ETV Bharat / city

ದೇವನಹಳ್ಳಿ: ಅಗ್ನಿ ಅನಾಹುತಕ್ಕೆ ಸುಟ್ಟು ಕರಕಲಾದ ಗ್ಯಾಸ್‌ ಬುಕ್ಕಿಂಗ್‌, ಕೇಬಲ್‌ ಕಚೇರಿ

ಅಗ್ನಿ ಅವಘಡ ಸಂಭವಿಸಿ ಕಚೇರಿಗಳು ಹೊತ್ತಿ ಉರಿದ ಘಟನೆ ಬೂದಿಗೆರೆ ಗ್ರಾಮದ ಬಸ್ ನಿಲ್ದಾಣದ ಬಳಿ ನಡೆದಿದೆ.

fire on building in Devanahalli
ದೇವನಹಳ್ಳಿಯಲ್ಲಿ ಹೊತ್ತಿ ಉರಿದ ಕಟ್ಟಡ
author img

By

Published : Mar 6, 2022, 10:15 AM IST

ದೇವನಹಳ್ಳಿ(ಬೆಂಗಳೂರು ಗ್ರಾಮಾಂತರ): ಅಗ್ನಿ ಅವಘಡದಿಂದಾಗಿ ಗ್ಯಾಸ್ ಬುಕ್ಕಿಂಗ್ ಮತ್ತು ಕೇಬಲ್ ಕಚೇರಿ ಸಂಪೂರ್ಣ ಸುಟ್ಟುಹೋಗಿರುವ ಘಟನೆ ದೇವನಹಳ್ಳಿ ತಾಲೂಕಿನ ಬೂದಿಗೆರೆ ಗ್ರಾಮದ ಬಸ್ ನಿಲ್ದಾಣದ ಬಳಿ ನಡೆದಿದೆ.

ಮಂಜುಶ್ರೀ ಗ್ಯಾಸ್ ಮತ್ತು ಕೇಬಲ್ ಬುಕ್ಕಿಂಗ್ ಕಚೇರಿ ಸಂಪೂರ್ಣವಾಗಿ ಸುಟ್ಟು ಕರಕಲಾಗಿದೆ. ಇಂದು ಮುಂಜಾನೆ 6 ಗಂಟೆಯ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದ್ದು, ತಕ್ಷಣವೇ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಲಾಗಿತ್ತು. ಆದರೆ ಅಗ್ನಿಶಾಮಕ ದಳ ಸಿಬ್ಬಂದಿ ಸ್ಥಳಕ್ಕೆ ಬರಲು ತಡವಾದ ಹಿನ್ನೆಲೆಯಲ್ಲಿ ಬೆಂಕಿಯ ಕೆನ್ನಾಲಿಗೆಗೆ ಕಚೇರಿಯ ಪಿಠೋಪಕರಣಗಳು ಸುಟ್ಟು ಬೂದಿಯಾಗಿವೆ.

ಇದನ್ನೂ ಓದಿ: ಅನೈತಿಕ ಸಂಬಂಧ: ಪ್ರೇಯಸಿ ಪತಿಯ ಕತ್ತು ಹಿಸುಕಿ ಸುಟ್ಟು ಹಾಕಿದ ಆರೋಪಿಯ ಬಂಧನ

ಈ ಘಟನೆಗೆ ವಿದ್ಯುತ್ ಶಾರ್ಟ್‌ಸರ್ಕ್ಯೂಟ್‌ ಕಾರಣವೆನ್ನಲಾಗುತ್ತಿದೆ. ಚನ್ನರಾಯಪಟ್ಟಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.