ಬೆಂಗಳೂರು: ಸಾರಿಗೆ ಇಲಾಖೆ ನಷ್ಟಕ್ಕೆ ಈಡಾಗಲು ಸರ್ಕಾರವೇ ಕಾರಣ ಎಂದು ರಾಜ್ಯ ಕಾಂಗ್ರೆಸ್ ಪಕ್ಷ ಆರೋಪ ಮಾಡಿದೆ.
ಸರಣಿ ಟ್ವೀಟ್ ಅಭಿಯಾನದ ಮೂಲಕ ತನ್ನ ಬೇಸರ ಹೊರಹಾಕಿರುವ ಕಾಂಗ್ರೆಸ್ ಪಕ್ಷ, ನಮ್ಮ ಸರ್ಕಾರದಲ್ಲಿ ಸಾರಿಗೆ ಇಲಾಖೆ ಅವಾರ್ಡ್ ಆಫ್ ಎಕ್ಸಲೆನ್ಸ್, ಅಂತಾರಾಷ್ಟ್ರೀಯ ಸಾರ್ವಜನಿಕ ಸಾರಿಗೆ ಪ್ರಶಸ್ತಿ, ಲಿಮ್ಕಾ ದಾಖಲೆ ಸೇರಿದಂತೆ ಹಲವು ರಾಷ್ಟ್ರೀಯ-ಅಂತಾರಾಷ್ಟ್ರೀಯ ಪ್ರಶಸ್ತಿಗಳನ್ನ ಪಡೆದಿತ್ತು. ರಾಜ್ಯ ಬಿಜೆಪಿ ಸರ್ಕಾರದ ಆಡಳಿತದಲ್ಲಿ ಸಾಲಕ್ಕಾಗಿ ಅಡ ಇಡುವ ಸ್ಥಿತಿ ಬಂದಿದ್ದು ದುರಂತ ಎಂದು ಹೇಳಿದೆ.
ಪ್ರತಿಭಟನೆ ಸಾಲು ಸಾಲು: ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚಿಸಿ ಒಂದೇ ವರ್ಷ ಕಳೆಯುವುದರಲ್ಲಿ ಪ್ರತಿಭಟನೆಗಿಳಿದವರು ಆಶಾ ಕಾರ್ಯಕರ್ತೆಯರು, ವೈದ್ಯರು, ಶಿಕ್ಷಕರು, ರೈತರು, ಪೋಷಕರು, ಸಾರಿಗೆ ನೌಕರರು, ಕನ್ನಡಪರ ಕಾರ್ಯಕರ್ತರು, ಕಾರ್ಮಿಕರು, ಅಂಗನವಾಡಿ ಕಾರ್ಯಕರ್ತೆಯರು, ಎಪಿಎಂಸಿ ಕಾರ್ಮಿಕರು. ಇದು ಬಿಜೆಪಿ, ರಾಜ್ಯವನ್ನು ಅರಾಜಕತೆಗೆ ತಳ್ಳಿದ್ದಕ್ಕೆ ಸಾಕ್ಷಿ ಎಂದು ಆರೋಪಿಸಿದೆ.