ETV Bharat / city

ಮರಳಿ ಕಾಂಗ್ರೆಸ್​​ ಪಕ್ಷದ ಸದಸ್ಯತ್ವ ಪಡೆದ ಮಾಜಿ ಸ್ಪೀಕರ್​ ರಮೇಶ್​​ ಕುಮಾರ್​​​​ - Ramesh Kumar news

ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅವರಿಗೆ ಮಾಜಿ ಸಿಎಂ ಹಾಗೂ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಮತ್ತಿತರ ನಾಯಕರ ಸಮ್ಮುಖದಲ್ಲಿ ಪಕ್ಷದ ಶಾಲು ಹೊದಿಸಿ ಪಕ್ಷಕ್ಕೆ ಬರಮಾಡಿಕೊಳ್ಳಲಾಯಿತು. ಜೊತೆಗೆ ರಮೇಶ್ ಕುಮಾರ್ ಸಹ ಪಕ್ಷದ ಸದಸ್ಯತ್ವ ಪುಸ್ತಕಕ್ಕೆ ಸಹಿ ಮಾಡಿ ಸದಸ್ಯತ್ವ ಸ್ವೀಕರಿಸಿದರು.

ಮರಳಿ ಪಕ್ಷದ ಸದಸ್ಯತ್ವ ಪಡೆದ ಮಾಜಿ ಸ್ಪೀಕರ್ ರಮೇಶ್ ಕುಮಾರ್
author img

By

Published : Jul 31, 2019, 7:56 PM IST

ಬೆಂಗಳೂರು: ವಿಧಾನಸಭಾಧ್ಯಕ್ಷರಾದ ಹಿನ್ನೆಲೆ ಪಕ್ಷದ ಸದಸ್ಯತ್ವ ಬಿಟ್ಟುಕೊಟ್ಟಿದ್ದ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಇಂದು ಮತ್ತೆ ಕಾಂಗ್ರೆಸ್ ಪಕ್ಷದ ಸದಸ್ಯತ್ವ ಪಡೆದುಕೊಂಡರು.

ಮರಳಿ ಪಕ್ಷದ ಸದಸ್ಯತ್ವ ಪಡೆದ ಮಾಜಿ ಸ್ಪೀಕರ್ ರಮೇಶ್ ಕುಮಾರ್

ಕೆಪಿಸಿಸಿ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅವರಿಗೆ ಮಾಜಿ ಸಿಎಂ ಹಾಗೂ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಮತ್ತಿತರ ನಾಯಕರ ಸಮ್ಮುಖದಲ್ಲಿ ಪಕ್ಷದ ಶಾಲು ಹೊದಿಸಿ ಪಕ್ಷಕ್ಕೆ ಬರಮಾಡಿಕೊಳ್ಳಲಾಯಿತು. ಜೊತೆಗೆ ರಮೇಶ್ ಕುಮಾರ್ ಸಹ ಪಕ್ಷದ ಸದಸ್ಯತ್ವ ಪುಸ್ತಕಕ್ಕೆ ಸಹಿ ಮಾಡಿ ಸದಸ್ಯತ್ವ ಸ್ವೀಕರಿಸಿದರು.

ನಂತರ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಮಾತನಾಡಿ, ಸ್ಪೀಕರ್ ಆದ ನಂತರ ಪಕ್ಷದ ಜೊತೆ ಗುರುತಿಸಿಕೊಳ್ಳುವಂತಿಲ್ಲ. ಹೀಗಾಗಿ ಸದಸ್ಯ ಸ್ಥಾನದಿಂದ ರಮೇಶ್ ಕುಮಾರ್ ಕೆಳಗಿಳಿದಿದ್ದರು. ಇದೀಗ ಸ್ಪೀಕರ್ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ರಾಜೀನಾಮೆ ಬಳಿಕ ಮತ್ತೆ ಪಕ್ಷದ ಸದಸ್ಯತ್ವ ಪಡೆದಿದ್ದಾರೆ. ರಮೇಶ್ ಕುಮಾರ್ ಮಾರ್ಗದರ್ಶನ ಪಕ್ಷಕ್ಕೆ ಅತ್ಯವಶ್ಯಕ . ಅವರ ಸದಸ್ಯತ್ವದಿಂದ ಮತ್ತಷ್ಟು ಬಲ ಬಂದಂತಾಗಿದೆ ಎಂದರು.

