ಮಹತ್ವಾಕಾಂಕ್ಷೆಯ ಅರ್ಕಾವತಿ ಹಾಗೂ ದಕ್ಷಿಣ ಪಿನಾಕಿನಿ ಪುನಶ್ಚೇತನ ಯೋಜನೆ ಕೈಬಿಟ್ಟ ಸರ್ಕಾರ!
ಬೆಂಗಳೂರು: ಮಹತ್ವಾಕಾಂಕ್ಷೆಯ ಅರ್ಕಾವತಿ ಮತ್ತು ದಕ್ಷಿಣ ಪಿನಾಕಿನಿ ಪುನಶ್ಚೇತನ ಯೋಜನೆಗೆ ಎಳ್ಳುನೀರು ಬಿಡಲು ಸರ್ಕಾರ ಮುಂದಾಗಿದೆ.
ಕಳೆದ ವರ್ಷದ ಬಜೆಟ್‌ನಲ್ಲಿ ಸರ್ಕಾರ ಈ ಮಹತ್ವಾಕಾಂಕ್ಷೆಯ ಯೋಜನೆಯನ್ನು ಘೋಷಣೆ ಮಾಡಿತ್ತು. ಬೆಂಗಳೂರಿನ ಈ ನದಿ ಮೂಲವನ್ನು ಪುನರುಜ್ಜೀವನಗೊಳಿಸುವ ಮೂಲಕ ಸಿಲಿಕಾನ್ ಸಿಟಿಗೆ ಕುಡಿಯುವ ನೀರನ್ನು ಪೂರೈಸುವ ದೂರಗಾಮಿ ಯೋಜನೆ ಇದಾಗಿತ್ತು. ಈ ಎರಡು ನದಿಗಳ ಪುನಶ್ಚೇತನ ಮೂಲಕ ಸುಮಾರು 1400 ಎಂಎಲ್ಡಿ ನೀರು ಲಭ್ಯವಾಗಲಿದೆ. ಸರಿಸುಮಾರು ಕಾವೇರಿ ಯೋಜನೆಯಿಂದ ಪೂರೈಕೆಯಾಗುವ ನೀರಿನ ಪ್ರಮಾಣ ಅದಾಗಿತ್ತು. ಈ ಯೋಜನೆ ಮೂಲಕ ಬೆಂಗಳೂರು ಸುತ್ತ ಮುತ್ತಲಿನ ಕೆರೆ ಪುನಶ್ಚೇತನ ಹಾಗೂ ಬೆಂಗಳೂರಿಗರ ನೀರಿನ ದಾಹವನ್ನೂ ನೀಗಿಸುವ ಉದ್ದೇಶ ಹೊಂದಲಾಗಿತ್ತು.
ಅರ್ಕಾವತಿ ನದಿ ನಂದಿ ಬೆಟ್ಟದಲ್ಲಿ ಹುಟ್ಟಿ, ಮಾಗಡಿ ತಾಲೂಕಿನ ತಿಪ್ಪಗೊಂಡನಹಳ್ಳಿ ಮಾರ್ಗವಾಗಿ ರಾಮನಗರ, ಕನಕಪುರ ಮೂಲಕ ತಮಿಳುನಾಡಿನ ಗಡಿ ಮೇಕೆದಾಟಿನ ಬಳಿ ಕಾವೇರಿ ನದಿಯಲ್ಲಿ ಸಂಗಮಗೊಳ್ಳುತ್ತದೆ. ಬೆಂಗಳೂರು ನಗರದ ಮೂರನೇ ಒಂದು ಭಾಗವು ಅರ್ಕಾವತಿ ಜಲಾನಯನಕ್ಕೆ ಸೇರುತ್ತದೆ. ಅರ್ಕಾವತಿ ನದಿಗೆ ಕುಮುದ್ವತಿ, ವೃಷಭಾವತಿ, ಸುವರ್ಣಮುಖಿ, ಕುಟ್ಟೆ ಹೊಳೆ ಉಪನದಿಗಳಿವೆ. ಅರ್ಕಾವತಿ ನದಿಪಾತ್ರ ನಂದಿ ತಪ್ಪಲು ಪ್ರದೇಶದಿಂದ ದೇವನಹಳ್ಳಿ ದೊಡ್ಡಬಳ್ಳಾಪುರ, ಹೆಸರಘಟ್ಟದ ಮಾರ್ಗವಾಗಿ ತಿಪ್ಪಗೊಂಡನಹಳ್ಳಿ ಜಲಾಶಯದವರೆಗೂ 60 ಕಿ.ಮೀ ವ್ಯಾಪ್ತಿಯಲ್ಲಿದೆ.
