ETV Bharat / city

ಬಿಬಿಎಂಪಿ ಸಲ್ಲಿಸಿದ್ದ ವಾರ್ಡ್ ಮರು ವಿಂಗಡಣೆ ಕರಡು ವಾಪಸ್ ಕಳುಹಿಸಿದ ಸರ್ಕಾರ.. - BBMP Ward Re Sorting Draft Report

ಬಿಬಿಎಂಪಿ ಯಡವಟ್ಟು ಅಥವಾ ಉದ್ದೇಶ ಪೂರ್ವಕ ತಪ್ಪಿನಿಂದ ವಾರ್ಡ್ ವಿಂಗಡಣೆ ವರದಿ ವಾಪಸ್ ಬಂದಿದೆ. ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಸಲ್ಲಿಸಿದ್ದ ವಾರ್ಡ್ ಮರು ವಿಂಗಡಣೆ ಕರಡನ್ನು ಸರ್ಕಾರ ವಾಪಸ್ ಕಳುಹಿಸಿದೆ ಎಂದು ಬಿಬಿಎಂಪಿ ಆಡಳಿತ ವಿಭಾಗದ ವಿಶೇಷ ಆಯುಕ್ತ ರಂಗಪ್ಪ ತಿಳಿಸಿದ್ದಾರೆ..

ಪಾಲಿಕೆ ವಿಶೇಷ ಆಯುಕ್ತ ರಂಗಪ್ಪ
ಪಾಲಿಕೆ ವಿಶೇಷ ಆಯುಕ್ತ ರಂಗಪ್ಪ
author img

By

Published : Jun 3, 2022, 11:58 AM IST

ಬೆಂಗಳೂರು : ರಾಜ್ಯವೇ ಕುತೂಹಲದಿಂದ ಎದುರು ನೋಡುತ್ತಿರುವ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆಗೆ ತಯಾರಿಯೇನೋ ನಡೆಯುತ್ತಿದೆ. ಆದರೆ, ಬಿಬಿಎಂಪಿ ಯಡವಟ್ಟು ಅಥವಾ ಉದ್ದೇಶ ಪೂರ್ವಕ ತಪ್ಪಿನಿಂದ ವಾರ್ಡ್ ವಿಂಗಡಣೆ ವರದಿ ವಾಪಸ್ ಬಂದಿದೆ.

8 ವಾರಗಳ ಒಳಗಾಗಿ ಚುನಾವಣೆಗೆ ಬೇಕಾದ ಎಲ್ಲಾ ತಯಾರಿ ಮಾಡಿಕೊಳ್ಳುವಂತೆ ಸುಪ್ರೀಂಕೋರ್ಟ್ ಬಿಬಿಎಂಪಿಗೆ ಹೇಳಿದೆ. ಆ ಹಿನ್ನೆಲೆಯಲ್ಲಿ ಒಂದಿಲ್ಲೊಂದು ತಯಾರಿ ಮಾಡಿಕೊಳ್ಳುತ್ತಿರುವ ಬಿಬಿಎಂಪಿ, ವಾರ್ಡ್ ಮರು ವಿಂಗಡಣೆ ಕರಡು ಸಿದ್ಧಪಡಿಸಿದೆ.

198 ಇದ್ದ ವಾರ್ಡ್ ಸಂಖ್ಯೆ 243 ಆಗಿದೆ. ಸರಾಸರಿ 28 ಸಾವಿರ ಮತದಾರರಂತೆ ವಾರ್ಡ್ ವಿಂಗಡಣೆ ಮಾಡಲಾಗಿದೆ. ಆದರೆ, ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಸಲ್ಲಿಸಿದ ವಾರ್ಡ್ ಮರು ವಿಂಗಡಣೆ ಕರಡನ್ನು ಸರ್ಕಾರ ವಾಪಸ್ ಕಳುಹಿಸಿದೆ ಎಂದು ಬಿಬಿಎಂಪಿ ಆಡಳಿತ ವಿಭಾಗದ ವಿಶೇಷ ಆಯುಕ್ತ ರಂಗಪ್ಪ ತಿಳಿಸಿದ್ದಾರೆ.

ವಾರ್ಡ್ ಮರು ವಿಂಗಡಣೆ ಕರಡು ವಾಪಸ್​ ಕುರಿತು ಮಾಹಿತಿ ನೀಡಿದ ಪಾಲಿಕೆ ವಿಶೇಷ ಆಯುಕ್ತ ರಂಗಪ್ಪ

ಬಿಬಿಎಂಪಿ ಕಾಯ್ದೆ ಉಲ್ಲಂಘಿಸಿ ಕರಡು ಪ್ರತಿ : ಸುಪ್ರೀಂಕೋರ್ಟ್ ಆದೇಶ ಧಿಕ್ಕರಿಸಿರುವುದು, 2020 ಬಿಬಿಎಂಪಿ ಕಾಯ್ದೆ ಉಲ್ಲಂಘಿಸಿ ಕರಡು ಸಿದ್ಧಪಡಿಸಿರುವುದು, ಒಂದು ವಾರ್ಡ್ ಎರಡು ವಿಧಾನಸಭಾ ಕ್ಷೇತ್ರಕ್ಕೆ ವಿಂಗಡಣೆ ಆಗದಂತೆ ನೋಡಿಕೊಳ್ಳದಿರೋದು, ಹೀಗೆ ಹಲವು ಲೋಪಗಳನ್ನು ಒಳಗೊಂಡ ವಾರ್ಡ್ ಮರು ವಿಂಗಡಣೆ ಕರಡನ್ನು ಸರ್ಕಾರ ತಿರಸ್ಕರಿಸಿದೆ ಎಂದು ಕಾಂಗ್ರೆಸ್ ಮುಖಂಡ ಅಬ್ದುಲ್ ವಾಜಿದ್ ತಿಳಿಸಿದ್ದಾರೆ.

ಪಾಲಿಕೆ ಅಧಿಕಾರಿಗಳಿಂದ ತಪ್ಪು ಮರೆ ಮಾಚುವ ಕೆಲಸ : ಸರ್ಕಾರಕ್ಕೆ ಸಲ್ಲಿಕೆಯಾಗಿ ವಾಪಸ್ ಬಂದಿರುವ ವಾರ್ಡ್ ಮರು ವಿಂಗಡಣಾ ಕರಡನ್ನು ನಾವು ಸಲ್ಲಿಸಿಯೇ ಇಲ್ಲ. ಇನ್ನೆರಡು ದಿನದಲ್ಲಿ ಸಲ್ಲಿಸಲಾಗುತ್ತದೆ ಎಂದು ತಪ್ಪನ್ನು ಮರೆ ಮಾಚುವ ಕೆಲಸವನ್ನ ಪಾಲಿಕೆ ಅಧಿಕಾರಿಗಳು ಮಾಡುತ್ತಿದ್ದಾರೆ ಎಂದು ವಾಜಿದ್ ದೂರಿದ್ದಾರೆ.

ಇದನ್ನೂ ಓದಿ: ಜೂನ್‌ 6ರೊಳಗೆ ಬೆಂಗಳೂರು ನಗರದ ರಸ್ತೆಗಳು ಗುಂಡಿ ಮುಕ್ತ : ಬಿಬಿಎಂಪಿ ಮುಖ್ಯ ಆಯುಕ್ತ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.