ಮಾಜಿ ಸಿಎಂ ಸಿದ್ದರಾಮಯ್ಯ ಮಾತನಾಡಿ, ರಮೇಶ್ ಕುಮಾರ್ ಸಚಿವ ಸ್ಥಾನ, ಸ್ಪೀಕರ್ ಸ್ಥಾನ ಬಯಸಿದವರಲ್ಲ. ನಾವೇ ಚಿಂತನೆ ನಡೆಸಿ ಒಪ್ಪಿಸಿ ಅಧಿಕಾರ ನೀಡಿದ್ದೆವು. 14 ತಿಂಗಳು ಉತ್ತಮವಾಗಿ ಕಾರ್ಯನಿರ್ವಹಿಸಿ, ತಮ್ಮ ಹೆಜ್ಜೆ ಗುರುತನ್ನು ಬಿಟ್ಟು ಹೋಗಿದ್ದಾರೆ. ಅನುಭವಿ ನ್ಯಾಯಾಧೀಶರು ನೀಡುವ ತೀರ್ಪಿನ ಮಾದರಿ ಐತಿಹಾಸಿಕ ತೀರ್ಪು ನೀಡಿದ್ದಾರೆ. ಇದು ರಾಜ್ಯದ ಇತಿಹಾಸದಲ್ಲಿ ಹೆಸರಾಗಿ ಉಳಿಯಲಿದೆ. ಅಧಿಕಾರಕ್ಕಾಗಿ ಹಾತೊರೆಯುವ ಅವಕಾಶವಾದಿ ರಾಜಕಾರಣಿಗಳಿಗೆ ಇವರು ನೀಡಿರುವ ತೀರ್ಪು ಪಾಠ. ಆಂಧ್ರಪ್ರದೇಶದಲ್ಲಿ ಕೂಡ ಇವರ ತೀರ್ಪನ್ನು ಕೊಂಡಾಡಿದ್ದಾರೆ. ಮೋದಿ, ಅಮಿತ್ ಶಾ ಇಡೀ ದೇಶವನ್ನು ಕೇಸರೀಕರಣ ಮಾಡಲು ಮುಂದಾಗಿದ್ದಾರೆ. ಎಲ್ಲಾ ರಾಜ್ಯಗಳಲ್ಲಿ ಶಾಸಕರಿಗೆ ಅಧಿಕಾರ, ಹಣದ ಆಸೆ ತೋರಿಸಿ ಸೆಳೆದಿದ್ದಾರೆ. ಇದಕ್ಕೆ ಬಗ್ಗದವರಿಗೆ ಐಟಿ, ಇಡಿ ಭಯ ಹುಟ್ಟಿಸುತ್ತಿದ್ದರು. ಹಿಂದೆ ಜರ್ಮನಿಯಲ್ಲಿ ಹಿಟ್ಲರ್ ಮಾಡುತ್ತಿದ್ದ ಕೆಲಸ ದೇಶದಲ್ಲಿ ಆರಂಭವಾಗಿದೆ ಎಂದು ದೂರಿದರು.

