ETV Bharat / city

ನಿರಪರಾಧಿಗೆ ಕಿರುಕುಳ ಆರೋಪ : ಪೊಲೀಸ್ ಅಧಿಕಾರಿಗಳ ಮನವಿ ವಜಾಗೊಳಿಸಿ ಹೈಕೋರ್ಟ್ - ಜೆಎಂಎಫ್‌ಸಿ ಕೋರ್ಟ್ ನಿರ್ದೇಶನ

ಅನಾಮಧೇಯ ವ್ಯಕ್ತಿಗಳ ವಿರುದ್ಧ ಸರಗಳ್ಳತನ ಪ್ರಕರಣ ದಾಖಲಾದಾಗ ಅಮಾಯಕ ಯುವಕನನ್ನು ಠಾಣೆಗೆ ಕರೆದೊಯ್ದಿದ್ದಾರೆ. ಸರ ಕಳೆದುಕೊಂಡ ದೂರುದಾರರು ಕೂಡ ಯುವಕನನ್ನು ಆರೋಪಿ ಎಂದು ಗುರುತಿಸದಿದ್ದರೂ, ಬಂಧನದಲ್ಲಿಟ್ಟು ಹಿಂಸೆ ನೀಡಲಾಗಿದೆ. ಯುವಕನಿಗೆ ಅಪರಾಧ ಹಿನ್ನೆಲೆಯೂ ಇಲ್ಲ ಎಂದು ಪೀಠ ಅಭಿಪ್ರಾಯಪಟ್ಟಿದೆ..

ಹೈಕೋರ್ಟ್
ಹೈಕೋರ್ಟ್
author img

By

Published : Jun 5, 2021, 8:56 PM IST

ಬೆಂಗಳೂರು : ಸರಗಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಅಮಾಯಕ ಯುವಕನನ್ನು ಅಕ್ರಮ ಬಂಧನದಲ್ಲಿಟ್ಟು ಕಿರುಕುಳ ನೀಡಿದ ಆರೋಪದಡಿ ದಾಖಲಿಸಿರುವ ಪ್ರಕರಣವನ್ನು ರದ್ದುಪಡಿಸುವಂತೆ ಕೋರಿ 7 ಮಂದಿ ಪೊಲೀಸ್ ಅಧಿಕಾರಿಗಳು ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾ ಮಾಡಿ ಆದೇಶಿಸಿದೆ.

ತಮ್ಮ ವಿರುದ್ಧ ದಾಖಲಿಸಿರುವ ಎಫ್ಐಆರ್ ಹಾಗೂ ನ್ಯಾಯಾಲಯದ ವಿಚಾರಣಾ ಪ್ರಕ್ರಿಯೆಯನ್ನು ರದ್ದುಪಡಿಸುವಂತೆ ಕೋರಿ ಸಿಐಡಿ ಡಿವೈಎಸ್‌ಪಿ ಎಸ್.ಶಿವಕುಮಾರ್,ಮೈಕೋಲೇಔಟ್ ಠಾಣೆ ಪೊಲೀಸ್ ಇನ್ಸ್‌ಪೆಕ್ಟರ್ ಮುನಿರೆಡ್ಡಿ, ಮುಖ್ಯ ಪೇದೆಗಳಾದ ಬಾಲಾಜಿ ಸಿಂಗ್, ಆನಂದ್, ಟಿ. ವೆಂಕಟೇಶ್, ನಿವೃತ್ತ ಮುಖ್ಯಪೇದೆ ಮುನಿಯಪ್ಪ ಮತ್ತು ಪೊಲೀಸ್ ಜೀಪ್ ಚಾಲಕ ಜಿ. ಮೋಹನ್ ಹೈಕೊರ್ಟ್‌ಗೆ ಕ್ರಿಮಿನಲ್ ಅರ್ಜಿ ಸಲ್ಲಿಸಿದ್ದರು.

ಅರ್ಜಿ ವಿಚಾರಣೆ ನಡೆಸಿದ ನ್ಯಾ. ಹೆಚ್ ಪಿ ಸಂದೇಶ್ ಅವರಿದ್ದ ಏಕಸದಸ್ಯ ಪೀಠ ಪ್ರಕರಣದ ದಾಖಲೆಗಳನ್ನು ಗಮನಿಸಿದರೆ ಯುವಕನನ್ನು ಅಕ್ರಮ ಬಂಧನದಲ್ಲಿಟ್ಟು, ದೈಹಿಕ ಹಿಂಸೆ ನೀಡಿರುವುದು ಕಂಡು ಬರುತ್ತದೆ. ಇದರಿಂದ ನೊಂದ ಯುವಕ ಆತ್ಮಹತ್ಯೆಯಂತಹ ಕಠಿಣ ನಿರ್ಧಾರ ಕೈಗೊಂಡಿದ್ದಾನೆ.

