ETV Bharat / city

ಐದು ವರ್ಷವಾದ್ರೂ ತೆರಿಗೆ ಕೊರತೆ ನೀಗಿಸದ ಜಿಎಸ್​ಟಿ; ರಾಜ್ಯದ ತೆರಿಗೆ ಸಂಗ್ರಹದ ಪ್ರಗತಿ ಹೇಗಿದೆ? - ಜಿಎಸ್​ಟಿ ತೆರಿಗೆ ಪದ್ಧತಿ

ಜಿಎಸ್​ಟಿ ತೆರಿಗೆ ಪದ್ಧತಿಯಿಂದ ಅಭಿವೃದ್ಧಿಯಲ್ಲಿ ಅಗ್ರಗಣ್ಯವಾಗಿರುವ ಕರ್ನಾಟಕದಂತಹ ರಾಜ್ಯಗಳು ತೆರಿಗೆ ಸಂಗ್ರಹದಲ್ಲಿ ಕುಸಿತ‌ ಕಾಣುವಂತಾಯಿತು. ಇದಕ್ಕಾಗಿ ಕೇಂದ್ರ ಸರ್ಕಾರ ಐದು ವರ್ಷಗಳಿಗೆ ಜಿಎಸ್​ಟಿ ನಷ್ಟ ಪರಿಹಾರ ಕೊಡಲು ನಿರ್ಧರಿಸಿತ್ತು.

Karnataka GST
Karnataka GST
author img

By

Published : Feb 13, 2022, 1:16 AM IST

ಬೆಂಗಳೂರು: ಜಿಎಸ್​ಟಿ ನಷ್ಟ ಪರಿಹಾರ ಈ ಆರ್ಥಿಕ ವರ್ಷಕ್ಕೆ ಅಂತ್ಯವಾಗಲಿದೆ. ಈಗಾಗಲೇ ಕೋವಿಡ್ ಲಾಕ್‌ಡೌನ್​​ನಿಂದ ಆರ್ಥಿಕ ಸಂಕಷ್ಟದಲ್ಲಿರುವ ರಾಜ್ಯ ಸರ್ಕಾರ ಜಿಎಸ್​ಟಿ ನಷ್ಟ ಪರಿಹಾರವನ್ನು ಮುಂದಿನ ಮೂರು ವರ್ಷಕ್ಕೆ ವಿಸ್ತರಿಸಲು ಮನವಿ ಮಾಡಿದೆ. ಅಷ್ಟಕ್ಕೂ ರಾಜ್ಯದಲ್ಲಿನ ಜಿಎಸ್​ಟಿ ತೆರಿಗೆ ಸಂಗ್ರಹದ ಪ್ರಗತಿ ಹಾಗೂ ಆಗುತ್ತಿರುವ ನಷ್ಟ ಏನು ಎಂಬ ವರದಿ ಇಲ್ಲಿದೆ.

ಜಿಎಸ್​ಟಿ ಏಕ‌ರೂಪದ ಈ ತೆರಿಗೆ ವ್ಯವಸ್ಥೆಯನ್ನು 2017ರಂದು ದೇಶಾದ್ಯಂತ ಜಾರಿಗೆ ತರಲಾಗಿತ್ತು. ರಾಜ್ಯದಲ್ಲೂ ಜುಲೈ 2017ರಂದು ತೆರಿಗೆ ವ್ಯವಸ್ಥೆಯನ್ನು ಅನುಷ್ಠಾನಗೊಳಿಸಲಾಯಿತು. ಹಳೆಯ ತೆರಿಗೆ ಪದ್ಧತಿ ರದ್ದಾಗಿ ಹೊಸ ಪದ್ಧತಿ ಜಾರಿಗೆ ಬಂತು. ಮೊದಲ ಐದು ವರ್ಷಗಳ ಕಾಲ ಜಿಎಸ್​ಟಿ ಪದ್ಧತಿ ಜಾರಿಯಿಂದ ರಾಜ್ಯ ಸರ್ಕಾರಗಳು ಅನುಭವಿಸುವ ತೆರಿಗೆ ನಷ್ಟವನ್ನು ಭರಿಸಲು ಕೇಂದ್ರ ಸರ್ಕಾರ ನಿರ್ಧರಿಸಿತ್ತು. ಅದರಂತೆ 2021-22ವರೆಗೆ ಕೇಂದ್ರ ಸರ್ಕಾರ ರಾಜ್ಯಗಳಿಗೆ ಜಿಎಸ್​ಟಿ ನಷ್ಟ ಪರಿಹಾರ ನೀಡಲು ತೀರ್ಮಾನಿಸಿತ್ತು.