ರಮೇಶ್ ಕುಮಾರ್ ಮಾತನಾಡಿ, ನಮಗೆ ಕಾಂಗ್ರೆಸ್ ಕೊಡಬೇಕಾದದ್ದು ಏನೂ ಇಲ್ಲ. ನಾವು ಪಕ್ಷಕ್ಕೆ ಏನು ಕೊಡಬೇಕೆಂದು ನೋಡಬೇಕು. ಮಧ್ಯಮ, ಬಡವರ್ಗದವರ ತವರಾಗಿದ್ದ ಕಾಂಗ್ರೆಸ್​ಗೆ ಇಂತಹ ಸ್ಥಿತಿ ಬಂದಿದ್ದಕ್ಕೆ ಬೇಸರವಾಗುತ್ತಿದೆ. ಕಾಂಗ್ರೆಸ್ ಕಾರ್ಯಕರ್ತರಲ್ಲಿ ನೈತಿಕತೆ ಕುಗ್ಗುತ್ತಿದೆ. ಈ ಸ್ಥಿತಿಯಲ್ಲಿ ನಾವು ಪುನಃಶ್ಚೇತನಗೊಳಿಸದಿದ್ದರೆ ಉಳಿಗಾಲವಿಲ್ಲ. ಪ್ರಧಾನಿ ಸ್ಥಾನವೇ ಬೇಡ ಎಂದು ತ್ಯಾಗ ಮಾಡಿದ ಸೋನಿಯಾ ಗಾಂಧಿ ಅವರಂತವರು ಇರುವ ಪಕ್ಷಕ್ಕೆ ಇಂತಹ ಸ್ಥಿತಿ ಬೇಕಾ?. ನನಗೆ ಅಧ್ಯಕ್ಷಗಿರಿ ಬೇಡ ಎಂದು ರಾಹುಲ್ ದೂರ ಸರಿಯುವ ಸ್ಥಿತಿ ಎದುರಾಗಿದೆ. ರಾಜ್ಯ, ದೇಶದಲ್ಲಿ ನಾವು ಮಾಡಿದ ಕೆಲಸ, ತ್ಯಾಗವನ್ನು ಜನರಿಗೆ ತಲುಪಿಸುವಲ್ಲಿ ನಾವು ವಿಫಲವಾಗಿದ್ದೇಕೆ?. ಇಂದು ಅನ್ನಭಾಗ್ಯ, ಕ್ಷೀರ ಭಾಗ್ಯ ನೀಡಿದ ಹೊರತಾಗಿಯೂ ನಮಗೆ ಹಿನ್ನಡೆ ಆಗಿದ್ದು ಹೇಗೆ?. ನಮ್ಮ ಇತಿಹಾಸ, ನಾಯಕರ ತ್ಯಾಗದ ಬಗ್ಗೆ ನಾವೇ ತಿಳಿಯದಿದ್ದರೆ ಹೇಗೆ ಜನರಿಗೆ ತಲುಪಿಸಲು ಸಾಧ್ಯ?. ಕನ್ನಡಿ ಮುಂದೆ ನಿಂತು ಯೋಚಿಸೋಣ. ಪಕ್ಷ ಸಂಘಟನೆಗೆ ಮುಂದಾಗೋಣ. ಉಪ ಚುನಾವಣೆ ಬರುತ್ತಿದೆ. ಅದನ್ನು ಎದುರಿಸಲು ಸಜ್ಜಾಗೋಣ ಎಂದರು.

