ಬೆಂಗಳೂರು : ಕರ್ನಾಟಕ ವಿಧಾನಸಭಾ ಉಪಚುನಾವಣೆಗೆ ಇನ್ನೇನು ಕೆಲವೇ ದಿನಗಳು ಮಾತ್ರ ಬಾಕಿ ಉಳಿದಿವೆ. ಈ ನಿಟ್ಟಿನಲ್ಲಿ ವಿವಿಧ ಪಕ್ಷಗಳ ಅಭ್ಯರ್ಥಿಗಳು, ಸ್ವತಂತ್ರ ಅಭ್ಯರ್ಥಿಗಳು ಈಗಾಗಲೇ ನಾಮಪತ್ರ ಸಲ್ಲಿಸಿದ್ದು ಪೈಪೋಟಿಗೆ ಇಳಿದಿದ್ದಾರೆ. ಈ ಕುರಿತು ಗಮನ ವಹಿಸುತ್ತಿರುವ ಗುಪ್ತಚರ ಇಲಾಖೆಯ ಮೇಲೆ ಚುನಾವಣಾ ಆಯೋಗ ಇದೀಗ ಕೆಂಗಣ್ಣು ಬೀರಿದೆ.
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರ ಅಧೀನದಲ್ಲಿರುವ ಗುಪ್ತಚರ ಇಲಾಖೆಯು ಪ್ರತಿದಿನ ರಾಜ್ಯದ ಚುನಾವಣೆ ಹಾಗು ಚುನಾವಣೇತರ ಬೆಳವಣಿಗೆಗಳ ವರದಿಯನ್ನು ಸಿಎಂಗೆ ನೀಡುತ್ತಿದೆ. ರಾಜ್ಯದಲ್ಲಿ ಏನು ನಡೆಯುತ್ತಿದೆ ಎಂಬುದರ ಇಂಚಿಂಚೂ ಮಾಹಿತಿಯನ್ನು ಇಂಟಲಿಜೆನ್ಸ್ ಅಧಿಕಾರಿಗಳು ರವಾನಿಸುತ್ತಿದ್ದಾರೆ.
ಸಿಎಂಗೆ ಗುಪ್ತಚರ ಅಧಿಕಾರಿಗಳು ನೀಡುತ್ತಿರುವ ಮಾಹಿತಿ ಚುನಾವಣಾ ಆಯೋಗಕ್ಕೆ ಪಥ್ಯವಾಗಿಲ್ಲ. ಹೀಗಾಗಿ ಎಲೆಕ್ಷನ್ ಮುಗಿಯುವವರೆಗೆ ಸಿಎಂಗೆ ಯಾವುದೇ ವರದಿಯನ್ನು ನೀಡದಂತೆ ಗುಪ್ತಚರ ಎಡಿಜಿಪಿ ಕಮಲ್ ಪಂಥ್ ಅವರಿಗೆ ಚುನಾವಣಾ ಆಯೋಗ ಖಡಕ್ ಆಗಿ ಆದೇಶ ನೀಡಿದೆ ಎಂಬ ಮಾಹಿತಿ ಇದೆ.