ETV Bharat / city

ಬಿಪಿಎಲ್ ಕಾರ್ಡ್​ದಾರರಿಗೆ 5 ಕೆಜಿ ಅಕ್ಕಿ ಉಚಿತವಾಗಿ ನೀಡಿ: ಸಿಎಂಗೆ ಡಿಕೆ ಸುರೇಶ್ ಒತ್ತಾಯ - ಬೆಂಗಳೂರು ಸುದ್ದಿ

ಕೊರೊನಾ ಮಹಾಮಾರಿಯಿಂದ ಆರ್ಥಿಕ ಸಂಕಷ್ಟದಲ್ಲಿರುವವರಿಗೆ ಅನುಕೂಲವಾಗುಂತೆ ಒಟ್ಟು 5 ಕೆ.ಜಿ. ಅಕ್ಕಿಯನ್ನು ಬಿಪಿಎಲ್ ಕಾರ್ಡ್‌ನ ಪ್ರತಿ ಯೂನಿಟ್‌ಗೆ ಉಚಿತವಾಗಿ ನೀಡುವಂತೆ ಸಂಸದ ಡಿಕೆ ಸುರೇಶ್ ಒತ್ತಾಯಿಸಿದ್ದಾರೆ.

DK Suresh
DK Suresh
author img

By

Published : Apr 26, 2021, 7:17 PM IST

ಬೆಂಗಳೂರು: ಕೊರೊನಾ 2ನೇ ಅಲೆಯಿಂದ ಆರ್ಥಿಕ ಸಂಕಷ್ಟದಲ್ಲಿರುವ ರಾಜ್ಯದ ಬಿಪಿಎಲ್ ಕಾರ್ಡ್‌ದಾರರ ಪ್ರತಿ ಯೂನಿಟ್‌ಗೆ ಕೇಂದ್ರ ಸರ್ಕಾರ ಘೋಷಿಸಿರುವಂತೆ 5 ಕೆ.ಜಿ. ಅಕ್ಕಿಯನ್ನು ಉಚಿತವಾಗಿ ನೀಡುವಂತೆ ಸಂಸದ ಡಿಕೆ ಸುರೇಶ್ ಒತ್ತಾಯಿಸಿದ್ದಾರೆ.

ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರಿಗೆ ಪತ್ರ ಬರೆದಿರುವ ಸುರೇಶ್, ಕೋವಿಡ್-19 ದೇಶದಲ್ಲಿ ವ್ಯಾಪಕವಾಗಿ ಹರಡುತ್ತಿದ್ದು, ನಮ್ಮ ರಾಜ್ಯದಲ್ಲಿ ಕೂಡ ಈ ವೈರಸ್ ಹೆಚ್ಚಿನ ರೀತಿಯಲ್ಲಿ ಹರಡುತ್ತಿದ್ದು, ಕೋವಿಡ್-19 ನ್ನು ನಿಯಂತ್ರಿಸಲು ರಾಜ್ಯದಲ್ಲಿ ಲಾಕ್‌ಡೌನ್ ಮತ್ತು ಕರ್ಫ್ಯೂಗಳಂತಹ ಕ್ರಮಗಳನ್ನು ಕೈಗೊಂಡಿರುವುದರಿಂದ ಆರ್ಥಿಕ ಸಂಕಷ್ಟದಲ್ಲಿರುವ ಜನಸಾಮಾನ್ಯರಿಗೆ ನಿತ್ಯದ ಆಹಾರಕ್ಕೆ ತುಂಬಾ ತೊಂದರೆಯಾಗುತ್ತಿದೆ ಎಂದಿದ್ದಾರೆ.

ಪ್ರಸ್ತುತ ರಾಜ್ಯದಲ್ಲಿ ಬಿಪಿಎಲ್ ಕಾರ್ಡ್‌ಗಳಿಗೆ ತಿಂಗಳಿಗೆ ಪ್ರತಿ ಯೂನಿಟ್‌ಗೆ ತಲಾ 2 ಕೆ.ಜಿ. ಅಕ್ಕಿ ಹಾಗೂ 3 ಕೆ.ಜಿ. ರಾಗಿ ವಿತರಣೆ ಮಾಡುತ್ತಿದೆ ಎಂದು, ಕೇಂದ್ರ ಸರ್ಕಾರವು ಘೋಷಿಸಿರುವಂತೆ ಪ್ರತಿ ಯೂನಿಟ್‌ಗೆ 5 ಕೆ.ಜಿ. ಅಕ್ಕಿಯನ್ನು ನಿಗದಿಪಡಿಸಿದ್ದು, ತ್ವರಿತವಾಗಿ ಕೇಂದ್ರ ಸರ್ಕಾರದ ನೆರವು ಪಡೆದು ಕೊರೊನಾ ಮಹಾಮಾರಿಯಿಂದ ಆರ್ಥಿಕ ಸಂಕಷ್ಟದಲ್ಲಿರುವವರಿಗೆ ಅನುಕೂಲವಾಗುಂತೆ ಒಟ್ಟು 5 ಕೆ.ಜಿ. ಅಕ್ಕಿಯನ್ನು ಬಿ.ಪಿ.ಎಲ್. ಕಾರ್ಡ್‌ನ ಪ್ರತಿ ಯೂನಿಟ್‌ಗೆ ಉಚಿತವಾಗಿ ನೀಡಲು ಸಂಬಂಧಪಟ್ಟವರಿಗೆ ಸೂಕ್ತ ಆದೇಶ ನೀಡಲು ತಮ್ಮನ್ನು ಕೋರುತ್ತೇನೆ ಎಂದು ಹೇಳಿದ್ದಾರೆ.

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.