ETV Bharat / city

ಬೆಂಗಳೂರು: ಮನೆಯಲ್ಲೇ ಇದ್ದ ಗರ್ಭಿಣಿಗೂ ತಗುಲಿದ ಕೊರೊನಾ ಸೋಂಕು, ವೈದ್ಯರಿಗೆ ಅಚ್ಚರಿ - ಬೆಂಗಳೂರು ಕೊರೊನಾ ಅಪ್ಡೇಟ್​

ರಾಜ್ಯ ರಾಜಧಾನಿಯಲ್ಲಿಂದು ಮೂರು ಪಾಸಿಟಿವ್​ ಪ್ರಕರಣಗಳು ವರದಿಯಾಗಿದ್ದು, ಆರೋಗ್ಯಾಧಿಕಾರಿಗಳು ಪ್ರಕರಣದ ಹಿನ್ನೆಲೆಗಾಗಿ ತನಿಖೆ ನಡೆಸುತ್ತಿದ್ದಾರೆ. ಅದರಲ್ಲೂ ಗರ್ಭಿಣಿಗೆ ಸೋಂಕು ತಗುಲಿರುವುದು ಅಧಿಕಾರಿಗಳಿಗೆ ದೊಡ್ಡ ತಲೆನೋವಾಗಿದೆ.

Bangalore corona
ಮೂವರು ಸೋಂಕಿತರ ಜಾಡು ಬೆನ್ನತ್ತಿದ ಅಧಿಕಾರಿಗ
author img

By

Published : May 5, 2020, 1:55 PM IST

ಬೆಂಗಳೂರು: ಇದೇ ಮೊದಲ ಬಾರಿಗೆ ಬಿಟಿಎಂ ಲೇಔಟ್ ವಾರ್ಡ್​ನ ಇಕೋಬಾ ನಗರದ ಮೂವತ್ತು ವರ್ಷದ ಗರ್ಭಿಣಿಯಲ್ಲಿ (ರೋಗಿ-652) ಕೊರೊನಾ ಸೋಂಕು ಪತ್ತೆಯಾಗಿದೆ. ಆದ್ರೆ ಪ್ರಯಾಣದ ಇತಿಹಾಸವಿಲ್ಲದೆ, ಮನೆಯಿಂದ ಹೊರಗೂ ಹೋಗದೆ, ಯಾವುದೇ ಕೆಮ್ಮು, ಜ್ವರ ಲಕ್ಷಣಗಳಿಲ್ಲದೆಯೂ ಕೊರೊನಾ ಪತ್ತೆಯಾಗಿದ್ದು, ವೈದ್ಯಾಧಿಕಾರಿಗಳಿಗೆ ಅಚ್ಚರಿ ಮೂಡಿಸಿದೆ.

ಕೊರೊನಾ ವೈರಸ್ ಹೇಗೆ ಹರಡಿರಬಹುದೆಂದು ಅಧಿಕಾರಿಗಳು ಪತ್ತೆಹಚ್ಚುತ್ತಿದ್ದಾರೆ. ಗರ್ಭಿಣಿಯ ರೋಟಿನ್ ಚೆಕಪ್ ವೇಳೆ ಹೆಚ್ಐವಿ ಚೆಕ್​ಗೆ ಕಳಿಸುವ ರೀತಿ ಕೋವಿಡ್-19 ಪರೀಕ್ಷೆ ಮಾಡಿದಾಗ ಪಾಸಿಟಿವ್ ಬಂದಿದೆ‌. ಆ ರಿಪೋರ್ಟ್ ಬಗ್ಗೆಯೂ ಗೊಂದಲವಿದ್ದು, ಮರುಪರೀಕ್ಷೆಗೆ ಕಳಿಸಲಾಗಿದೆ. ಆದರೆ ಮುನ್ನೆಚ್ಚರಿಕೆಯಾಗಿ ಮನೆಮಂದಿಯನ್ನು ಕ್ವಾರಂಟೈನ್ ಮಾಡಲಾಗಿದೆ ಎಂದು ಪೂರ್ವ ವಿಭಾಗದ ಆರೋಗ್ಯಾಧಿಕಾರಿ ಡಾ. ಶಿವಕುಮಾರ್ ತಿಳಿಸಿದ್ದಾರೆ.

positive cases in Bangalore
ಮೂವರು ಸೋಂಕಿತರ ಜಾಡು ಬೆನ್ನತ್ತಿದ ಅಧಿಕಾರಿಗಳು

ಹೊಂಗಸಂದ್ರಕ್ಕೆ ಮತ್ತೆ ಹೊಕ್ಕಿದ ಭೀತಿ...

ಇನ್ನು ಹೊಂಗಸಂದ್ರದ ವಲಸೆ ಕಾರ್ಮಿಕರ ಸೋಂಕಿನಿಂದ ಮತ್ತೊಬ್ಬ ವ್ಯಕ್ತಿಯಲ್ಲಿಯೂ ಕೊರೊನಾ ಸೋಂಕು ಪತ್ತೆಯಾಗಿದೆ. ಜ್ವರ, ಶೀತ ಹಾಗೂ ಕೆಮ್ಮಿನ ಲಕ್ಷಣಗಳಿಂದ ಆಸ್ಪತ್ರೆಗೆ ಪರೀಕ್ಷೆಗೆ ಹೋಗಿದ್ದಾಗ ಈತನಲ್ಲಿ ಸೋಂಕು ಇರುವುದು ದೃಢಪಟ್ಟಿದೆ. 45 ವರ್ಷದ ರೋಗಿ ನಂಬರ್ 654ನೇ ವ್ಯಕ್ತಿ ಗುಜರಿ ಅಂಗಡಿಯಲ್ಲಿ ಲೋಡಿಂಗ್ ಕೆಲಸ ಮಾಡುತ್ತಿದ್ದ. ಈ ವೇಳೆ ವಲಸೆ ಕಾರ್ಮಿಕರ ಜೊತೆ ಸಂಪರ್ಕಕ್ಕೆ ಬಂದಿದ್ದ. ಈತ 419 ನೇ ಕೊರೊನಾ ಸೋಂಕಿತನ ಸಂಪರ್ಕದಿಂದ ಬಂದಿರುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕೊರೊನಾ ಸೋಂಕಿತ ವ್ಯಕ್ತಿ ಹೆಂಡತಿ ಹಾಗೂ ಪುಟ್ಟ ಮಗುವಿನೊಂದಿಗೆ ಮನೆಯಲ್ಲಿ ವಾಸವಾಗಿದ್ದ. ಈಗ ಮನೆಯವರನ್ನು ಕ್ವಾರಂಟೈನ್ ಮಾಡಲಾಗುತ್ತಿದೆ ಎಂದು ಆರೋಗ್ಯಾಧಿಕಾರಿ ಡಾ. ಸುರೇಶ್ ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.