ETV Bharat / city

ವರ್ಸ್ಟ್, ಕರಪ್ಟ್ ಹಾಗೂ ದುರ್ಬಲ, ಅಸಮರ್ಥ ಸಿಎಂ ಯಡಿಯೂರಪ್ಪ : ಸಿದ್ದರಾಮಯ್ಯ ಆರೋಪ

ಸಿಎಂ ಬದಲಾವಣೆ ಯತ್ನ ಕೊನೆ ಹಂತಕ್ಕೆ ಬಂದಿದೆ ಅಷ್ಟೇ.. ಯಾರೆ ಬಂದರು ಅವರು ದುರ್ಬಲ ಮುಖ್ಯಮಂತ್ರಿಗಳೆ. ಆಡಳಿತದಲ್ಲಿ ವೈಫಲ್ಯ, ಕೊರೊನಾ ನಿಯಂತ್ರಣದಲ್ಲಿ ವಿಫಲ, ಎಲ್ಲವು ಬದಲಾವಣೆಗೆ ಮುಂದಾಗೋಕೆ ಕಾರಣವಾಗಿದೆ..

author img

By

Published : May 26, 2021, 7:11 PM IST

former-cm-siddaramaiah-talk
ಸಿದ್ದರಾಮಯ್ಯ ಆರೋಪ

ಬೆಂಗಳೂರು : ಬಿ.ಎಸ್. ಯಡಿಯೂರಪ್ಪ ಅವರು ವರ್ಸ್ಟ್ ಸಿಎಂ ಜೊತೆಗೆ ದುರ್ಬಲ ಹಾಗೂ ಕರಪ್ಟ್ ಮುಖ್ಯಮಂತ್ರಿ ಕೂಡ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಆರೋಪ ಮಾಡಿದ್ದಾರೆ.

ಸಿೆೆೆೆೆೆೆೆೆೆೆೆೆಎಂ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ..

ಓದಿ: ಬೆಂಗಳೂರು: ವಾಹನ ತಪಾಸಣೆ ವೇಳೆ ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದ ಖದೀಮರು!

ಚಾಮರಾಜಪೇಟೆ ವಿಧಾನಸಭೆ ಕ್ಷೇತ್ರದ ಆಟೋ ಚಾಲಕರಿಗೆ ಪರಿಹಾರ ವಿತರಿಸುವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಶಾಸಕಾಂಗ ಪಕ್ಷದ ಸಭೆಯಲ್ಲಿ ಇವರಿಗೆ ಬಹುಮತ ಇಲ್ಲ.

ಇದೇ ಕಾರಣಕ್ಕೆ ಹೈಕಮಾಂಡ್ ಸಭೆ ಕರಿಯೋಕೆ ಹೇಳಿದ್ದು, ಅವರ ವಿರುದ್ಧ ದೂರುಗಳು ಹೋಗಿವೆ. ಅದಕ್ಕೆ ಸಭೆ ಕರೆಯೋಕೆ ಹೇಳಿದ್ದು, ಯಡಿಯೂರಪ್ಪ ವಿಫಲರಾಗಿದ್ದಾರೆ.

ಸಿಎಂ ಬದಲಾವಣೆ ಯತ್ನ ಕೊನೆ ಹಂತಕ್ಕೆ ಬಂದಿದೆ ಅಷ್ಟೇ.. ಯಾರೇ ಬಂದರು ಅವರು ದುರ್ಬಲ ಮುಖ್ಯಮಂತ್ರಿಗಳೆ. ಆಡಳಿತದಲ್ಲಿ ವೈಫಲ್ಯ, ಕೊರೊನಾ ನಿಯಂತ್ರಣದಲ್ಲಿ ವಿಫಲ ಎಲ್ಲವು ಬದಲಾವಣೆಗೆ ಮುಂದಾಗೋಕೆ ಕಾರಣವಾಗಿದೆ ಎಂದು ಹೇಳಿದರು.

