ETV Bharat / city

ಈ ಉಪಚುನಾವಣೆಯಲ್ಲಿ ಇವರೇ ಹೆಚ್ಚು ಮತಗಳಿಂದ ಗೆದ್ದವರು - ಜೆಡಿಎಸ್​ಗೆ ಸೋಲು

ಮಹಾಲಕ್ಷ್ಮಿ ಲೇಔಟ್​ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗೋಪಾಲಯ್ಯ​ ಈ ಉಪಚುನಾವಣೆಯಲ್ಲಿ ದಾಖಲೆ ಮತಗಳ ಅಂತರದಿಂದ ಭರ್ಜರಿ ಜಯ ಸಾಧಿಸಿದ್ದಾರೆ.

Election result announce: BJP WON
Election result announce: BJP WON
author img

By

Published : Dec 9, 2019, 6:16 PM IST

Updated : Dec 9, 2019, 7:07 PM IST

ಬೆಂಗಳೂರು: ಮಹಾಲಕ್ಷ್ಮಿ ಲೇಔಟ್​ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗೋಪಾಲಯ್ಯ​ ಈ ಉಪಚುನಾವಣೆಯಲ್ಲಿ ದಾಖಲೆ ಮತಗಳ ಅಂತರದಿಂದ ಭರ್ಜರಿ ಜಯ ಸಾಧಿಸಿದ್ದರೆ, ಮಂಡ್ಯದ ಕೆ.ಆರ್​.ಪೇಟೆ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೆ.ಸಿ.ನಾರಾಯಣಗೌಡ ಅವರು ಕಡಿಮೆ ಮತಗಳ ಅಂತರದಿಂದ ವಿಜಯ ಪತಾಕೆ ಹಾರಿಸಿದ್ದಾರೆ.

54,386 ಮತಗಳ ಅಂತರದಿಂದ ವಿಜಯಿ ಆಗಿರುವ ಗೋಪಾಲಯ್ಯ ಅವರ ಬತ್ತಳಿಕೆಗೆ 85,889 ಮತಗಳು ಬಿದ್ದಿವೆ. ಚುನಾವಣೆ ಜರುಗಿದ 15 ಕ್ಷೇತ್ರಗಳಲ್ಲಿ ಯಾರೂ ಇಷ್ಟು ಮತಗಳ ಅಂತದಿಂದ ಜಯ ಸಾಧಿಸಿಲ್ಲ. ಈ ಕ್ಷೇತ್ರದ ಎದುರಾಳಿ ಅಭ್ಯರ್ಥಿಗಳು ಕಾಂಗ್ರೆಸ್​​ನ ಎಂ.ಶಿವರಾಜು 31,503 ಮತಗಳು, ಜೆಡಿಎಸ್​​​ನ ಗಿರೀಶ್​ ನಾಶಿ 23,516 ಮತಗಳನ್ನಷ್ಟೆ ಪಡೆಯಲು ಶಕ್ತರಾದರು.

ಕೆ.ಆರ್​.ಪೇಟೆ ಕ್ಷೇತ್ರವನ್ನು ಜೆಡಿಎಸ್​ನ ಭದ್ರಕೋಟೆ ಎಂದೇ ಕರೆಯಲಾಗುತ್ತಿತ್ತು. ಆದರೆ, ಈ ಉಪಚುನಾವಣೆಯಲ್ಲಿ ತೆನೆ ಹೊತ್ತ ಮಹಿಳೆ ತೆನೆ ಇಳಿಸಿ ಕಮಲಕ್ಕೆ ಮುತ್ತಿಕ್ಕಿದ್ದಾಳೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್​ನಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದ ನಾರಾಯಣಗೌಡ ಬದಲಾದ ರಾಜಕೀಯ ಸನ್ನಿವೇಶಗಳಲ್ಲಿ ಕಮಲದತ್ತ ವಾಲಿದರು. ಇದೀಗ ಬಿಜೆಪಿಯಿಂದಲೇ ಸ್ಪರ್ಧಿಸಿ 66,094 ಮತಗಳನ್ನು ಪಡೆದು 9,731 ಮತಗಳ ಅಂತರದಿಂದ ಗೆದ್ದಿದ್ದಾರೆ. ಈ ಉಪಚುನಾವಣೆಯಲ್ಲಿ ಅತೀ ಕಡಿಮೆ ಮತಗಳ ಅಂತರದಿಂದ ಗೆಲುವಿನ ನಗೆ ಬೀರಿದ್ದಾರೆ.

