ETV Bharat / city

ಡಾರ್ಕ್ ವೆಬ್​ನಲ್ಲಿ ಡ್ರಗ್ಸ್ ಖರೀದಿಸಿ ಮಾರಾಟ ಮಾಡ್ತಿದ್ದ ಐವರ ಬಂಧನ - drugs selling

ಡಾರ್ಕ್ ವೆಬ್​ನಲ್ಲಿ ಡ್ರಗ್ಸ್ ಖರೀದಿಸಿ, ಕೊರಿಯರ್ ಮೂಲಕ ಗ್ರಾಹಕರಿಗೆ ಸರಬರಾಜು ಮಾಡುತ್ತಿದ್ದ ಐವರನ್ನು ಸಿಸಿಬಿ ಮಾದಕದ್ರವ್ಯ ನಿಗ್ರಹದಳ ಬಂಧಿಸಿದೆ.

Five arrested for selling drugs
ಡಾರ್ಕ್ ವೆಬ್​ನಲ್ಲಿ ಡ್ರಗ್ಸ್ ಖರೀದಿಸಿ ಮಾರಾಟ ಮಾಡ್ತಿದ್ದ ಐವರ ಬಂಧನ
author img

By

Published : Jun 23, 2021, 10:40 AM IST

ಬೆಂಗಳೂರು: ಡಾರ್ಕ್ ವೆಬ್​ನಲ್ಲಿ ಡ್ರಗ್ಸ್ ಖರೀದಿಸಿ, ಗ್ರಾಹಕರಿಗೆ ಕೊರಿಯರ್ ಮೂಲಕ ಸರಬರಾಜು ಮಾಡುತ್ತಿದ್ದ ಐವರನ್ನು ಸಿಸಿಬಿ ಮಾದಕದ್ರವ್ಯ ನಿಗ್ರಹದಳದ ಅಧಿಕಾರಿಗಳು ಬಂಧಿಸಿದ್ದಾರೆ. ಬ್ಯಾಡರಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಪ್ರಸಿದ್ಧಿ ಪಿಜಿಯಲ್ಲಿ ವಾಸ ಮಾಡುತ್ತಿದ್ದ ಐವರು ಆರೋಪಿಗಳು ಡ್ರಗ್ಸ್ ದಂಧೆಯಲ್ಲಿ ತೊಡಗಿಸಿಕೊಂಡಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ಎಸಿಬಿ ಗೌತಮ್ ನೇತೃತ್ವದ ತಂಡ ದಾಳಿ ನಡೆಸಿ ಬಂಧಿಸಿದೆ.

ಬಂಧಿತರಿಂದ 30 ಲಕ್ಷ ಮೌಲ್ಯದ 300 ಎಂಡಿಎಂಎ ಮಾತ್ರೆಗಳು, ಎಕ್ಸ್ ಟೆನ್ಸಿ, 150 ಎಲ್​ಎಸ್​ಡಿ ಸ್ಟಿಪ್​ಗಳು, 250 ಹ್ಯಾಶಿಶ್ ಆಯಿಲ್, 1 ಕೆ.ಜಿ ಗಾಂಜಾ, ಕೃತ್ಯಕ್ಕೆ ಬಳಸುತ್ತಿದ್ದ 5 ಪೋನ್ ಹಾಗೂ ಒಂದು ಬೈಕ್ ಜಪ್ತಿ ಮಾಡಲಾಗಿದೆ. ದಂಧೆಯಲ್ಲಿ ಭಾಗಿಯಾಗಿ ತಲೆಮರೆಸಿಕೊಂಡಿರುವ ಮೂವರು ಆರೋಪಿಗಳು ಹಿಮಾಚಲ ಪ್ರದೇಶಕ್ಕೆ ಹೋಗಿ ಡ್ರಗ್ಸ್ ಖರೀದಿಸುತ್ತಿದ್ದರು.

ಡಾರ್ಕ್ ವೆಬ್ ಸೇರಿದಂತೆ ಇನ್ನಿತರ ವೆಬ್​ಸೈಟ್​​ಗಳ ಮೂಲಕ ಡ್ರಗ್ಸ್ ಸಾಗಿಸುವ ದಂಧೆಕೋರರನ್ನು ಸಂಪರ್ಕಿಸಿ ವ್ಯವಹಾರ ಕುದುರಿಸಿ, ವಿದೇಶದಿಂದ ಎಂಡಿಎಂಎ, ಎಕ್ಸ್‌ಟೆನ್ಸಿ ಮಾತ್ರೆಗಳನ್ನು ಕಡಿಮೆ ಬೆಲೆಗೆ ತರಿಸಿಕೊಳ್ಳುತ್ತಿದ್ದರು. ಬಿಟ್ ಕಾಯಿನ್ ಮೂಲಕ ಹಣಕಾಸು ವರ್ಗಾವಣೆ ನಡೆಸುತ್ತಿದ್ದರು. ಬಳಿಕ ಅಮೇಜಾನ್​ ಟೇಪ್​ ಹಾಕಿ ಗ್ರಾಹಕರಿಗೆ ಕೊರಿಯರ್ ಮೂಲಕ ಸರಬರಾಜು ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಬಂಧಿತ ಆರೋಪಿಗಳ ಪೈಕಿ ಓರ್ವ ಐಟಿ ಕಂಪೆನಿಯೊಂದರಲ್ಲಿ ಉದ್ಯೋಗಿಯಾಗಿದ್ದ. ಡ್ರಗ್ಸ್ ಸೇವಿಸಿದರೆ ಕೆಲಸ ಮಾಡಲು ಹೊಸ ಹುರುಪು ಬರಲಿದೆ ಎಂದು ಹೇಳಿ ಡ್ರಗ್ಸ್ ಮಾರಾಟ ಮಾಡುತ್ತಿದ್ದ. ಈ ಮೂಲಕ ಡ್ರಗ್ಸ್‌ ದಾಸರನ್ನಾಗಿ ಮಾಡುವ ದುರುದ್ದೇಶ ಹೊಂದಿದ್ದ. ಮತ್ತೋರ್ವ ಆರೋಪಿ ಪ್ರತಿಷ್ಠಿತ ಕಾಲೇಜಿನಲ್ಲಿ ಎಲ್​ಎಲ್​ಬಿ ಓದುತ್ತಿದ್ದು, ಕಾನೂನು ತಿಳಿದ ವಿದ್ಯಾರ್ಥಿಯೇ ಮಾದಕಜಾಲದಲ್ಲಿ ತೊಡಗಿಸಿಕೊಂಡಿದ್ದ. ಸದ್ಯ ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸುವುದಾಗಿ ಸಿಸಿಬಿ ಪೊಲೀಸರು ತಿಳಿಸಿದ್ದಾರೆ‌.

ಇದನ್ನೂ ಓದಿ: ಶ್ರೀಕೃಷ್ಣ ಜನ್ಮಭೂಮಿ ವಿವಾದ: ಸೌಹಾರ್ದಯುತ ಇತ್ಯರ್ಥಕ್ಕೆ ಅರ್ಜಿ ಸಲ್ಲಿಸಿದ ದೇಗುಲ ಸಮಿತಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.