Intro:newsBody:ಮರಳಿ ಪಕ್ಷದ ಸದಸ್ಯತ್ವ ಪಡೆದ ಮಾಜಿ ಸ್ಪೀಕರ್ ರಮೇಶ್ ಕುಮಾರ್

ಬೆಂಗಳೂರು: ವಿಧಾನಸಭಾಧ್ಯಕ್ಷರಾದ ಹಿನ್ನೆಲೆ ಪಕ್ಷದ ಸದಸ್ಯತ್ವ ಬಿಟ್ಟುಕೊಟ್ಟಿದ್ದ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಇಂದು ಮತ್ತೆ ಕಾಂಗ್ರೆಸ್ ಸದಸ್ಯತ್ವ ಪಡೆದುಕೊಂಡರು.
ಕೆಪಿಸಿಸಿ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಅವರಿಗೆ ಮಾಜಿ ಸಿಎಂ ಹಾಗೂ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಮತ್ತಿತರ ನಾಯಕರ ಸಮ್ಮುಖದಲ್ಲಿ ಪಕ್ಷದ ಶಾಲು ಹೊದೆಸಿ ಪಕ್ಷಕ್ಕೆ ಬರಮಾಡಿಕೊಳ್ಳಲಾಯಿತು. ಪಕ್ಷದ ಸದಸ್ಯತ್ವ ಪುಸ್ತಕಕ್ಕೆ ಸಹಿ ಮಾಡಿ ಸದಸ್ಯತ್ವ ಸ್ವೀಕರಿಸಿದರು.
ಮಾರ್ಗದರ್ಶನ ಅವಶ್ಯ
ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಮಾತನಾಡಿ, ಸ್ಪೀಕರ್ ಆದ ನಂತರ ಪಕ್ಷದ ಜೊತೆ ಗುರ್ತಿಸಿ ಕೊಳ್ಳುವಂತಿಲ್ಲ. ಹೀಗಾಗಿ ಸದಸ್ಯ ಸ್ಥಾನದಿಂದ ರಮೇಶ್ ಕುಮಾರ್ ಕೆಳಗಿಳಿದಿದ್ದರು. ಇದೀಗ ಸ್ಪೀಕರ್ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ರಾಜೀನಾಮೆ ಬಳಿಕ ಮತ್ತೆ ಪಕ್ಷದ ಸದಸ್ಯತ್ವ ಪಡೆದಿದ್ದಾರೆ. ರಮೇಶ್ ಕುಮಾರ್ ಮಾರ್ಗದರ್ಶನ ಪಕ್ಷಕ್ಕೆ ಅತ್ಯವಶ್ಯ. ಅವರ ಸದಸ್ಯತ್ವದಿಂದ ಮತ್ತಷ್ಟು ಬಲಬಂದಂತಾಗಿದೆ.
ಅಧಿಕಾರ ಬಯಸಲಿಲ್ಲ
ಮಾಜಿ ಸಿಎಂ ಸಿದ್ದರಾಮಯ್ಯ ಮಾತನಾಡಿ, ರಮೇಶ್ ಕುಮಾರ್ ಸಚಿವ ಸ್ಥಾನ, ಸ್ಪೀಕರ್ ಸ್ಥಾನ ಬಯಸಿದವರಲ್ಲ, ನಾವೇ ಚಿಂತನೆ ನಡೆಸಿ ಒಪ್ಪಿಸಿ ಅಧಿಕಾರ ನೀಡಿದ್ದೆವು. ಇವರು ಸರ್ಕಾರ ಬದಲಾಗುತ್ತಿದ್ದಂತೆ ಸಮ್ಮಿಶ್ರ ಸರ್ಕಾರ ಇದ್ದಾಗ ಇದ್ದೆ, ಬಿಜೆಪಿ ಸರ್ಕಾರ ಬಂದಾಗ ಒಂದು ಕ್ಷಣ ಅಲ್ಲಿರುವುದಿಲ್ಲ ಕೆಳಗಿಳಿಯುತ್ತೇನೆ ಅಂದರು. ನನ್ನ ಗಮನಕ್ಕೂ ತಂದರು. 