ETV Bharat / city

ಜುಲೈ 29ರಂದು ಸಾರಿಗೆ ನಿಗಮದ ವಿರುದ್ಧ ನೌಕರರ ಧರಣಿ.. ಕಾರಣ ಗೊತ್ತಾ..!

ರಾಜ್ಯ ರಸ್ತೆ ಸಾರಿಗೆ ನಿಗಮಗಳ ನೌಕರರ ಫೆಡರೇಶನ್, ಹಲವು ಬೇಡಿಕೆಗಳನ್ನು ಮುಂದಿಟ್ಟು ಸಾರಿಗೆ ನಿಗಮದ ವಿರುದ್ಧ ಪ್ರತಿಭಟನೆಗೆ ಮುಂದಾಗಿದೆ . ಸ್ವತಃ ಸಾರಿಗೆ ಸಚಿವರು ಮಧ್ಯಪ್ರವೇಶಿಸಿ ಸಮಸ್ಯೆಗಳನ್ನು ಬಗೆಹರಿಸಿ ಕೊಡಬೇಕೆಂದು ಒತ್ತಾಯಿಸಿದ್ದಾರೆ.

employees-protest-against-transportation-corporation
ರಾಜ್ಯ ರಸ್ತೆ ಸಾರಿಗೆ ನಿಗಮಗಳ ನೌಕರರ ಫೆಡರೇಶನ್
author img

By

Published : Jul 26, 2021, 11:34 PM IST

ಬೆಂಗಳೂರು: ಕಾರ್ಮಿಕರ ದೈನಂದಿನ ಸಮಸ್ಯೆಗಳನ್ನು, ವೇತನ ಒಪ್ಪಂದ ಮತ್ತು ಇತರ ಸೇವಾ ಸೌಲಭ್ಯಗಳು ಹಾಗೂ ಸೇವಾ ನಿಯಮಾವಳಿಗಳನ್ನು ಕಾರ್ಮಿಕ ಸಂಘಗಳೊಂದಿಗೆ ಪ್ರಜಾಪ್ರಭುತ್ವ ರೀತಿಯಲ್ಲಿ ಚರ್ಚಿಸಿ ಎಲ್ಲಾ ಹಂತಗಳಲ್ಲಿ ಬಗೆಹರಿಸಬೇಕು. ಆದರೆ ಇದ್ಯಾವುದು ಆಗ್ತಿಲ್ಲ ಎಂದು ರಾಜ್ಯ ರಸ್ತೆ ಸಾರಿಗೆ ನಿಗಮಗಳ ನೌಕರರ ಫೆಡರೇಶನ್ ಆರೋಪಿಸಿದೆ.‌

ಈ ಕುರಿತು ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ ನಿಗಮದ ಪದಾಧಿಕಾರಿಗಳು, ಸೇವೆಯಿಂದ ವಜಾಗೊಂಡಿರುವ ಎಲ್ಲಾ ಕಾರ್ಮಿಕರನ್ನು ಕೆಲಸಕ್ಕೆ ಪುನಃ ನೇಮಿಸಬೇಕು, ಸೇವೆಯಿಂದ ಕೈಬಿಟ್ಟಿರುವ ಟ್ರೈನಿ ಮತ್ತು ಪ್ರೊಬೇಷನರಿ ಕಾರ್ಮಿಕರನ್ನು ಪುನರ್ ನೇಮಕ ಮಾಡಬೇಕು. ದೂರದ ವಿಭಾಗಗಳಿಗೆ ಘಟಕಗಳಿಗೆ ವರ್ಗಾವಣೆ ಮಾಡಿರುವ ಕಾರ್ಮಿಕರನ್ನು ಅವರು ಕರ್ತವ್ಯ ನಿರ್ವಹಿಸುತ್ತಿದ್ದ ಸ್ಥಳಗಳಿಗೆ ವಾಪಸ್ಸು ತರಬೇಕು. ಅಮಾನತ್ತುಗೊಳಿಸಿರುವ ಎಲ್ಲರನ್ನು ಕರ್ತವ್ಯಕ್ಕೆ ನಿಯೋಜಿಸಬೇಕು ಹಾಗೂ ಎಲ್ಲಾ ಶಿಸ್ತು ಪ್ರಕ್ರಿಯೆಗಳನ್ನು ನಿಲ್ಲಿಸಬೇಕು ಎನ್ನುವ ಹಲವು ಬೇಡಿಕೆಗಳನ್ನ ಸರ್ಕಾರ ಮುಂದಿಟ್ಟರು.

ಇದೆ ತಿಂಗಳು 29ರಂದು ಸಾರಿಗೆ ನಿಗಮದ ವಿರುದ್ಧ ನೌಕರರ ಧರಣಿ

ಈ ಸಂದರ್ಭದಲ್ಲಿ ಮಾತನಾಡಿದ ಫೆಡರೇಶನ್​​ ಆಧ್ಯಕ್ಷ ಹೆಚ್. ಡಿ. ರೇವಪ್ಪ, ಕಳೆದ ಏಪ್ರಿಲ್ ನಿಂದ ಗೈರುಹಾಜರಿ ಆಪಾದನಾ ಪತ್ರಗಳನ್ನು ವಾಪಸ್ಸು ಪಡೆಯಬೇಕು. ಶಿಸ್ತು ಕ್ರಮಗಳನ್ನು ರದ್ದುಪಡಿಸಬೇಕು. ಕಾರ್ಮಿಕ ಸಂಘಗಳೊಂದಿಗೆ ಚರ್ಚಿಸಿ 2020 ಜನವರಿಯಿಂದ ವೇತನ ಪರಿಷ್ಕರಣೆ ಮಾಡಿ ಜಾರಿಗೆ ತರಬೇಕು. ಉತ್ತಮ ಕೈಗಾರಿಕಾ ಬಾಂಧವ್ಯ ವೃದ್ಧಿಸಲು ಕಾರ್ಮಿಕ ಸ್ನೇಹಿ ಆಡಳಿತ ಜಾರಿಗೆ ತರಬೇಕು ಹಾಗೂ ಸಾರಿಗೆ ಸಚಿವರು ಮಧ್ಯಪ್ರವೇಶಿಸಿ ಸಮಸ್ಯೆಗಳನ್ನು ಬಗೆಹರಿಸಿ ಕೊಡಬೇಕೆಂದು ಒತ್ತಾಯಿಸಿ, ಇದೇ 29 ರಂದು ಫ್ರೀಡಂಪಾರ್ಕ್ ನಲ್ಲಿ ಸಾಂಕೇತಿಕ ಧರಣಿ ಸತ್ಯಾಗ್ರಹ ನಡೆಸಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.