ಮೌಢ್ಯದಿಂದ ಕೊರೊನಾ ಹೋಗುವುದಾದರೆ ವಿಜ್ಞಾನ ಯಾಕೆ ಬೇಕು. ಗಂಟೆ ಬಾರಿಸಿ, ದೀಪ ಹಚ್ಚುವುದರಿಂದ ಕೊರೊನಾ ಹೋಗಲ್ಲ. ಹೋಗುವುದಾದರೆ ಎರಡನೇ ಅಲೆ ಏಕೆ ಬರುತ್ತಿತ್ತು. ಬೆಡ್ ಬ್ಲಾಕಿಂಗ್ ಪ್ರಕರಣದಲ್ಲಿ ಸತೀಶ್ ರೆಡ್ಡಿ ಬೆಂಬಲಿಗರು ಇದ್ದಾರೆ. ಐಎಎಸ್ ಅಧಿಕಾರಿಗಳ ಮೇಲೆ ಸತೀಶ್ ರೆಡ್ಡಿ ಮತ್ತು ಅವರ ಬೆಂಬಲಿಗರು ಹಲ್ಲೆ ಮಾಡಿದ್ದಾರೆ. ಬೆಡ್ ಬ್ಲಾಕಿಂಗ್‌ನಲ್ಲಿ ಸತೀಶ್ ರೆಡ್ಡಿ ಕೈವಾಡವಿದೆ ಎಂದರು.

ಜಮೀರ್ ಅಹ್ಮದ್ ಖಾನ್ ಬೆಡ್ ಬ್ಲಾಕಿಂಗ್ ಪ್ರಕರಣದ ಕುರಿತು ಮಾತನಾಡಿ, ಸಂಸದ ತೇಜಸ್ವಿ ಸೂರ್ಯನ ಮೇಲೆ ಆರೋಪ ಮಾಡಿದ್ದರು. ತೇಜಸ್ವಿ ಸೂರ್ಯ ಅವರ ಆಪ್ತನ ಬಂಧನವಾಗಿದೆ. ಈಗ ತೇಜಸ್ವಿ ಸೂರ್ಯ ಎಲ್ಲಿ ಹೋಗಿದ್ದಾರೆ.

ಪೊಲೀಸ್ ಡಿಪಾರ್ಟ್ಮೆಂಟ್ ಅವರದ್ದೆ, ಆದರೂ ಬಂಧನವಾಗಿದೆ. ಅದಕ್ಕೆ ಸಿಸಿಬಿಯ ಸಂದೀಪ ಪಾಟೀಲ್ ಅವರಿಗೆ ಧನ್ಯವಾದಗಳು ಎಂದರು. ಸಿದ್ದರಾಮಯ್ಯ ಅವರನ್ನು ಚಾಮರಾಜಪೇಟೆಗೆ ಬಂದು ಸ್ಪರ್ಧಿಸಲು ಕರೆಯುತ್ತಿದ್ದೇನೆ. ನಾನು ಅವರನ್ನು ಕರೆಯುತ್ತಿದ್ದು, ಅವರು ಇನ್ನೂ ಒಪ್ಪಿಕೊಂಡಿಲ್ಲ.

ರಾಜ್ಯಕ್ಕೆ ಒಳೆಯದಾಗಲಿ ಎಂದು ಇಲ್ಲಿ ಕರೆಯುತ್ತಿದ್ದೇವೆ. ಅವರು ಮಾಡಿದ ಒಳ್ಳೆಯ ಕೆಲಸದಿಂದ ಗೆಲ್ಲುತ್ತಾರೆ. ಈ ಕ್ಷೇತ್ರದಲ್ಲಿ ಅರ್ಜಿ ಹಾಕಿದರೆ ಸಾಕು ಎಪತ್ತು ಸಾವಿರ ಮತಗಳಿಂದ ಜಯ ಗಳಿಸುತ್ತಾರೆ ಎಂದರು.

ಚಾಮರಾಜಪೇಟೆ ಕ್ಷೇತ್ರಕ್ಕೆ ಕೆಪಿಸಿಸಿ ಅಧ್ಯಕ್ಷರು ಬರದ ವಿಚಾರ ಮಾತನಾಡಿ, ಇಲ್ಲಿಗೆ ಸಿದ್ದರಾಮಯ್ಯ ಮಾತ್ರ ಬರುತ್ತಿಲ್ಲ. ಕೆಪಿಸಿಸಿ ಅಧ್ಯಕ್ಷರು ಹಿಂದೆ ಬಂದಿದ್ದರು, ಆಹಾರ ವಿತರಣೆ ಕಾರ್ಯಕ್ರಮಕ್ಕೆ ಬಂದಿದ್ದರು. ನಾನು ಕ್ಷೇತ್ರದಲ್ಲಿ ಫುಡ್ ವಿತರಣೆ ಮಾಡಿದಾಗ ಬಂದಿದ್ದರು ಎಂದು ವಿವರಣೆ ನೀಡಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.