ಬೆಂಗಳೂರು: ಜೈಲಿಗೆ ಹೋಗಿ ಬಂದರೂ ಬುದ್ಧಿ ಕಲಿಯದೆ ಮತ್ತೆ ತನ್ನ ಹಳೆ ದಂಧೆಗೆ ಇಳಿದು ಡ್ರ್ಯಾಗರ್ ತೋರಿಸಿ ಸುಲಿಗೆ ಮಾಡುತ್ತಿದ್ದ ರೌಡಿಶೀಟರ್ನನ್ನು ಗಿರಿನಗರ ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ.
ರೌಡಿಶೀಟರ್ ಶಿವಶಂಕರ್ ಅಲಿಯಾಸ್ ಮುದಿ ಶಿವು ಬಂಧಿತ ಆರೋಪಿ. ಮೂಲತಃ ಚಿತ್ರದುರ್ಗದವನಾಗಿದ್ದ ಶಿವಶಂಕರ್ ನಗರದ ಹೊನ್ನಸಂದ್ರದಲ್ಲಿ ವಾಸವಾಗಿದ್ದ. ಲೇಔಟ್ನಲ್ಲಿ ಡ್ಯಾಗರ್ ತೋರಿಸಿ ಹಣ ವಸೂಲಿ ಮಾಡುತ್ತಿದ್ದ. ಇದರಿಂದ ಬೇಸತ್ತ ಜನರು ಈ ಕುರಿತು ದೂರು ನೀಡಿದ್ದರು.
ಇದರಿಂದಾಗಿ ಇತ್ತೀಚೆಗೆ ಜೈಲಿನಿಂದ ರಿಲೀಸ್ ಆಗಿದ್ದ. ಆದ್ರೆ ನಾಯಿ ಬಾಲ ಡೊಂಕು ಎನ್ನುವಂತೆ ಮತ್ತೆ ಹಳೆ ಚಾಳಿಯನ್ನು ಮುಂದುವರೆಸಿದ್ದ. ಸದ್ಯ ಗಿರಿನಗರ ಪೊಲೀಸರು ಆರೋಪಿಯನ್ನು ಬಂಧಿಸಿ ಕೃತ್ಯಕ್ಕೆ ಬಳಸುತ್ತಿದ್ದ ಲಾಂಗು ಹಾಗೂ ಡ್ರ್ಯಾಗರ್ಅನ್ನು ವಶಕ್ಕೆ ಪಡೆದಿದ್ದಾರೆ.