ಬೆಂಗಳೂರು : ಇತ್ತೀಚೆಗಷ್ಟೆ ಸರ್ಕಾರ ಹೊಸ ಬಸ್‌ಗಳನ್ನ ಖರೀದಿಸಲು ಟೆಂಡರ್ ಕರೆದಿದ್ದು, ಈ ವಿಚಾರದ ಕುರಿತು ಮಾಜಿ ಸಚಿವ ಹೆಚ್ ಎಂ ರೇವಣ್ಣ ವ್ಯಂಗ್ಯವಾಡಿದ್ದಾರೆ.
ಓದಿ: ಎಂಟಿಬಿ, ವಿಶ್ವನಾಥ್, ಶಂಕರ್ ಪಕ್ಷ ಬಿಟ್ರೂ ಅವರ ಆಸೆ ಈಡೇರಿಲ್ಲ: ಹೆಚ್.ಎಂ.ರೇವಣ್ಣ ವ್ಯಂಗ್ಯ
ಹಾಲು ಮತ ಸಂಸ್ಕೃತಿ ವೈಭವ 2021 ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಣಕಾಸು ಕೊರತೆ ಇರುವಾಗ ಹೊಸ ಬಸ್ ಖರೀದಿ ಮಾಡಲು ಹೊರಟ ಸರ್ಕಾರದ ಕ್ರಮ ಸರಿಯಿಲ್ಲ. ಇರುವ ಬಸ್ಸುಗಳೇ ಖಾಲಿ ಓಡಾಡುತ್ತಿವೆ, ಇಂಥ ಸಂದರ್ಭದಲ್ಲಿ ಹೊಸ ಬಸ್ ಖರೀದಿ ಅವಶ್ಯಕತೆ ಇತ್ತಾ?.
ರಾಜ್ಯದ ಆರ್ಥಿಕ ಪರಿಸ್ಥಿತಿ ಸರಿಯಿಲ್ಲ, ವಿದ್ಯಾರ್ಥಿ ವೇತನ, ವೃದ್ಧಾಪ್ಯ ವೇತನ ಕೊಡಲು ಸರ್ಕಾರದ ಬಳಿ ಹಣವಿಲ್ಲ. ಆದರೆ, ಬಸ್ ಖರೀದಿಗೆ ಮಾತ್ರ ಹಣ ಇದೆಯಾ ಎಂದು ಪ್ರಶ್ನಿಸಿದರು. ಅಲ್ಲದೇ ಕೋವಿಡ್ ಹೆಸರಿನಲ್ಲಿ ರಾಜ್ಯ ಸರ್ಕಾರ ನಾಟಕ ಆಡುತ್ತಿದೆ ಎಂದು ಮಾಜಿ ಸಚಿವ ರೇವಣ್ಣ ವ್ಯಂಗ್ಯ ವಾಡಿದ್ದಾರೆ.