ETV Bharat / city

ಮಹೀಂದ್ರ ಲಾಜಿಸ್ಟಿಕ್ಸ್ ಲಿಮಿಟೆಡ್​ನೊಂದಿಗೆ ಒಪ್ಪಂದ ಮಾಡಿಕೊಂಡ ಫ್ಲಿಪ್‌ಕಾರ್ಟ್ - Flipkart contracted with Mahindra Logistics Limited

ಎಂಎಲ್ಎಲ್ ತನ್ನ ಎಲೆಕ್ಟ್ರಿಕ್ ವಿತರಣೆ ಬ್ರ್ಯಾಂಡ್ ಆಗಿರುವ ಇಡಿಇಎಲ್ ಅಡಿ ವಿವಿಧ ಮಾದರಿಯ ಮತ್ತು ವರ್ಗಗಳ ಎಲೆಕ್ಟ್ರಿಕ್ ವಾಹನಗಳನ್ನು ಒಇಎಂಗಳ ಮೂಲಕ ಪಡೆದುಕೊಳ್ಳಲಿದೆ. ಇಡಿಇಎಲ್ ಈಗಾಗಲೇ ಇವಿಗಳನ್ನು ದೊಡ್ಡ ಮಟ್ಟದಲ್ಲಿ ಕಾರ್ಯಾಚರಣೆ ಮಾಡುತ್ತಿದೆ..

Flipkart contracted with Mahindra Logistics Limited
ಮಹೀಂದ್ರ ಲಾಜಿಸ್ಟಿಕ್ಸ್ ಲಿಮಿಟೆಡ್​ನೊಂದಿಗೆ ಒಪ್ಪಂದ ಮಾಡಿಕೊಂಡ ಫ್ಲಿಪ್ ಕಾರ್ಟ್
author img

By

Published : Apr 6, 2021, 7:45 PM IST

ಬೆಂಗಳೂರು : ಫ್ಲಿಪ್‌ ಕಾರ್ಟ್ ಮಹೀಂದ್ರ ಲಾಜಿಸ್ಟಿಕ್ಸ್ ಲಿಮಿಟೆಡ್​ನೊಂದಿಗೆ ಒಪ್ಪಂದ ಮಾಡಿಕೊಂಡಿರುವುದನ್ನು ಇಂದು ಘೋಷಣೆ ಮಾಡಿದೆ. ಈ ಒಪ್ಪಂದದ ಉದ್ದೇಶವೆಂದರೆ ದೇಶಾದ್ಯಂತ ಫ್ಲಿಪ್‌ಕಾರ್ಟ್​ನ ಲಾಜಿಸ್ಟಿಕ್ಸ್​ಗೆ ಎಲೆಕ್ಟ್ರಿಕ್ ವಾಹನಗಳ ನಿಯೋಜನೆ ಮಾಡಿಕೊಳ್ಳುವುದಾಗಿದೆ.

2030ರ ವೇಳೆಗೆ 25,000ಕ್ಕೂ ಅಧಿಕ ಎಲೆಕ್ಟ್ರಿಕ್ ವಾಹನಗಳನ್ನು ನಿಯೋಜನೆ ಮಾಡಿಕೊಳ್ಳುವ ಮೂಲಕ ಸಂಪೂರ್ಣ ಎಲೆಕ್ಟ್ರಿಕ್ ಸಾರಿಗೆ ಅಳವಡಿಸಿಕೊಳ್ಳುವ ಬದ್ಧತೆಯನ್ನು ಫ್ಲಿಪ್ ಕಾರ್ಟ್ ಹೊಂದಿದೆ. ಇದರ ಅಂಗವಾಗಿ ಮಹೀಂದ್ರ ಲಾಜಿಸ್ಟಿಕ್ಸ್ ಜತೆಗೆ ಒಪ್ಪಂದ ಮಾಡಿಕೊಳ್ಳಲಾಗಿದೆ.

ಈ ಮಹೀಂದ್ರ ಲಾಜಿಸ್ಟಿಕ್ಸ್ ವಿವಿಧ ಒಇಎಂಗಳ ಜತೆಗೆ ಮಹತ್ವದ ಪಾತ್ರ ವಹಿಸಲಿದೆ ಮತ್ತು ಫ್ಲಿಪ್‌ಕಾರ್ಟ್‌ನ ಸಾರಿಗೆ ವ್ಯವಸ್ಥೆಯನ್ನು ಸುಸ್ಥಿರ ಸಾರಿಗೆ ವ್ಯವಸ್ಥೆಯಾದ ಇವಿಗಳಿಗೆ ರೂಪಾಂತರಗೊಳ್ಳಲು ಬೆಂಬಲವಾಗಿ ನಿಲ್ಲಲಿದೆ.