ಅನಾಮಧೇಯ ವ್ಯಕ್ತಿಗಳ ವಿರುದ್ಧ ಸರಗಳ್ಳತನ ಪ್ರಕರಣ ದಾಖಲಾದಾಗ ಅಮಾಯಕ ಯುವಕನನ್ನು ಠಾಣೆಗೆ ಕರೆದೊಯ್ದಿದ್ದಾರೆ. ಸರ ಕಳೆದುಕೊಂಡ ದೂರುದಾರರು ಕೂಡ ಯುವಕನನ್ನು ಆರೋಪಿ ಎಂದು ಗುರುತಿಸದಿದ್ದರೂ, ಬಂಧನದಲ್ಲಿಟ್ಟು ಹಿಂಸೆ ನೀಡಲಾಗಿದೆ. ಯುವಕನಿಗೆ ಅಪರಾಧ ಹಿನ್ನೆಲೆಯೂ ಇಲ್ಲ ಎಂದು ಪೀಠ ಅಭಿಪ್ರಾಯಪಟ್ಟಿದೆ.

ಅಲ್ಲದೆ, ಆರೋಪಿತ ಅಧಿಕಾರಿಗಳ ನಡವಳಿಕೆ ಅಧಿಕಾರ ದುರ್ಬಳಕೆಯಂತೆ ಕಾಣುತ್ತದೆ. ಇಂತಹ ಸಂದರ್ಭದಲ್ಲಿ ಪೂರ್ವಾನುಮತಿ ಪಡೆದು ದೂರು ದಾಖಲಿಸಬೇಕು ಎಂಬ ನಿಯಮ ಕಡ್ಡಾಯವಾಗಿ ಅನ್ವಯಿಸುವುದಿಲ್ಲ. ಆದ್ದರಿಂದ, ಪೊಲೀಸ್ ಅಧಿಕಾರಿಗಳ ವಿರುದ್ಧ ದೂರು ದಾಖಲಿಸಲು ಪೂರ್ವಾನಮತಿ ಪಡೆದಿಲ್ಲ ಎಂಬ ಕಾರಣಕ್ಕೆ ಅವರ ವಿರುದ್ಧದ ಪ್ರಕರಣವನ್ನು ರದ್ದುಪಡಿಸಲು ಸಾಧ್ಯವಿಲ್ಲ ಎಂದು ಆದೇಶಿಸಿ, ಅರ್ಜಿ ವಜಾ ಮಾಡಿದೆ.

ಪ್ರಕರಣದ ಹಿನ್ನೆಲೆ : 2010ರ ಮೇ 14ರಂದು ಚಿಕ್ಕಬಳ್ಳಾಪುರದಲ್ಲಿ ನಡೆದಿದ್ದ ಸರಗಳ್ಳತನ ಪ್ರಕರಣದಲ್ಲಿ ಪೊಲೀಸರು ಮನು ಎಂಬ ಯುವಕನನ್ನು ಬಂಧಿಸಿದ್ದರು. ಎರಡು ದಿನ ಅಕ್ರಮ ಬಂಧನದಲ್ಲಿಟ್ಟು ದೈಹಿಕ ಹಿಂಸೆ ನೀಡಿದ್ದರು. ಇದರಿಂದ ಮಾನಸಿಕ ಮತ್ತು ದೈಹಿಕವಾಗಿ ಕುಗ್ಗಿಹೋಗಿದ್ದ ಮನು ಮನೆಗೆ ಬಂದ ನಂತರ ವಿಷ ಸೇವಿಸಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದ. ಆಸ್ಪತ್ರೆಯಲ್ಲಿ ಏಳು ದಿನ ಚಿಕಿತ್ಸೆ ಪಡೆದು ಗುಣಮುಖನಾಗಿದ್ದ. ಆ ಬಳಿಕ ಯುವಕನ ತಂದೆ ಚಿಕ್ಕಬಳ್ಳಾಪುರದ ಜೆಎಂಎಫ್‌ ಕೋರ್ಟ್‌ನಲ್ಲಿ ಖಾಸಗಿ ದೂರು ದಾಖಲಿಸಿದ್ದರು.

ಜೆಎಂಎಫ್‌ಸಿ ಕೋರ್ಟ್ ನಿರ್ದೇಶನದಂತೆ ಆರೋಪಿತ ಪೊಲೀಸರ ವಿರುದ್ಧ ಚಿಕ್ಕಬಳ್ಳಾಪುರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಈ ಸಂಬಂಧ ಚಿಕ್ಕಬಳ್ಳಾಪುರ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಆರೋಪಿತ ಪೊಲೀಸ್ ಅಧಿಕಾರಿಗಳು ತಮ್ಮ ವಿರುದ್ಧ ದಾಖಲಿಸಿರುವ ದೂರು ಮತ್ತು ಆ ಮೇರೆಗೆ ನ್ಯಾಯಾಲಯ ಕೈಗೊಂಡಿರುವ ವಿಚಾರಣೆ ರದ್ದುಪಡಿಸುವಂತೆ ಕೋರಿ ಹೈಕೋರ್ಟ್‌ಗೆ ಕ್ರಿಮಿನಲ್ ಅರ್ಜಿ ಸಲ್ಲಿಸಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.