ETV Bharat / city

ತಂದೆಯಿಂದಲೇ ಫ್ಲಿಪ್​ಕಾರ್ಟ್​ ಡೆಲಿವರಿ ಬಾಯ್​ಗೆ ಸೋಂಕು,ಹೆಚ್ಚಿದ ಆತಂಕ​ - mangammana palya

ಬೆಂಗಳೂರಿನಲ್ಲಿ ಇಂದು ಇಬ್ಬರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಡೆಲಿವರಿ ಬಾಯ್​ಗೂ ಕೂಡಾ ಸೋಂಕು ತಗುಲಿದ್ದು, ಆತನ ತಂದೆಯ ಜೊತೆಗಿನ ಸಂಪರ್ಕದಿಂದಾಗಿ ಕೊರೊನಾ ಹಬ್ಬಿದೆ.

flipkart
ಫ್ಲಿಪ್​ಕಾರ್ಟ್
author img

By

Published : May 6, 2020, 1:57 PM IST

Updated : May 6, 2020, 3:03 PM IST

ಬೆಂಗಳೂರು: ನಗರದ ಹೊಂಗಸಂದ್ರ ವಾರ್ಡ್​​​ನ ಮಂಗಮ್ಮನಪಾಳ್ಯದಲ್ಲಿ ನಿನ್ನೆ ಮೊದಲ ಕೊರೊನಾ ಪ್ರಕರಣ ಪತ್ತೆಯಾಗಿತ್ತು. 654ನೇ ನಂಬರಿನ 45 ವರ್ಷದ ವ್ಯಕ್ತಿಗೆ ಸೋಂಕು ದೃಢಪಟ್ಟಿತ್ತು. ಈ ವೇಳೆ ಆತನ ಮನೆಯವರನ್ನೂ ಕ್ವಾರಂಟೈನ್ ಮಾಡಿ ಚೆಕಪ್​ಗೆ ಕಳಿಸಲಾಗಿತ್ತು. ಕುಟುಂಬದವರ ಸೋಂಕು ಪತ್ತೆ ಪರೀಕ್ಷೆ ನಡೆದಾಗ ಸೋಂಕಿತ ವ್ಯಕ್ತಿಯ 40 ವರ್ಷದ ಪತ್ನಿ (ಪಿ-677) ಹಾಗೂ 25 ವರ್ಷದ ಮಗನಲ್ಲಿ (P-678) ಕೊರೊನಾ ಸೋಂಕು ದೃಢಪಟ್ಟಿದೆ.

25 ವರ್ಷದ ಸೋಂಕಿತ ಫ್ಲಿಪ್​ ಕಾರ್ಟ್​ನಲ್ಲಿ ಡೆಲಿವರಿ ಬಾಯ್​ ಆಗಿ ಕೆಲಸ ಮಾಡುತ್ತಿದ್ದನು. ಇದರಿಂದಾಗಿ ಆತನ ಸಂಪರ್ಕಿತರನ್ನು ಪತ್ತೆ ಹಚ್ಚುವುದು ಬಹುದೊಡ್ಡ ಕೆಲಸವಾಗಿದೆ. ಬಿಬಿಎಂಪಿ ಪಬ್ಲಿಕ್ ನೋಟಿಸ್​​ ಕಳಿಸುವ ಸಾಧ್ಯತೆ ಬಗ್ಗೆ ಕೂಡಾ ಚಿಂತಿಸುತ್ತಿದ್ದು, ಯಾರ ಮನೆಗೆಲ್ಲಾ ಆರ್ಡರ್ ಬಂದಿದೆಯೋ ಅವರನ್ನು ಸೆಲ್ಫ್ ಕ್ವಾರಂಟೈನ್ ಅಥವಾ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಲು ತಿಳಿಸುವ ಬಗ್ಗೆ ಚಿಂತನೆ ನಡೆಸ್ತಿದೆ.

ತಂದೆಗೆ ಗುಜರಿ ಅಂಗಡಿಯ ಸೋಂಕಿತ ವ್ಯಕ್ತಿ ಸಂಪರ್ಕದಿಂದ ಕೊರೊನಾ ತಗುಲಿದ್ದು, ತಂದೆಯಿಂದ ಮಗನಿಗೆ ಈ ಸೋಂಕು ಹರಡಿದೆ. ಸದ್ಯ ಆತನ ಮಗಳು ಸೋಂಕಿನಿಂದ ಬಚಾವಾಗಿದ್ದಾಳೆ. ಜೊತೆಗೆ ಮನೆ ಮಾಲೀಕನ ಮನೆಯಲ್ಲಿದ್ದ ಐವರನ್ನೂ ಕೂಡಾ ಕ್ವಾರಂಟೈನ್ ಮಾಡಿದ್ದು, ಸೋಂಕು ಪತ್ತೆ ಪರೀಕ್ಷೆಯ ರಿಪೋರ್ಟ್ ಬರುವುದು ಬಾಕಿಯಿದೆ.

Last Updated : May 6, 2020, 3:03 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.