ಸುಸ್ಥಿರವಾದ ವ್ಯವಹಾರ ಪದ್ಧತಿಗಳತ್ತ ಪರಸ್ಪರ ಬದ್ಧತೆ ಮತ್ತು ದೂರದೃಷ್ಟಿಯೊಂದಿಗೆ ಮಹೀಂದ್ರ ಲಾಜಿಸ್ಟಿಕ್ಸ್ ತನ್ನದೇ ಸ್ವಂತ ಎಲೆಕ್ಟ್ರಿಕ್ ಡೆಲಿವರಿ ಬ್ರ್ಯಾಂಡ್ ಇಡಿಇಎಲ್‌ 2020ರ ಅಂತ್ಯದ ವೇಳೆಗೆ ಆರಂಭಿಸಿದೆ.

ಇಡಿಇಎಲ್ ಗ್ರಾಹಕ ಕಂಪನಿಗಳು ಮತ್ತು ಈ-ಕಾಮರ್ಸ್ ಕಂಪನಿಗಳೊಂದಿಗೆ ಪಾಲುದಾರಿಕೆ ಹೊಂದಿವೆ. ಭಾರತದಲ್ಲಿನ ಆರು ನಗರಗಳಲ್ಲಿನ ಕಟ್ಟಕಡೆಯ ಗ್ರಾಹಕನಿಗೂ ವಿತರಣೆ ಸೇವೆ ಒದಗಿಸುತ್ತಿದೆ.

ಇಡಿಇಎಲ್ ಮೂಲಕ ಎಂಎಲ್ಎಲ್ ಫ್ಲಿಪ್‌ಕಾರ್ಟ್ ಗ್ರೀನ್ ಸಪ್ಲೈ ಚೇನ್‌ ಸೃಷ್ಟಿಸುವ ತನ್ನ ಜರ್ನಿಯಲ್ಲಿ ದೊಡ್ಡ ಇವಿಗಳನ್ನು ನಿಯೋಜನೆ ಮಾಡುವುದಲ್ಲದೇ, ಇವಿ ನಿಯೋಜನೆ ಮತ್ತು ದೇಶಾದ್ಯಂತ ಕಾರ್ಯಾಚರಣೆಗಳಿಗೆ ಅನುಕೂಲಕರ ವಾತಾವರಣ ಸೃಷ್ಟಿ ಮಾಡುತ್ತದೆ.

ಇದರಲ್ಲಿ ಮೂಲಸೌಕರ್ಯ ಮತ್ತು ಚಾರ್ಜಿಂಗ್ ಸ್ಟೇಷನ್​ಗಳು, ಪಾರ್ಕಿಂಗ್ ಲಾಟ್​ಗಳು, ತರಬೇತಿ ಸ್ಥಳಗಳು, ರೂಟ್ ಪ್ಲಾನಿಂಗ್ ಮತ್ತು ಬ್ಯಾಟರಿ ಸ್ವಾಪಿಂಗ್ ಸ್ಟೇಷನ್​​ಗಳ ನಿರ್ಮಾಣವೂ ಸೇರಿದೆ. ಮತ್ತೊಂದು ಪ್ರಮುಖ ಆದ್ಯತಾ ವಲಯವೆಂದರೆ ತಂತ್ರಜ್ಞಾನ ಮತ್ತು ಕಂಟ್ರೋಲ್ ಟಾವರ್ ಕಾರ್ಯಾಚರಣೆಗಳಿಂದ ಅತ್ಯುತ್ಕೃಷ್ಟದ ಕಾರ್ಯದಕ್ಷತೆ ಮತ್ತು ವೆಚ್ಚ ಉಳಿತಾಯಕ್ಕೆ ಅವಕಾಶ ಮಾಡಿಕೊಡುತ್ತದೆ.