ಜಿಎಸ್​ಟಿ ತೆರಿಗೆ ಪದ್ಧತಿಯಿಂದ ಅಭಿವೃದ್ಧಿಯಲ್ಲಿ ಅಗ್ರಗಣ್ಯವಾಗಿರುವ ಕರ್ನಾಟಕದಂತಹ ರಾಜ್ಯಗಳು ತೆರಿಗೆ ಸಂಗ್ರಹದಲ್ಲಿ ಕುಸಿತ‌ ಕಾಣುವಂತಾಯಿತು. ಇದಕ್ಕಾಗಿ ಕೇಂದ್ರ ಸರ್ಕಾರ ಐದು ವರ್ಷಗಳಿಗೆ ಜಿಎಸ್​ಟಿ ನಷ್ಟ ಪರಿಹಾರ ಕೊಡಲು ನಿರ್ಧರಿಸಿತ್ತು. ನಷ್ಟ ಪರಿಹಾರ ನೀಡಲು 2015-16ರ ಆರ್ಥಿಕ ವರ್ಷವನ್ನು ಜಿಎಸ್​​ಟಿ ತೆರಿಗೆ ಪದ್ಧತಿ ಜಾರಿ ಬಳಿಕ ಉಂಟಾಗುವ ತೆರಿಗೆ ಕೊರತೆ ಭರಿಸುವಾಗಿನ ಮಾನದಂಡವಾಗಿ ಪರಿಗಣಿಸಲಾಯಿತು.ಅದಕ್ಕನುಗುಣವಾಗಿ ತೆರಿಗೆ ಕೊರತೆ ಭರಿಸಲು ನಷ್ಟ ಪರಿಹಾರ ನೀಡುವ ಭರವಸೆಯನ್ನು ನೀಡಿತು. ಅದರಂತೆ 2015-16ರ ಆದಾಯವನ್ನು 36,144 ಕೋಟಿ ರೂ. ಎಂದು ಲೆಕ್ಕಹಾಕಲಾಯಿತು. 2022 ಮಾರ್ಚ್​​ಗೆ ನಷ್ಟ ಪರಿಹಾರ ಅಂತ್ಯವಾಗಲಿದೆ. ಈ ನಷ್ಟ ಪರಿಹಾರ ಮೊತ್ತ ಕೊಡುವುದನ್ನು ಮುಂದಿನ ಮೂರು ವರ್ಷಗಳಿಗೆ ವಿಸ್ತರಿಸಲು ಸಿಎಂ ಬೊಮ್ಮಾಯಿ ಕೇಂದ್ರಕ್ಕೆ‌‌ ಮನವಿ ಮಾಡಿದ್ದಾರೆ.

ಜಿಎಸ್​ಟಿ ಸಂಗ್ರಹದ ಪ್ರಗತಿ ಹೇಗಿದೆ?: 2017-18ರ ಜುಲೈನಲ್ಲಿ ಜಿಎಸ್​ಟಿ ಅನುಷ್ಠಾನವಾಗಿತ್ತು.‌ 2017-18ರಲ್ಲಿ ಕರ್ನಾಟಕ 24,182 ಕೋಟಿ ರೂ. ಮಾತ್ರ ಸಂಗ್ರಹ ಮಾಡಿತ್ತು. 2018-19ರಲ್ಲಿ ಸಂಗ್ರಹ 51,838.19 ಕೋಟಿ ರೂ. ಆಗಿತ್ತು. ಆ ಮೂಲಕ 14% ವೃದ್ಧಿ ಕಂಡಿತ್ತು. ಇನ್ನು 2019-20ರಲ್ಲಿ ಕರ್ನಾಟಕ 56,927.47 ಕೋಟಿ ರೂ. ಸಂಗ್ರಹ ಮಾಡಿ, 10% ವೃದ್ಧಿ ಕಂಡಿತ್ತು. ಇನ್ನು 2020-21ರಲ್ಲಿ ಜಿಎಸ್​ಟಿ ಸಂಗ್ರಹವಾಗಿದ್ದು 65,659.39 ಕೋಟಿ ರೂ. ಅಂದರೆ 15% ವೃದ್ಧಿ ಕಂಡಿತ್ತು. ಇತ್ತ 2021-22ರಲ್ಲಿ ಜನವರಿ ವರೆಗೆ ಜಿಎಸ್​ಟಿ ಸಂಗ್ರಹ 65,964.44 ಕೋಟಿ ರೂ. ಆಗಿದೆ. ಆ ಮೂಲಕ ಸಂಗ್ರಹದಲ್ಲಿ 28.73% ವೃದ್ಧಿ ಕಂಡಿತು.ತೆರಿಗೆ ಕೊರತೆಯನ್ನು ನೀಗಿಸಲು ಪ್ರತಿವರ್ಷ ಜಿಎಸ್​ಟಿ ಸಂಗ್ರಹದ ವೃದ್ಧಿ 25-30% ಆಗಿರಬೇಕು. ಆದರೆ, ಐದು ವರ್ಷವಾದರೂ ಜಿಎಸ್​ಟಿ ಸಂಗ್ರಹದಿಂದ ತೆರಿಗೆ ಕೊರತೆ ಸರಿದೂಗಿಸಲು ಕರ್ನಾಟಕಕ್ಕೆ ಸಾಧ್ಯವಾಗುತ್ತಿಲ್ಲ. ಅದಕ್ಕಾಗಿ ಸೊರಗಿದ ಆರ್ಥಿಕತೆ ಹಿನ್ನೆಲೆ ಮುಂದಿನ ಮೂರು ವರ್ಷಗಳ ವರೆಗೆ ನಷ್ಟ ಪರಿಹಾರ ವಿಸ್ತರಿಸಲು ರಾಜ್ಯ ಸರ್ಕಾರ ಬಲವಾಗಿ ಆಗ್ರಹಿಸುತ್ತಿದೆ.

