ಯಲಹಂಕ: ಚಿಕಿತ್ಸೆ ಫಲಕಾರಿಯಾಗದೆ ಬುಧವಾರ ವಿಧಿವಶರಾಗಿದ್ದ ವಾಯುಸೇನೆಯ ಗ್ರೂಪ್ ಕ್ಯಾಪ್ಟನ್ ವರುಣ್ ಸಿಂಗ್‌ಗೆ ಯಲಹಂಕದ ವಾಯುನೆಲೆಯಲ್ಲಿ ಅಂತಿಮ ನಮನ ಸಲ್ಲಿಸಲಾಗಿದೆ.
![Final salute to Group Captain Varun Singh](https://etvbharatimages.akamaized.net/etvbharat/prod-images/13921107_varun4.jpg)
![Final salute to Group Captain Varun Singh](https://etvbharatimages.akamaized.net/etvbharat/prod-images/13921107_varun2.jpg)
ಗ್ರೂಪ್ ಕ್ಯಾಪ್ಟನ್ ಅವರ ಪಾರ್ಥಿವ ಶರೀರಕ್ಕೆ ಸಕಲ ಸರ್ಕಾರಿ ಗೌರವ ಸಲ್ಲಿಸಲಾಯಿತು. ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ಸೇನೆಯ ಹಿರಿಯ ಅಧಿಕಾರಿಗಳು ಅಂತಿಮ ನಮನ ಸಲ್ಲಿಸಿದರು. ಬಳಿಕ ವಿಶೇಷ ವಿಮಾನದಲ್ಲಿ ಪಾರ್ಥಿವ ಶರೀರವನ್ನು ಭೋಪಾಲ್‌ಗೆ ಏರ್ ಲಿಫ್ಟ್ ಮಾಡಲಾಯಿತು. ನಾಳೆ ಭೋಪಾಲ್‌ನಲ್ಲಿ ವರುಣ್ ಸಿಂಗ್ ಅವರ ಅಂತ್ಯಕ್ರಿಯೆ ನಡೆಯಲಿದೆ.
![Final salute to Group Captain Varun Singh](https://etvbharatimages.akamaized.net/etvbharat/prod-images/13921107_varun3.jpg)
![Group Captain Varun Singh body airlift](https://etvbharatimages.akamaized.net/etvbharat/prod-images/13921107_varun6.jpg)
ಡಿಸೆಂಬರ್ 8 ರಂದು ತಮಿಳುನಾಡಿನ ಕೂನೂರುನಲ್ಲಿ ಸಂಭವಿಸಿದ ಸೇನಾ ಹೆಲಿಕಾಪ್ಟರ್ ದುರಂತದಲ್ಲಿ ಬದುಕುಳಿದಿದ್ದ ಗ್ರೂಪ್ ಕ್ಯಾಪ್ಟನ್ ವರುಣ್ ಸಿಂಗ್ ಬೆಂಗಳೂರಿನ ಕಮಾಂಡೋ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದರು.
![Final salute to Group Captain Varun Singh](https://etvbharatimages.akamaized.net/etvbharat/prod-images/13921107_varun1.jpg)
![Final salute to Group Captain Varun Singh](https://etvbharatimages.akamaized.net/etvbharat/prod-images/13921107_varun5.jpg)
ಇದನ್ನೂ ಓದಿ: ಪ್ರಾಣ ಪಣಕ್ಕಿಟ್ಟು 'ತೇಜಸ್' ರಕ್ಷಿಸಿದ್ದ ವರುಣ್ ಸಿಂಗ್‌ಗೆ ಸಿಕ್ಕಿತ್ತು 'ಶೌರ್ಯ ಚಕ್ರ'ದ ಗೌರವ