ETV Bharat / city

ಉದ್ಯಮಿ ಬಿ ಆರ್‌ ಶೆಟ್ಟಿ ದಂಪತಿ ಚರಾಸ್ತಿ ವರ್ಗಾವಣೆಗೆ ಹೈಕೋರ್ಟ್ ತಾತ್ಕಾಲಿಕ ತಡೆ.. - ಬ್ಯಾಂಕ್ ಆಫ್ ಬರೋಡ

ಉದ್ಯಮಿ ಬಿ ಆರ್‌ ಶೆಟ್ಟಿ ಅವರು ಯುಎಇಯಲ್ಲಿ ಹೊಂದಿರುವ ತಮ್ಮ ವ್ಯವಹಾರಗಳಿಗಾಗಿ ಬ್ಯಾಂಕ್​ನಿಂದ 2077 ಕೋಟಿ ರೂ. ಸಾಲ ಪಡೆದಿದ್ದು, 2020ರ ಮೇ 5ರ ಪ್ರಕಾರ 1912 ಕೋಟಿ ಪಾವತಿಸಬೇಕಿದೆ. ಅದನ್ನು ಈವರೆಗೆ ಹಿಂದಿರುಗಿಸಿಲ್ಲ ಎಂದು ಬ್ಯಾಂಕ್ ಆಫ್ ಬರೋಡಾ ನಗರದ ವಾಣಿಜ್ಯ ಕೋರ್ಟ್​ನಲ್ಲಿ ದಾವೆ ಹೂಡಿದೆ..

high-court
ಹೈಕೋರ್ಟ್
author img

By

Published : Apr 20, 2021, 8:23 PM IST

ಬೆಂಗಳೂರು : ಉದ್ಯಮಿ ಬಿ ಆರ್‌ ಶೆಟ್ಟಿ ಅವರ ಪತ್ನಿ ಹೊಂದಿರುವ ಬ್ಯಾಂಕ್ ಠೇವಣಿ, ಶೇರು, ಮ್ಯೂಚುಯಲ್ ಫಂಡ್ ಸೇರಿದಂತೆ ಯಾವುದೇ ಚರಾಸ್ತಿಯನ್ನು ವರ್ಗಾವಣೆ ಮಾಡದಂತೆ ಹೈಕೋರ್ಟ್ ತಾತ್ಕಾಲಿಕ ತಡೆಯಾಜ್ಞೆ ನೀಡಿ ಆದೇಶಿಸಿದೆ.

ಉದ್ಯಮಿಯ ಚರಾಸ್ತಿ ವರ್ಗಾವಣೆಗೆ ತಡೆಯಾಜ್ಞೆ ನೀಡಲು ನಿರಾಕರಿಸಿದ ವಾಣಿಜ್ಯ ಕೋರ್ಟ್​ನ ಆದೇಶ ಪ್ರಶ್ನಿಸಿ ಬ್ಯಾಂಕ್ ಆಫ್ ಬರೋಡ ಸಲ್ಲಿಸಿರುವ ವಾಣಿಜ್ಯ ಮೇಲ್ಮನವಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ ಎಸ್ ಓಕ ನೇತೃತ್ವದ ವಿಭಾಗೀಯ ಪೀಠ ಈ ಆದೇಶ ಮಾಡಿದೆ.

ಇದೇ ವೇಳೆ ಸ್ಥಿರಾಸ್ತಿ ವರ್ಗಾವಣೆಗೆ ವಾಣಿಜ್ಯ ಕೋರ್ಟ್ ನೀಡಿರುವ ತಡೆಯಾಜ್ಞೆ ತೆರವು ಮಾಡಲು ನಿರಾಕರಿಸಿರುವ ಪೀಠ, ಚರಾಸ್ತಿಗಳ ಮಾರಾಟ, ಅಡಮಾನ ಸೇರಿ ಯಾವುದೇ ರೀತಿಯ ವರ್ಗಾವಣೆಗೆ ಅನುಮತಿ ಕೋರಿ ಬ್ಯಾಂಕ್‌ಗೆ ಅರ್ಜಿ ಸಲ್ಲಿಸಲು ಶೆಟ್ಟಿ ದಂಪತಿಗೆ ಅವಕಾಶವಿದೆ ಎಂದೂ ಹೈಕೋರ್ಟ್ ಸ್ಪಷ್ಟಪಡಿಸಿದೆ.

ಪ್ರಕರಣದ ಹಿನ್ನೆಲೆ : ಉದ್ಯಮಿ ಬಿ ಆರ್‌ ಶೆಟ್ಟಿ ಅವರು ಯುಎಇಯಲ್ಲಿ ಹೊಂದಿರುವ ತಮ್ಮ ವ್ಯವಹಾರಗಳಿಗಾಗಿ ಬ್ಯಾಂಕ್​ನಿಂದ 2077 ಕೋಟಿ ರೂ. ಸಾಲ ಪಡೆದಿದ್ದು, 2020ರ ಮೇ 5ರ ಪ್ರಕಾರ 1912 ಕೋಟಿ ಪಾವತಿಸಬೇಕಿದೆ. ಅದನ್ನು ಈವರೆಗೆ ಹಿಂದಿರುಗಿಸಿಲ್ಲ ಎಂದು ಬ್ಯಾಂಕ್ ಆಫ್ ಬರೋಡಾ ನಗರದ ವಾಣಿಜ್ಯ ಕೋರ್ಟ್​ನಲ್ಲಿ ದಾವೆ ಹೂಡಿದೆ.

ಈ ಅರ್ಜಿ ವಿಚಾರಣೆ ನಡೆಸಿದ್ದ ವಾಣಿಜ್ಯ ಕೋರ್ಟ್ ಬ್ಯಾಂಕ್ ಕೋರಿಕೆಯಂತೆ ಶೆಟ್ಟಿ ದಂಪತಿಯ ಸ್ಥಿರಾಸ್ತಿಗಳ ವರ್ಗಾವಣೆಗೆ ತಾತ್ಕಾಲಿಕ ತಡೆಯಾಜ್ಞೆ ನೀಡಿ ಮಧ್ಯಂತರ ಆದೇಶ ಹೊರಡಿಸಿದೆ. ಚರಾಸ್ತಿ ವರ್ಗಾವಣೆಗೆ ತಡೆ ನೀಡಲು ನಿರಾಕರಿಸಿದೆ.

ವಾಣಿಜ್ಯ ಕೋರ್ಟ್​ನ ಈ ಆದೇಶ ಪ್ರಶ್ನಿಸಿ ಬ್ಯಾಂಕ್ ಆಫ್ ಬರೋಡಾ ಹೈಕೋರ್ಟ್​ಗೆ ಮೇಲ್ಮನವಿ ಸಲ್ಲಿಸಿದ್ದು, ಇದೀಗ ಹೈಕೋರ್ಟ್ ಚರಾಸ್ತಿ ವರ್ಗಾವಣೆಗೂ ತಾತ್ಕಾಲಿಕ ತಡೆಯಾಜ್ಞೆ ನೀಡಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.