ಈ ಕ್ಷೇತ್ರದಲ್ಲಿ ಜೆಡಿಎಸ್​​​ ಅಭ್ಯರ್ಥಿ ಬಿ.ಎಲ್​.ದೇವರಾಜು ಕೂಡ ಪ್ರಬಲ ಸ್ಪರ್ಧೆ ಒಡ್ಡಿ 56,363 ಮತಗಳನ್ನು ಪಡೆದುಕೊಂಡರು. ಇತ್ತ ಕಾಂಗ್ರೆಸ್​ ಅಭ್ಯರ್ಥಿ ಸಹ ಈ ಇಬ್ಬರಿಗೂ ನೇರ ಪೈಪೋಟಿಯನ್ನೇ ನೀಡಿ 41,665 ಮತಗಳನ್ನು ಪಡೆದು ಮತಗಳ ಹಂಚಿಕೆಗೆ ಕಾರಣರಾದರು.

ಕೆ.ಆರ್​.ಪುರ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಬೈರತಿ ಬಸವರಾಜ್ ಅವರು ಕಾಂಗ್ರೆಸ್​ ಅಭ್ಯರ್ಥಿ ಎನ್​.ನಾರಾಯಣಸ್ವಾಮಿ ವಿರುದ್ಧ​ ಹೆಚ್ಚು ಮತಗಳ ಅಂತರದಲ್ಲಿ ಗೆದ್ದ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ಬೈರತಿ ಬಸವರಾಜ್​ ಅವರು 46,807 ಮತಗಳ ಅಂತರದಲ್ಲಿ ಗೆದ್ದಿದ್ದಾರೆ.

ಹೊಸಕೋಟೆ ವಿಧಾನಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಶರತ್​ ಬಚ್ಚೇಗೌಡ ಗೆಲ್ಲುವ ಮೂಲಕ ಕಡಿಮೆ ಮತಗಳ ಅಂತರದಲ್ಲಿ ಗೆದ್ದವರಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದ ಶರತ್​, ಆಗಿನ ಕಾಂಗ್ರೆಸ್​ ಅಭ್ಯರ್ಥಿ ಎಂ.ಟಿ.ಬಿ.ನಾಗರಾಜ್​ ವಿರುದ್ಧ ಸೋತಿದ್ದರು. ಬದಲಾದ ರಾಜಕೀಯ ಬೆಳವಣಿಗೆಗಳಲ್ಲಿ ಎಂ.ಬಿ.ಟಿ.ನಾಗರಾಜ್​ ಬಿಜೆಪಿಯಿಂದ ಸ್ಪರ್ಧಿಸಿದರೆ, ಶರತ್​ ಪಕ್ಷೇತರವಾಗಿ ಕಣಕ್ಕಿಳಿದು ಗೆದ್ದು ಶಾಕ್​ ನೀಡಿದ್ದಾರೆ. ಶರತ್​ 11,484 ಮತಗಳ ಅಂತರದಲ್ಲಿ ಗೆದ್ದಿದ್ದಾರೆ.

ಹೆಚ್ಚು ಮತ ಪಡೆದವರು?

ಯಶವಂತಪುರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಸ್​​.ಟಿ.ಸೋಮಶೇಖರ್​ ಅವರು ಈ ಉಪಚುನಾವಣೆಯಲ್ಲಿ ​ಲಕ್ಷದ ಗಡಿ ದಾಟುವ ಮೂಲಕ ಹೆಚ್ಚು ಮತಗಳನ್ನು ಪಡೆದವರ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ. ಸೋಮಶೇಖರ್​ ಅವರು 1,44,722 ಮತಗಳನ್ನು ಪಡೆದು ಜೆಡಿಎಸ್​ ಅಭ್ಯರ್ಥಿ ಜವರಾಯಿಗೌಡ (1,17,023) ವಿರುದ್ಧ 27,699 ಮತಗಳ ಅಂತರದಲ್ಲಿ ಜಯಿಸಿದ್ದಾರೆ.

Intro:Body:

national

Conclusion:
Last Updated : Dec 9, 2019, 7:07 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.