ಫ್ಲಿಪ್‌ಕಾರ್ಟ್ ಈಗಾಗಲೇ ಅನೇಕ ಒಇಎಂಗಳ ಜತೆಗೆ ಪಾಲುದಾರಿಕೆ ಹೊಂದಿದೆ ಮತ್ತು ತನ್ನ ಸಪ್ಲೈ ಚೇನ್​ನಲ್ಲಿ ಈಗಾಗಲೇ ದ್ವಿಚಕ್ರ ಮತ್ತು ತ್ರಿಚಕ್ರ ವಾಹನಗಳನ್ನು ಅಳವಡಿಕೆ ಮಾಡಿಕೊಂಡಿದೆ. ಎಂಎಲ್ಎಲ್ ಇಡಿಇಎಲ್‌ನೊಂದಿಗೆ ಕಂಪನಿಯ ಪಾಲುದಾರಿಕೆಯೊಂದಿಗೆ ಈ ಕಾರ್ಯಚಟುವಟಿಕೆಯನ್ನು ಮತ್ತಷ್ಟು ಕ್ರಿಯಾಶೀಲ ಮಾಡಲಿದೆ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ನಿಯೋಜನೆ ಮಾಡಲು ನೆರವಾಗುತ್ತದೆ.

ಇದಲ್ಲದೇ, ಮೂಲಸೌಕರ್ಯ ಮತ್ತು ತಂತ್ರಜ್ಞಾನ ಬೆಂಬಲವನ್ನು ಮೇಲ್ಮಟ್ಟಕ್ಕೆ ಹೆಚ್ಚಳ ಮಾಡಿಕೊಳ್ಳಲು ನೆರವಾಗುತ್ತದೆ. ಚಾರ್ಜಿಂಗ್ ತಾಣಗಳು, ಟ್ರ್ಯಾಕಿಂಗ್, ಅಸೆಟ್, ಸುರಕ್ಷತೆ ಮತ್ತು ವೆಚ್ಚದ ವಿಚಾರದಲ್ಲಿ ಕಂಪನಿಗೆ ಸಾಕಷ್ಟು ಉಪಯೋಗವಾಗಲಿದೆ.

ಎಂಎಲ್ಎಲ್ ತನ್ನ ಎಲೆಕ್ಟ್ರಿಕ್ ವಿತರಣೆ ಬ್ರ್ಯಾಂಡ್ ಆಗಿರುವ ಇಡಿಇಎಲ್ ಅಡಿ ವಿವಿಧ ಮಾದರಿಯ ಮತ್ತು ವರ್ಗಗಳ ಎಲೆಕ್ಟ್ರಿಕ್ ವಾಹನಗಳನ್ನು ಒಇಎಂಗಳ ಮೂಲಕ ಪಡೆದುಕೊಳ್ಳಲಿದೆ. ಇಡಿಇಎಲ್ ಈಗಾಗಲೇ ಇವಿಗಳನ್ನು ದೊಡ್ಡ ಮಟ್ಟದಲ್ಲಿ ಕಾರ್ಯಾಚರಣೆ ಮಾಡುತ್ತಿದೆ.

ಇದೀಗ ಫ್ಲಿಪ್‌ಕಾರ್ಟ್‌ನ ಉದ್ದೇಶಗಳಿಗೆ ಬೆಂಬಲ ನೀಡುವ ನಿಟ್ಟಿನಲ್ಲಿ ಗಣನೀಯ ಪ್ರಮಾಣದಲ್ಲಿ ಈ ಕಾರ್ಯಾಚರಣೆ ಹೆಚ್ಚಿಸುವ ಗುರಿ ಹೊಂದಿದೆ. ಇಡಿಇಎಲ್ ಬೆಂಗಳೂರು, ಮುಂಬೈ, ದೆಹಲಿ, ಪುಣೆ, ಕೋಲ್ಕತಾ ಮತ್ತು ಹೈದ್ರಾಬಾದ್ ನಗರಗಳಲ್ಲಿ ಕಾರ್ಯಾಚರಣೆ ನಡೆಸುತ್ತಿದೆ. ಈ ವರ್ಷದ ಅಂತ್ಯದ ವೇಳೆಗೆ ಪ್ರಮುಖ 20 ನಗರಗಳಲ್ಲಿ ಕಾರ್ಯಾಚರಣೆ ವಿಸ್ತರಿಸುವ ಉದ್ದೇಶ ಹೊಂದಿದೆ.

ಓದಿ: ರಾಮನಗರಕ್ಕೆ ಟ್ರೈಟನ್​ ಎಲೆಕ್ಟ್ರಿಕ್ ವಾಹನ ಕಂಪನಿ ಎಂಟ್ರಿ: ಅಗತ್ಯ ನೆರವಿಗೆ ಸಿಎಂ ಅಭಯ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.