14 ತಿಂಗಳು ಉತ್ತಮವಾಗಿ ಕಾರ್ಯನಿರ್ವಹಿದಿ, ತಮ್ಮ ಹೆಜ್ಜೆ ಗುರುತನ್ನು ಬಿಟ್ಟು ಹೋಗಿದ್ದಾರೆ. ಅನುಭವಿ ನ್ಯಾದೀಶರು ನೀಡುವ ತೀರ್ಪಿನ ಮಾದರಿ ಐತಿಹಾಸಿಕ ತೀರ್ಪು ನೀಡಿದ್ದಾರೆ. ಇದು ರಾಜ್ಯದ ಇತಿಹಾಸದಲ್ಲಿ ಹೆಸರಾಗಿ ಉಳಿಯಲಿಗೆ. ಇವರಿಗೆ ಈ ತೀರ್ಪು ನೀಡುವಂತೆ ಒತ್ತಡ ಹೇರಿರಲಿಲ್ಲ. ಇವರ ತೀರ್ಪನ್ನು ಸ್ವಾಗತಿಸಿದ್ದೇವೆ. ಅಧಿಕಾರಕ್ಕಾಗಿ ಅವಕಾಶವಾದಿ ರಾಜಕಾರಣಿಗಳಿಗೆ ಇದು ಪಾಠ. ಆಂದ್ರಪ್ರದೇಶದ ಲ್ಲಿ ಕೂಡ ಇವರ ತೀರ್ಪನ್ನು ಕೊಂಡಾಡಿದ್ದಾರೆ. ಮೋದಿ, ಅಮಿತ್ ಷಾ ಇಡೀ ದೇಶವನ್ನು ಕೇಸರೀಕರಣ ಮಾಡಲು ಮುಂದಾಗಿದ್ದಾರೆ. ಎಲ್ಲಾ ರಾಜ್ಯಗಳಲ್ಲಿ ಶಾಸಕರಿಗೆ ಅಧಿಕಾರ, ಹಣದ ಆಸೆ ತೋರಿಸಿ ಸೆಳೆದಿದ್ದಾರೆ. ಇದಕ್ಕೆ ಬಗ್ಗದವರಿಗೆ ಐಟಿ, ಇಡಿ ಭಯ ಹುಟ್ಟಿಸುತ್ತಿದ್ದರು. ಹಿಂದೆ ಜರ್ಮನಿಯಲ್ಲಿ ಹಿಟ್ಲರ್ ಮಾಡುತ್ತಿದ್ದ ಕೆಲಸ ದೇಶದಲ್ಲಿ ಆರಂಭವಾಗಿದೆ. ಅಧಿಕಾರ ಕೇಂದ್ರೀಕೃತ ಆದರೆ ಸಮಾಜಕ್ಕೆ ಅಪಾಯ. ಮುಂದೆ ಏನಾಗುವುದೋ ಎಂಬ ಆತಂಕ ಕಾಡುತ್ತಿದೆ.
ಸುಪ್ರೀಂ ಕೋರ್ಟ್ ಗೆ‌ಕೂಡ ಇವರು ಕೈ ಹಾಕಿದ್ದಾರೆ ಅಂದರೆ ಆತಂಕ ಆಗುತ್ತದೆ. ತನಿಖಾ ಸಂಸ್ಥೆ ಯಾವುದನ್ನೂ ಬಿಟ್ಟಿಲ್ಲ. ಎಲ್ವನ್ನೂತಮ್ಮ ಕಪಿಮುಷ್ಠಿಯಲ್ಲಿದ್ದಾಗ ಇಂತಹ ಐತಿಹಾಸಿಕ ತೀರ್ಪು ನೀಡುವ ಗುಂಡಿಗೆ, ಗಟ್ಟಿತನ ರಮೇಶ್ ಕುಮಾರ್ ಅವರಲ್ಲಿದೆ ಎಂಬುದಕ್ಕೆ ಸಾಕ್ಷಿ. ಅವರು ಇಂದು ಮತ್ತೆ ಪಕ್ಷದ ಸದಸ್ಯತ್ವ ಪಡೆದುಕೊಂಡಿದ್ದಾರೆ. ದೇವರಾಜ್ ಅರಸು ಕಾಲದಿಂದ ಇದ್ದವರು. ಅಲ್ಲಿಂದ ಇಲ್ಲಿಯವರೆಗೂ ಎಲ್ಲವನ್ನೂ ನೆನಪಿಟ್ಟುಕೊಂಡ ಅನುಭವಿ ಅವರು. ಅವರಿಗೆ ಪಕ್ಷದಲ್ಲಿ ಉತ್ತಮ ಸ್ಥಾನ ಕಲ್ಪಿಸುತ್ತೇವೆ ಎಂದರು.
