ಬೆಂಗಳೂರು : ಖಾಲಿ ಜಾಗದಲ್ಲಿ ಹಾಕಿದ್ದ ಗುಜರಿ ವಸ್ತುಗಳ ರಾಶಿಗೆ ಕಿಡಿಗೇಡಿಗಳು ಸಿಗರೇಟ್ ಕಿಡಿ ಹೊತ್ತಿಸಿದ್ದಾರೆ. ಬೆಂಕಿಯ ತೀವ್ರತೆಗೆ ರಾಶಿ ರಾಶಿ ಗುಜರಿ ವಸ್ತುಗಳು ಮತ್ತು ಒಂದು ಟೆಂಪೋ ಭಸ್ಮವಾಗಿರುವ ಘಟನೆ ಬನಶಂಕರಿ ಚಿಕ್ಕಲ್ಲಸಂದ್ರದ ರಾಮಚಂದ್ರಾಪುರದಲ್ಲಿ ನಡೆದಿದೆ.
ಘಟನೆ ಬಗ್ಗೆ ತಿಳಿಯುತ್ತಿದ್ದಂತೆ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದ್ದಾರೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಘಟನೆ ಸಂಬಂಧ ಬನಶಂಕರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.