೇಳಿದ್ದಾರೆ. ಪಾದಯಾತ್ರೆ ಮುಂದೂಡುವಂತೆ ನಾವು ಮನವಿ ಮಾಡುತ್ತೇವೆ. ಪ್ರತಿಭಟಿಸಲು ಎಲ್ಲರಿಗೂ ಅವಕಾಶವಿದೆ, ಆದರೆ ಇದು ಟೈಂ ಅಲ್ಲ ಎಂದು ಹೇಳಿದರು.
ಇದನ್ನೂ ಓದಿ:ಮೇಕೆದಾಟು ಯೋಜನೆ ಅನುಷ್ಠಾನಕ್ಕೆ ನೂರೆಂಟು ವಿಘ್ನ; ಮೇಕೆದಾಟು ಯೋಜನೆಯ ಕಾಲಾನುಕ್ರಮ ಪ್ರಗತಿ ಹೇಗಿದೆ ನೋಡಿ