ETV Bharat / city

ಮಾದರಿ ಕಾರಾಗೃಹ ಕೈಪಿಡಿ ಆಧರಿಸಿ ಜೈಲುಗಳ ಸುಧಾರಣೆಗೆ ನಿರ್ದೇಶನ : ಹೈಕೋರ್ಟ್

ಸರ್ಕಾರದ ಪರ ವಕೀಲರು ವಾದಿಸಿ, 2016ರ ಮಾದರಿ ಜೈಲು ಕೈಪಿಡಿ ಆಧರಿಸಿ ರಾಜ್ಯದಲ್ಲಿ ಕಾರಾಗೃಹ ನಿಯಮಗಳಲ್ಲಿ ಅಗತ್ಯ ತಿದ್ದುಪಡಿಗಳನ್ನು ತರಲು ಸರ್ಕಾರ ಕರಡು ಸಿದ್ಧಪಡಿಸಿದೆ. ಆದಷ್ಟು ಬೇಗ ಆ ಕರಡನ್ನು ಅಂತಿಮಗೊಳಿಸಲಾಗುವುದು ಎಂದರು..

author img

By

Published : Aug 6, 2021, 10:06 PM IST

High Court
ಹೈಕೋರ್ಟ್

ಬೆಂಗಳೂರು : ರಾಜ್ಯದಲ್ಲಿನ ಕಾರಾಗೃಹಗಳನ್ನು ಸಮಗ್ರವಾಗಿ ಸುಧಾರಣೆ ಮಾಡುವ ಹಿನ್ನೆಲೆ 2016ರ ಮಾದರಿ ಕಾರಾಗೃಹ ಕೈಪಿಡಿ ಆಧರಿಸಿ ಆ.25ರಂದು ಹಳೆಯ ಕಾನೂನುಗಳನ್ನು ತಿದ್ದುಪಡಿ ಮಾಡುವುದು ಸೇರಿ ರಾಜ್ಯ ಸರ್ಕಾರಕ್ಕೆ ಹಲವು ನಿರ್ದೇಶನಗಳನ್ನು ನೀಡಲಾಗುವುದು ಎಂದು ಹೈಕೋರ್ಟ್ ತಿಳಿಸಿದೆ.

ರಾಜ್ಯದಲ್ಲಿನ ಕಾರಾಗೃಹಗಳ ಸುಧಾರಣೆಗೆ ಸಂಬಂಧಿಸಿದಂತೆ ಕಾನೂನು ಸೇವಾ ಪ್ರಾಧಿಕಾರ ದಾಖಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನ ಇಂದು ಮುಖ್ಯ ನ್ಯಾಯಮೂರ್ತಿ ಎ.ಎಸ್ ಓಕ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.

ಈ ವೇಳೆ ನ್ಯಾಯಾಲಯದ ಹಿಂದಿನ ನಿರ್ದೇಶನದಂತೆ ಕಾನೂನು ಸೇವಾ ಪ್ರಾಧಿಕಾರದ ಪರ ಹಾಜರಾದ ವಕೀಲ ಶ್ರೀಧರ್ ಪ್ರಭು, ಕಾರಾಗೃಹಗಳ ಸ್ಥಿತಿಗತಿ ಸುಧಾರಣೆ ಸಂಬಂಧ ಸುಪ್ರೀಂಕೋರ್ಟ್ ನೀಡಿರುವ ಹಲವು ತೀರ್ಪುಗಳು ಹಾಗೂ 2016ರ ಮಾದರಿ ಜೈಲು ಕೈಪಿಡಿಯನ್ನು ಪೀಠಕ್ಕೆ ಸಲ್ಲಿಸಿದರು.

ಸರ್ಕಾರದ ಪರ ವಕೀಲರು ವಾದಿಸಿ, 2016ರ ಮಾದರಿ ಜೈಲು ಕೈಪಿಡಿ ಆಧರಿಸಿ ರಾಜ್ಯದಲ್ಲಿ ಕಾರಾಗೃಹ ನಿಯಮಗಳಲ್ಲಿ ಅಗತ್ಯ ತಿದ್ದುಪಡಿಗಳನ್ನು ತರಲು ಸರ್ಕಾರ ಕರಡು ಸಿದ್ಧಪಡಿಸಿದೆ. ಆದಷ್ಟು ಬೇಗ ಆ ಕರಡನ್ನು ಅಂತಿಮಗೊಳಿಸಲಾಗುವುದು ಎಂದರು.

ಇದಕ್ಕೆ ಪ್ರತಿಕ್ರಿಯಿಸಿದ ಪೀಠ, ರಾಜ್ಯ ಸರ್ಕಾರ ಸಿದ್ಧಪಡಿಸಿರುವ ಕರಡು ಮತ್ತು ಮಾದರಿ ಜೈಲು ಕೈಪಿಡಿಯನ್ನು ಹೋಲಿಸಿ, ಯಾವ್ಯಾವ ನಿಯಮಗಳಲ್ಲಿ ತಿದ್ದುಪಡಿ ಅಗತ್ಯವಿದೆ. ಯಾವ ತಿದ್ದುಪಡಿಗಳಿಂದ ಇನ್ನೂ ಹೆಚ್ಚಿನ ಸೌಕರ್ಯಗಳನ್ನು ಪರಿಶೀಲಿಸಬಹುದು ಎಂಬ ಬಗ್ಗೆ ಪರಿಶೀಲಿಸುವುದು ಸೂಕ್ತ ಎಂದು ಅಭಿಪ್ರಾಯಪಟ್ಟಿತು.

ಅಲ್ಲದೇ, ಕೈದಿಗಳ ಸಂಬಂಧಿಗಳ ಭೇಟಿಗೆ ಹೆಚ್ಚಿನ ಸೌಲಭ್ಯ ಸೇರಿ ಒಟ್ಟಾರೆ ಜೈಲುಗಳ ಸ್ಥಿತಿಗತಿ ಸುಧಾರಣೆ ಸಂಬಂಧ ಸುಪ್ರೀಂಕೋರ್ಟ್, ಹಲವು ಹೈಕೋರ್ಟ್‌ಗಳು ನೀಡಿರುವ ತೀರ್ಪುಗಳನ್ನು ಆಧರಿಸಿ ಬರುವ ಆಗಸ್ಟ್ 25ರಂದು ರಾಜ್ಯ ಸರ್ಕಾರಕ್ಕೆ ಹಲವು ನಿರ್ದೇಶನಗಳನ್ನು ನೀಡಲಾಗುವುದು ಎಂದು ತಿಳಿಸಿ ವಿಚಾರಣೆ ಮುಂದೂಡಿತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.