ಜಿಎಸ್​ಟಿ ಪೂರ್ವ ತೆರಿಗೆ ಪಾವತಿದಾರರ ಸಂಖ್ಯೆ 5,84,775 ಆಗಿತ್ತು. ಜಿಎಸ್​ಟಿ ನಂತರ ತೆರಿಗೆ ಪಾವತಿದಾರರ ಸಂಖ್ಯೆ 9,60,260ಗೆ ಏರಿಕೆ ಆಗಿದೆ. ವರ್ಷ ಪ್ರತಿ ಜಿಎಸ್​ಟಿ ಸಂಗ್ರಹದಲ್ಲಿ ವೃದ್ಧಿ ಕಾಣುತ್ತಿದೆ. ಆದರೆ, ನಿಗದಿತ ಸಂರಕ್ಷಿತ ಆದಾಯ ಗುರಿ ಮುಟ್ಟಲು ಆಗುತ್ತಿಲ್ಲ.

ಮುಂದುವರಿದ ಜಿಎಸ್​ಟಿ ತೆರಿಗೆ ಸಂಗ್ರಹ ಕೊರತೆ: ಆರಂಭದಲ್ಲಿ ಐದು ವರ್ಷಗಳಿಗೆ ನಷ್ಟ ಪರಿಹಾರ ನೀಡಲು ಕೇಂದ್ರ ಸರ್ಕಾರ ನಿರ್ಧರಿಸಿತ್ತು. ನಷ್ಟದ ಪ್ರಮಾಣ ಅಂದಾಜಿಸಲು 2015-16ರ ತೆರಿಗೆ ಸಂಗ್ರಹವನ್ನು ಮಾನದಂಡವಾಗಿ ಪರಿಗಣಿಸಲಾಗಿತ್ತು. ಅದರಂತೆ ಐದು ವರ್ಷಗಳ ಕಾಲ ಜಿಎಸ್​ಟಿ ಸಂರಕ್ಷಿತ ಆದಾಯ (GST protected Revenue) ಮೊತ್ತ ನಿಗದಿ ಮಾಡಲಾಯಿತು. ಈ ಮೊತ್ತಕ್ಕಿಂತ ಕಡಿಮೆ ತೆರಿಗೆ ಸಂಗ್ರಹವಾದರೆ ಕೇಂದ್ರ ಸರ್ಕಾರ ಆರಂಭಿಕ ಐದು ವರ್ಷಗಳ ಕಾಲ ಜಿಎಸ್​ಟಿ ನಷ್ಟ ಪರಿಹಾರ ನೀಡುತ್ತಿದೆ.

