ETV Bharat / city

ಎಬಿವಿಪಿ ಪ್ರತಿಭಟನೆ ವಿಚಾರ: ಸಿದ್ದರಾಮಯ್ಯ ಸರ್ಟಿಫಿಕೇಟ್​ ನನಗೆ ಬೇಕಿಲ್ಲ,  ತಿರುಗೇಟು ಕೊಟ್ಟ ಆರಗ ಜ್ಞಾನೇಂದ್ರ - ಸಿದ್ದರಾಮಯ್ಯಗೆ ಆರಗ ಜ್ಞಾನೇಂದ್ರ ತಿರುಗೇಟು

ಗೃಹ ಸಚಿವರ ಮನೆಯ ಮುಂದೆ ನಡೆದ ಪ್ರತಿಭಟನೆಯನ್ನು ವ್ಯಂಗ್ಯವಾಡಿದ ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಆರಗ ಜ್ಞಾನೇಂದ್ರ ತಿರುಗೇಟು ಕೊಟ್ಟಿದ್ದಾರೆ.

home-minister-aaraga-jnanedra
ಗೃಹ ಸಚಿವ
author img

By

Published : Jul 30, 2022, 2:10 PM IST

ಶಿವಮೊಗ್ಗ: ಗೃಹ ಸಚಿವರ ಮನೆ ಮುಂದೆ ಎಬಿವಿಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದನ್ನು ವ್ಯಂಗ್ಯವಾಡಿದ ಮಾಜಿ ಸಿಎಂ ಸಿದ್ದರಾಮಯ್ಯಗೆ ಗೃಹ ಸಚಿವ ಆರಗ ಜ್ಞಾನೇಂದ್ರ ಶಿವಮೊಗ್ಗದಲ್ಲಿ ತಿರುಗೇಟು ನೀಡಿದರು. ಸೈದ್ಧಾಂತಿಕವಾಗಿ ನಾವೆಲ್ಲ ಒಂದಾಗಿದ್ದೇವೆ. ಮನೆ ಬಳಿ ಬಂದು ಎಬಿವಿಪಿಯವರು ಪ್ರತಿಭಟನೆ ನಡೆಸಿದ್ದಾರೆ. ಪಿಎಫ್​ಐ, ಎಸ್​ಡಿಪಿಐ ಸೇರಿದಂತೆ ಮತೀಯ ಸಂಘಟನೆಗಳನ್ನು ನಿಷೇಧಿಸುವಂತೆ ಹೋರಾಟ ಮಾಡಿದ್ದಾರೆ. ನಮ್ಮಲ್ಲಿ ಬಾಡಿಗೆ ಹಣಕ್ಕೆ ಇರುವಂತ ಕಾರ್ಯಕರ್ತರಿಲ್ಲ‌. ಅವರ ಬೇಡಿಕೆಯನ್ನು ಪರಿಗಣಿಸಲಾಗುವುದು ಎಂದು ಗೃಹ ಸಚಿವರು ತಿಳಿಸಿದರು.

ಒಬ್ಬ ಕಾರ್ಯಕರ್ತರಾಗಿ ಬೆಳೆಯಲು ಸಾಕಷ್ಟು ವರ್ಷ ಬೇಕು. ಬಡವನಾದರೂ ಆತ ಪಕ್ಷಕ್ಕೆ ಹಾಗೂ ಸಂಘಟನೆಗೆ ಒತ್ತು‌ನೀಡುತ್ತಾನೆ. ಇಂಥ ಕಾರ್ಯಕರ್ತನನ್ನು ಕಳೆದುಕೊಂಡಾಗ ನೋವಾಗುವುದು ಸಹಜ. ಆಗ ಆಕ್ರೋಶವೂ ವ್ಯಕ್ತವಾಗುತ್ತದೆ. ಸಿದ್ದರಾಮಯ್ಯ ಅವರು ಸಿಎಂ ಆದ ಬಳಿಕ ಮತಾಂಧ ಶಕ್ತಿಗಳ ಮೇಲಿದ್ದ 2000 ಕೇಸ್ ಹಿಂಪಡೆದರು. ಟಿಪ್ಪು ಜಯಂತಿ ಆರಂಭಿಸುವ ಮೂಲಕ ರಕ್ತಪಾತ ಮಾಡಿಸಿದರು. ವೋಟ್ ಬ್ಯಾಂಕ್​ಗಾಗಿ ಯಾರ್ಯಾರನ್ನೋ ಬೆಳೆಸಿದ್ದಾರೆ. ನಮ್ಮ ಮನೆ ಎದುರು ಪ್ರತಿಭಟನೆ ನಡೆಸಿದರು ಎಂದಾಕ್ಷಾಣ ಅವರು ಕಾಂಗ್ರೆಸ್ ಜೊತೆಗೆ ಹೋಗುವುದಿಲ್ಲ ಎಂದರು.