ಜಗತ್ತಿನಲ್ಲೇ ನಮ್ಮ ಸಾಮಾಜಿಕ ವ್ಯವಸ್ಥೆ ವಿಚಿತ್ರವಾಗಿದೆ. ಅನುಭವ ಇರುವ ಕಾರಣ ಉತ್ತಮ ಪ್ರನಾಳಿಕೆ ನೀಡಿದ್ದರು. ಪಂಚಾಯತ್ ರಾಜ್ ವ್ಯವಸ್ಥೆಯಲ್ಲಿ ಮಾರ್ಪಾಡು ತಂದಿದ್ದರು. ಅವರ ಅನುಭವವನ್ನು ಅಗತ್ಯ ಬಂದಾಗ ಸರಿಯಾದ ರೀತಿ ಬಳಸಿಕೊಳ್ಳುತ್ತೇವೆ. 14 ತಿಂಗಳ ವಿರಾಮದ ನಂತರ ಮರಳಿದ್ದು, ಅವರ ಅನುಭವದ ಸದ್ಬಳಕೆ ಮಾಡಿಕೊಳ್ಳುತ್ತೇವೆ. ನಾವೆಲ್ಲಾ ಕೋಮುವಾದಿ ಪಕ್ಷ ಎದುರಿಸಲು ಸಿದ್ಧರಾಗಬೇಕು. ಅವರು ಏನು ಕೂಡ ಮಾಡಬಹುದು. ದೇಶದಲ್ಲಿ ಅಘೋಷಿತ ತುರ್ತು ಪರಿಸ್ಥಿತಿ ಇದೆ. ಮೂಲಭೂತ ಹಕ್ಕಿನ ಹರಣವಾಗುತ್ಯಿದೆ. ಕೇಸರೀಕರಣವಾದರೆ ಅವಕಾಶ ವಂಚಿತರು ಹೆಚ್ಚಾಗುತ್ತಾರೆ ಎಂದು ಹೇಳಿದರು.
ಪಕ್ಷ ಕಟ್ಟೋಣ
ರಮೇಶ್ ಕುಮಾರ್ ಮಾತನಾಡಿ, ನಮಗೆ ಕಾಂಗ್ರೆಸ್ ಕೊಡಬೇಕಾದ್ದು ಏನೂ ಇಲ್ಲ, ನಾವು ಪಕ್ಷಕ್ಕೆ ಏನುಕೊಡಬೇಕೆಂದು ನೋಡಬೇಕು. ಬಯಕೆ ಇದ್ದರೆ, ದ್ರೋಹ ಮಾಡಿದಂತೆ. ಮಧ್ಯಮ, ಬಡವರ್ಗದವರ ತವರಾಗಿದ್ದ ಕಾಂಗ್ರೆಸ್ ಗೆ ಇಂತ ಸ್ಥಿತಿ ಬಂದಿದ್ದಕ್ಕೆ ಬೇಸರವಾಗುತ್ತಿದೆ. ಕಾಂಗ್ರೆಸ್ ಕಾರ್ಯಕರ್ತರಲ್ಲಿ ನೈತಿಕತೆ ಕುಗ್ಗುತ್ತಿದೆ. ಈ ಸ್ಥಿತಿಯಲ್ಲಿ ನಾವು ಪುನಶ್ಚೇತನ ಗೊಳಿಸದಿದ್ದರೆ ಉಳಿಗಾಲ ಇರಲ್ಲ. ಪ್ರಧಾನಿ ಸ್ಥಾನವೇ ಬೇಡ ಎಂದು ತ್ಯಾಗ ಮಾಡಿದ ಸೋನಿಯಾ ಗಾಂಧಿ ಅವರಂತ ಪಕ್ಷಕ್ಕೆ ಇಂತ ಸ್ಥಿತಿ ಬೇಕಾ? ನನಗೆ ಅಧ್ಯಕ್ಷಗಿರಿ ಬೇಡ ಎಂದು ರಾಹುಲ್ ದೂರ ಸರಿಯುವ ಸ್ಥಿತಿ ಎದುರಾಗಿದೆ. ನಾವು ಇಂತ ಸ್ಥಿತಿ ತರಬೇಕಿತ್ತಾ, ರಾಜ್ಯ, ದೇಶದಲ್ಲಿ ನಾವು ಮಾಡಿದ ಕೆಲಸ, ತ್ಯಾಗವನ್ನು ಜನರಿಗೆ ತಲುಪಿಸುವಲ್ಲಿ ನಾವು ವಿಫಲವಾಗಿದ್ದೇಕೆ? ಇಂದು ಅನ್ನಭಾಗ್ಯ, ಕ್ಷೀರ ಭಾಗ್ಯ ನೀಡಿದ ಹೊರತಾಗಿಯೂ ನಮಗೆ ಹಿನ್ನಡೆ ಆಗಿದ್ದು ಹೇಗೆ, ನಮ್ಮ ಇತಿಹಾಸ, ನಾಯಕರ ತ್ಯಾಗದ ಬಗ್ಗೆ ನಾವೇ ತಿಳಿಯದಿದ್ದರೆ ಹೇಗೆ ಜನರಿಗೆ ತಲುಪಿಸಲು ಸಾಧ್ಯ? ದೇಶ ಒಡೆಯಲು ಮುಂದಾದವರು ದೇಶಭಕ್ತರು, ನಾವು ಬೇಕೂಪರಾಗಿದ್ದೇವೆ. ಯಾಕೆ ಎಲ್ಲಾ ವ್ಯತ್ಯಾಸ ಆಗಿದೆ. ಕನ್ನಡಿ ಮುಂದೆ ನಿಂತು ಯೋಚಿಸೋಣ, ಪಕ್ಷ ಸಂಘಟನೆಗೆ ಮುಂದಾಗೋಣ, ಕಳೆದ 14 ತಿಂಗಳು ನಾವು ಕಳೆದ ರೀತಿ ಬೇರೆ. ಉಪಚುನಾವಣೆ ಬರುತ್ತಿದೆ. ಅದನ್ನು ಎದುರಿಸಲು ಸಜ್ಜಾಗೋಣ, ಅನಗತ್ಯವಾಗಿ ವಾಹನ ಬಳಕೆ ಕಡಿಮೆ ಮಾಡೋಣ, ಭೂತ್ ಮಟ್ಟಕ್ಕೆ ಇಳಿಯೋಣ, ನಮ್ಮ ಕೆಲಸ ಏನಾಗುತ್ತಿದೆ ಎನ್ನುವುದನ್ನು ನಿಲ್ಲಿಸೋಣ. ಆಡಂಬರದ ಬದುಕು ನಮಗೆ ಬೇಡ, ಶೋ ಬೇಡ, ಮತದಾರನಿಗೆ ಹಣ ಕೊಡುವುದೂ ಬೇಡ. ಹತ್ತಿ ಕೋಟಿ ಇದ್ದವನು, 20 ಕೋಟಿ ಮಾಡಲು ನಮ್ಮನ್ನಜ ಬಿಟ್ಟು ಹೋಗೇ ಬಿಟ್ಟ. ಇಂತ ಹಣವಂತರಿಗೆ ಅವಕಾಶ ನೀಡುವುದು ಬೇಡ.
ಆರ್ ಎಸ್ ಎಸ್ ಗೆ ಒಟ್ಟಾಗಿ ಬಾಳುವುದು, ಸಹಬಾಳ್ವೆ ಇಷ್ಟವಿಲ್ಲ. ಜಾತಿ ಆಧಾರದ ಮೇಲೆ ಎಲ್ಲರನ್ನು ಎತ್ತಿಕಟ್ಟುವ ಕಾರ್ಯ ಮಾಡಿದ್ದಾರೆ. ನೆಹರು, ಗಾಂಧಿ ಬಗ್ಗೆ ಅರಿಯದವರು ಮಾತನಾಡುತ್ತಿದ್ದಾರೆ. ಅವರಿಗೆ ಯಾವ ಅನುಭವ ಇದೆ. ನನ್ನ ಅವಕಾಶ, ಶಕ್ತಿ ಇರುವವರೆಗೆ ರಸ್ತೆಯಲ್ಲಿ ನಿಂತು ಸಾಮಾನ್ಯ ಕಾರ್ಯಕರ್ತನಂತೆ ಬದುಕುತ್ತೇನೆ. ನಾನು ಇಷ್ಟು ಆಗಿದ್ದೇನೆ, ಇನ್ನೇನು ಅವಕಾಶ ಸಿಗಬೇಕು ನನಗೆ ಎಂದು ಕೇಳಿದರು.
26 ಕ್ಕೆ 26 ಸ್ಥಾನ ಗೆದ್ದವರು ಒಂದಕ್ಕೆ ತಲುಪಿದ್ದೇವೆ. ಕಾಂಗ್ರೆಸ್ ಗೆ ಆಸ್ತಿಯಾಗುವವರು ಇಲ್ಲಿರಬೇಕು, ಕಾಂಗ್ರೆಸ್ ಅನ್ನು ಆಸ್ತಿ ಮಾಡಿಕೊಳ್ಳುವವರಿಗೆ ಅವಕಾಶ ಬೇಡ. ಕಾರ್ಯಕರ್ತರು ಚುನಾವಣೆಗೆ ಸಿದ್ಧರಾಗೋಣ ಎಂದು ಕರೆ ಕೊಟ್ಟರು.
Conclusion:news
ETV Bharat Logo

Copyright © 2025 Ushodaya Enterprises Pvt. Ltd., All Rights Reserved.