2017-18ರಲ್ಲಿ ನಿಗದಿಯಾದ ಜಿಎಸ್​ಟಿ ಸಂರಕ್ಷಿತ ಆದಾಯ 46,963 ಕೋಟಿ ರೂ. ಇನ್ನು 2018-19ರಲ್ಲಿ 53,549 ಕೋಟಿ ರೂ., 2019-20ರಲ್ಲಿ 61,046 ಕೋಟಿ ರೂ, 2020-21ರಲ್ಲಿ 69,592 ಕೋಟಿ ರೂ. ಹಾಗೂ 2021-22ಗೆ 79,335 ಕೋಟಿ ರೂ. ಜಿಎಸ್ ಟಿ ಪ್ರೊಟೆಕ್ಟೆಡ್ ರೆವಿನ್ಯೂ ನಿಗದಿ ಮಾಡಲಾಗಿತ್ತು. ಆದರೆ, ಐದು ವರ್ಷ ಪೂರ್ಣವಾದರೂ ಈ ನಿಗದಿತ ಜಿಎಸ್​​ಟಿ ಸಂರಕ್ಷಿತ ಆದಾಯವನ್ನು ತಲುಪಲು ಸಾಧ್ಯವಾಗುತ್ತಿಲ್ಲ. ಅದಕ್ಕಾಗಿ ಮುಂದಿನ ಮೂರು ವರ್ಷಕ್ಕೆ ಜಿಎಸ್​ಟಿ ನಷ್ಟ ಪರಿಹಾರ ಅನಿವಾರ್ಯ ಎಂಬುದು ಸರ್ಕಾರದ ಪ್ರತಿಪಾದನೆಯಾಗಿದೆ. 2017-18ರಲ್ಲಿ ರಾಜ್ಯ 24,182 ಜಿಎಸ್​ಟಿ ಸಂಗ್ರಹ ಮಾಡಲಾಗಿತ್ತು. ಸಂರಕ್ಷಿತ ಆದಾಯ ಸಂಗ್ರಹದ ಮೊತ್ತ 31,312 ಕೋಟಿ ರೂ. ಅಂದರೆ 23% ಕೊರತೆ ಅನುಭವಿಸಿತ್ತು.‌ ಅದಕ್ಕಾಗಿ 6,246 ಕೋಟಿ ರೂ. ನಷ್ಟ ಪರಿಹಾರ ‌ನೀಡಲಾಗಿತ್ತು.ಇನ್ನು 2018-19ರಲ್ಲಿ ರಾಜ್ಯದ ಜಿಎಸ್​ಟಿ ಸಂಗ್ರಹ 51,838.19 ಕೋಟಿ ರೂ. ಆಗಿತ್ತು. ಆದರೆ, ಸಂರಕ್ಷಿತ ಆದಾಯ ಮೊತ್ತ 53,549 ಕೋಟಿ ರೂ.‌ ಆಗಿದೆ.‌

ಈ ಕೊರತೆ ನೀಗಿಸಲು 2018-19ರಲ್ಲಿ ಕೇಂದ್ರ 10,800 ಕೋಟಿ ರೂ. ಜಿಎಸ್​ಟಿ ನಷ್ಟ ಪರಿಹಾರ ನೀಡಿತ್ತು. ಇನ್ನು 2019-20ರಂದು ಕರ್ನಾಟಕ 56,927.47 ಕೋಟಿ ರೂ. ಸಂಗ್ರಹ ಮಾಡಿತ್ತು. ಆದರೆ, ಜಿಎಸ್​ಟಿ ಸಂರಕ್ಷಿತ ಆದಾಯ ಮೊತ್ತ 61,046 ಕೋಟಿ ರೂ. ಮತ್ತೆ ತೆರಿಗೆ ಕೊರತೆ ಎದುರಿಸಿದ ಕರ್ನಾಟಕಕ್ಕೆ ಆ ವರ್ಷ 18,628 ಕೋಟಿ ರೂ. ನಷ್ಟ ಪರಿಹಾರ ಹಂಚಿಕೆಯಾಗಿದೆ.ಇತ್ತ 2020-21ರಲ್ಲಿ ಜಿಎಸ್ ಟಿ ಸಂಗ್ರಹವಾಗಿದ್ದು 65,659.39 ಕೋಟಿ ರೂ. ಅದೇ 2020-21ಗೆ ನಿಗದಿಯಾದ ಜಿಎಸ್ ಟಿ ಸಂರಕ್ಷಿತ ಆದಾಯ ಮೊತ್ತ 69,592 ಕೋಟಿ ರೂ. ಮತ್ತೆ ತೆರಿಗೆ ಸಂಗ್ರಹದಲ್ಲಿ ಕೊರತೆ ಮುಂದುವರಿಯಿತು. ಇನ್ನು 2021-22ರಲ್ಲಿ ಜನವರಿ ವರೆಗೆ ಜಿಎಸ್ ಟಿ ಸಂಗ್ರಹ 65,964.44 ಕೋಟಿ ರೂ. ಆಗಿದೆ. 2021-22ರ GST protected revinue ಮೊತ್ತ 79,335 ಕೋಟಿ ರೂ. ಆಗಿದೆ. ಪ್ರಸಕ್ತ ಆರ್ಥಿಕ ವರ್ಷದಲ್ಲಿ ಇನ್ನೂ ಎರಡು ತಿಂಗಳು ಉಳಿದಿದ್ದರು, ಈ ಗುರಿ ಮುಟ್ಟುವುದು ಕಷ್ಟ ಸಾಧ್ಯ. ಹಾಗಾಗಿ ನಷ್ಟ ಪರಿಹಾರದ ಕೊನೆಯ ವರ್ಷದಲ್ಲೂ ತೆರಿಗೆ ಸಂಗ್ರಹದಲ್ಲಿನ ಕೊರತೆ ಹಾಗೇ ಮುಂದುವರಿದಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.