ಕಾಂಗ್ರೆಸ್​ ಅಸಹ್ಯ ತೊಳೆಯಲು ಟೈಂ ಬೇಕು: ಸಿದ್ದರಾಮಯ್ಯ ಸರ್ಕಾರವಿದ್ದಾಗ ದುಷ್ಕೃತ್ಯ ನಡೆದರೆ ಕೇಸನ್ನೇ‌ ದಾಖಲಿಸುತ್ತಿರಲಿಲ್ಲ. ಹರ್ಷ ಹತ್ಯೆ ಪ್ರಕರಣದಲ್ಲಿ ಆರೋಪಿಗಳು ಆರಾಮಾಗಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು. ಹೀಗಾಗಿ ಜೈಲಿನ ಮೇಲೆ‌ ದಾಳಿ ನಡೆಸಿ 15 ಜನರನ್ನು ಸಸ್ಪೆಂಡ್ ಮಾಡಿದ್ದೇವೆ. ಅಧಿಕಾರಿಗಳನ್ನು ಬೇರೆಡೆ ವರ್ಗಾವಣೆ ಮಾಡಿದ್ದೇವೆ. ಕಾಂಗ್ರೆಸ್ ಮಾಡಿಟ್ಟಿರುವ ಅಸಹ್ಯವನ್ನು ತೊಳೆಯಲು ಸಮಯ ಹಿಡಿಯುತ್ತಿದೆ ಎಂದು ಟೀಕಿಸಿದರು.

ಸಹಜ ಸ್ಥಿತಿಗೆ ಮಂಗಳೂರು: ಮಂಗಳೂರು ಇದೀಗ ಸಹಜ ಸ್ಥಿತಿಗೆ ಬಂದಿದೆ. ಎಲ್ಲ ರೀತಿಯ ಮುಂಜಾಗ್ರತಾ ಕ್ರಮ ಕೈಗೊಳ್ಳುತ್ತೇವೆ. ಎನ್​ಕೌಂಟರ್​ಗಳು ಹಾಗೂ ಸಾವಿಗೆ ಇನ್ನೊಂದು ಸಾವು ಪರಿಹಾರವಲ್ಲ. ಘಟನೆ ನಡೆದಾಗ ಇಂತಹ ಆಕ್ರೋಶ ಬರುತ್ತದೆ. ಪ್ರಾಣ ತೆಗೆಯುವುದು, ರಕ್ತ ಹರಿಸುವುದು ಹುಡುಗಾಟದ ಮಾತಲ್ಲ. ಇವೆಲ್ಲವೂ ನಿಲ್ಲಬೇಕು. ತ್ವರಿತ ನ್ಯಾಯಾಲಯಕ್ಕೆ ಮನವಿ ಮಾಡುತ್ತಿದ್ದೇವೆ. ಘಟನೆ ಮಾಸುವ ಮುನ್ನವೇ ಕ್ರಮ ಆಗಬೇಕು. ಇದು ಇತರರಿಗೆ ಎಚ್ಚರಿಕೆ ಆಗಲಿದೆ ಎಂದರು.

ಬೆಂಗಳೂರಿನ ನನ್ನ ನಿವಾಸದ ಮೇಲೆ ಮುತ್ತಿಗೆ ಹಾಕಿದವರು ನಮ್ಮವರೇ. ಮನೆಯ ಯಾವುದೇ ಗೇಟ್ ಮುಚ್ಚಿರಲಿಲ್ಲ. ಹೆಚ್ಚಿನ ಭದ್ರತೆಯಿರಲಿಲ್ಲ. ಹೀಗಾಗಿ ಭದ್ರತಾ ಯಾವುದೇ ಲೋಪ ಆಗಿಲ್ಲ ಎಂದು ಆರಗ ಜ್ಞಾನೇಂದ್ರ ಹೇಳಿದರು.

ನಾಲಾಯಕ್​ ನಾನಲ್ಲ: ಆರಗ ಅಸಮರ್ಥ, ನಾಲಾಯಕ್​ ಎಂಬ ಸಿದ್ದರಾಮಯ್ಯ ಟೀಕೆಗೆ ಪ್ರತಿಕ್ರಿಯಿಸಿ, ಸಿದ್ದರಾಮಯ್ಯ ಅವರು ನೀಡುವ ಸರ್ಟಿಫಿಕೇಟ್ ನನಗೆ ಅಗತ್ಯವಿಲ್ಲ. ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಎಷ್ಟು ಮಂದಿ ಕೊಲೆಯಾಗಿತ್ತು? ಅಂದು ಇಡೀ ಪೊಲೀಸ್ ಇಲಾಖೆಯನ್ನು ಕೆಂಪಯ್ಯ ಹಿಡಿತಕ್ಕೆ ನೀಡಲಾಗಿತ್ತು. ಪೊಲೀಸರು ಬೀದಿಗಿಳಿದು ಹೋರಾಟ ನಡೆಸಲು ಮುಂದಾಗಿದ್ದರು. ಇಂತಹ ಸಿದ್ದರಾಮಯ್ಯ ನನ್ನನ್ನು ಅಸಮರ್ಥ ಎನ್ನುತ್ತಾರೆ. ಅವರ ಅಸಮರ್ಥತೆಯಿಂದಾಗಿಯೇ ಅವರ ಕ್ಷೇತ್ರದಲ್ಲಿ ಸೋತಿದ್ದು ಎಂದು ಅಣಕಿಸಿದರು.

ಓದಿ: ಮಿಲಿಯನ್​ ಡಾಲರ್​ ಚಿತ್ರ.. ರೈತನ ಬಡತನದ ನೊಗಕ್ಕೆ ಭುಜ ಕೊಟ್ಟ ತಾಯಿ, ಮಗಳು!

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.