ಬೆಂಗಳೂರು: ಪವಿತ್ರ ಆರ್ಥಿಕತೆಗಾಗಿ ಆಗ್ರಹಿಸಿ ರಂಗಕರ್ಮಿ, ಸಾಮಾಜಿಕ ಹೋರಾಟಗಾರ ಪ್ರಸನ್ನ ಹೆಗ್ಗೋಡು ಕಳೆದ ಏಳು ದಿನಗಳಿಂದ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ.
ಅವರ ಹೋರಾಟ ಇಂದು ಎಂಟನೇ ದಿನಕ್ಕೆ ಕಾಲಿಟ್ಟಿದೆ. ಈ ವೇಳೆ ಮಾತನಾಡಿದ ಅವರು, ಪ್ರಕೃತಿ ಮಾತೆಯೇ ಇನ್ನೊಂದು ರೂಪದಲ್ಲಿ ಬಂದಿದ್ದು, ಇದರಿಂದಾಗಿಯೇ ಗಂಗಾ ನದಿ ಶುದ್ಧವಾಗಿ ಹರಿಯುತ್ತಿದೆ. ಯಮುನಾ, ಕೃಷ್ಣೆ, ಕಾವೇರಿ ನದಿಯೂ ಶುದ್ಧವಾಗಿದೆ. ಹಿಮಾಲಯದ ದರ್ಶನವಾಗಿದೆ ಎಂದರು. ಕೊರೊನಾ ಸೋಂಕು ಯಾವ ಕಾರ್ಮಿಕನಿಗೂ, ನೇಕಾರರಿಗೂ, ರೈತನಿಗೂ ಬಂದಿಲ್ಲ.
ಹಾಗಾಗಿ ಕೊರೊನಾದಿಂದ ಬಡವರ್ಗದ ಜನರಿಗೆ ತೊಂದರೆಯಾಗಿಲ್ಲ. ತೊಂದರೆಯಾಗಿರುವುದು ರಾಕ್ಷಸ ಆರ್ಥಿಕತೆಯಿಂದಾಗಿ. ಇನ್ನಾದರೂ ರಾಕ್ಷಸ ಆರ್ಥಿಕತೆಯನ್ನು ಹೊರ ದಬ್ಬಿ ಎಂದು ಕರೆ ನೀಡಿದರು.