ಆನೇಕಲ್: ಚಿನ್ನಾಭರಣ ಹಾಗೂ ದ್ವಿಚಕ್ರ ವಾಹನಗಳ ಕಳವು ಮಾಡುತ್ತಿದ್ದ ಖದೀಮರನ್ನು ಆನೇಕಲ್ ಉಪವಿಭಾಗದ ಹೆಬ್ಬಗೋಡಿ ಪೊಲೀಸರು ಬಂಧಿಸಿ ಜೈಲಿಗೆ ದೂಡಿದ್ದಾರೆ.
ವಿಜಯ್ (22), ಮಂಜುನಾಥ್ (25), ರಜೀಯಾ(28), ಬಾಬಜಾನ್(31) ಬಂಧಿತ ಆರೋಪಿಗಳು. ಆರೋಪಿಗಳಿಂದ 2 ಲಕ್ಷದ 50ಸಾವಿರ ಬೆಲೆ ಬಾಳುವ ಚಿನ್ನಾಭರಣ ಹಾಗೂ 7 ಲಕ್ಷ ಬೆಲೆಯ 7 ದ್ವಿಚಕ್ರ ವಾಹನಗಳನ್ನು ಪೋಲಿಸರು ವಶಕ್ಕೆ ಪಡೆದಿದ್ದಾರೆ.
ಎಲೆಕ್ಟ್ರಾನಿಕ್ ಸಿಟಿ, ಹೆಬ್ಬಗೋಡಿ, ಬೆಳ್ಳಂದೂರು ಸೇರಿದಂತೆ ಹಲವು ಪೋಲಿಸ್ ಠಾಣೆಗಳಲ್ಲಿನ 7 ಪ್ರಕರಣಗಳಲ್ಲಿ ಭಾಗಿಯಾಗಿದ್ದ ಈ ಆರೋಪಿಗಳು ತಲೆಮರೆಸಿಕೊಂಡಿದ್ದರು. ಇದೀಗ ನಾಲ್ವರನ್ನು ಬಂಧಿಸಿ, ವಿಚಾರಿಸಿದಾಗ ಸತ್ಯ ಬಾಯ್ಬಿಟ್ಟಿದ್ದಾರೆ ಎನ್ನಲಾಗಿದೆ.
ಬೆಂಗಳೂರು ಗ್ರಾಮಾಂತರ ಎಸ್ಪಿ ರಾಮ್ ನಿವಾಸ್ ಸೆಪಟ್, ಡಿವೈಎಸ್ಪಿ ನಂಜುಡೇಗೌಡ, ಇನ್ಸ್‌ಪೆಕ್ಟರ್ ಜಗದೀಶ್ ನೇತೃತ್ವದಲ್ಲಿ ಪೊಲೀಸ್ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.