ಇನ್ನು ದಕ್ಷಿಣ ಪಿನಾಕಿನಿ ನದಿ ಚಿಕ್ಕಬಳ್ಳಾಪುರ ಜಿಲ್ಲೆಯ ನಂದಿ ಬೆಟ್ಟದಲ್ಲೇ ಉಗಮವಾಗುತ್ತದೆ. ಅಲ್ಲಿಂದ ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಕೋಲಾರದ ಮೂಲಕ ಹಾಯ್ದು ತಮಿಳುನಾಡಿನ ಕುಡಲೂರು ಬಳಿ ಬಂಗಾಳ ಕೊಲ್ಲಿಗೆ ಸೇರಿಕೊಳ್ಳುತ್ತದೆ. ಈ ನದಿ ಸದ್ಯ ಅಳಿವಿನ ಅಂಚಿನಲ್ಲಿದೆ. ಈ ಯೋಜನೆಗಾಗಿ ಸರ್ಕಾರ 50 ಕೋಟಿ ರೂ. ಮೀಸಲಿರಿಸಿತ್ತು. ಜಲಮಂಡಳಿಗೆ ಈ ಯೋಜನೆಯ ಹೊಣೆಗಾರಿಕೆ ನೀಡಲಾಗಿತ್ತು.
ಯೋಜನೆ ಕೈ ಬಿಟ್ಟ ಸರ್ಕಾರ:
ಇದೀಗ ಸರ್ಕಾರ ಈ ಮಹತ್ವಾಕಾಂಕ್ಷೆಯ ಯೋಜನೆಗೆ ತಿಲಾಂಜಲಿ ಹಾಡಲು ಮುಂದಾಗಿದೆ. ಹಣಕಾಸು ಕೊರತೆ ಹಾಗೂ ಡಿಪಿಆರ್ ಸಲ್ಲಿಕೆಯಲ್ಲಿನ ವಿಳಂಬ ಹಿನ್ನೆಲೆ ಸದ್ಯ ಈ ಯೋಜನೆ ಕೈ ಬಿಡಲು ಸರ್ಕಾರ ನಿರ್ಧರಿಸಿದೆ.
ಲಾಕ್‌ಡೌನ್ ಬಳಿಕ ರಾಜ್ಯ ಸರ್ಕಾರ ತೀವ್ರ ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ಹಿನ್ನೆಲೆ ಹೊಸ ಯೋಜನೆಗಳಿಗೆ ಸದ್ಯ ಬ್ರೇಕ್ ಹಾಕ್ತಿದೆ. ಅದರ ಹಿನ್ನೆಲೆಯಲ್ಲೇ ಸರ್ಕಾರ ಅರ್ಕಾವತಿ ಹಾಗೂ ದಕ್ಷಿಣ ಪಿನಾಕಿನಿ ನದಿ ಪುನಶ್ಚೇತನ ಯೋಜನೆಯನ್ನು ಕೈಬಿಡಲು ಮುಂದಾಗಿದೆ.
ಯೋಜನೆಯನ್ನು ಸದ್ಯಕ್ಕೆ ತಡೆ ಹಿಡಿಯಲಾಗಿದೆಯೇ ಅಥವಾ ಕಾಯಂ ಆಗಿ ಯೋಜನೆಗೆ ಎಳ್ಳುನೀರು ಬಿಡಲಾಗಿದೆಯೇ ಎಂಬ ಬಗ್ಗೆ ಸ್ಪಷ್ಟ ಉತ್ತರ ಜಲಮಂಡಳಿ ಅಧಿಕಾರಿಗಳ ಬಳಿ ಇಲ್ಲ. ಯೋಜನೆಗೆ ಭಾರಿ ಪ್ರಮಾಣದ ಹಣಕಾಸು ನೆರವು ಬೇಕಾಗಿದೆ. ಆದರೆ ಸದ್ಯದ ಪರಿಸ್ಥಿತಿಯಲ್ಲಿ ಸರ್ಕಾರಕ್ಕೆ ಯೋಜನೆಗಾಗಿ ಅನುದಾನ ಒದಗಿಸುವುದು ಸಾಧ್ಯವಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಸರ್ಕಾರ ಈ ಮಹತ್ವಾಕಾಂಕ್ಷೆಯ ಹಾಗೂ ದೂರಗಾಮಿ ಯೋಜನೆ ಕೈ ಬಿಡಲು ನಿರ್ಧರಿಸಿದೆ.
ಅರ್ಕಾವತಿ ಹಾಗೂ ದಕ್ಷಿಣ ಪಿನಾಕಿನಿ ಪುನಶ್ಚೇತನ ಯೋಜನೆ ಕೈಬಿಟ್ಟ ಸರ್ಕಾರ!
ಹಣಕಾಸು ಕೊರತೆ ಹಾಗೂ ಡಿಪಿಆರ್ ಸಲ್ಲಿಕೆಯಲ್ಲಿನ ವಿಳಂಬ ಹಿನ್ನೆಲೆ ಸದ್ಯ ಮಹತ್ವಾಕಾಂಕ್ಷೆಯ ಯೋಜನೆ ಕೈ ಬಿಡಲು ಸರ್ಕಾರ ನಿರ್ಧರಿಸಿದೆ.