ETV Bharat / city

ಜಮೀರ್ ಅಹಮದ್ ಮನೆ ಮೇಲೆ ನಡೆದಿರುವುದು ಐಟಿ ಅಲ್ಲ, ಇಡಿ ದಾಳಿ - ED Raid

ಐಎಂಎ ಬಹುಕೋಟಿ ಅವ್ಯವಹಾರ ಪ್ರಕರಣದಲ್ಲಿ ಮುಖ್ಯ ಆರೋಪಿ ಮನ್ಸೂರ್ ಎಂಬಾತ ಶಾಸಕ ಜಮೀರ್​ ಮತ್ತು ಮಾಜಿ ಸಚಿವ ರೋಷನ್​ ಬೇಗ್​ ಹೆಸರುಗಳನ್ನು ಪ್ರಸ್ತಾಪಿಸಿದ್ದ. ಹಾಗಾಗಿ ಇವರಿಬ್ಬರ ಮನೆಗಳ ಮೇಲೆ ​ಇಡಿ ಅಧಿಕಾರಿಗಳು ಇಂದು ಬೆಳಗ್ಗೆ ದಾಳಿ ನಡೆಸಿದ್ದಾರೆ.

Zameer Ahmed Khan
ಜಮೀರ್ ಅಹಮದ್ ಮನೆ ಮೇಲೆ ನಡೆದಿರುವುದು ಐಟಿ ದಾಳಿ ಅಲ್ಲ, ಇಡಿ ದಾಳಿ
author img

By

Published : Aug 5, 2021, 11:37 AM IST

ಬೆಂಗಳೂರು: ಕಾಂಗ್ರೆಸ್​ ಶಾಸಕ, ಮಾಜಿ ಸಚಿವ ಜಮೀರ್ ಅಹಮದ್​ ಖಾನ್ ಐಷಾರಾಮಿ ಬಂಗಲೆ, ಅವರ ಒಡೆತನದ ನ್ಯಾಷನಲ್ ಟ್ರಾವೆಲ್ಸ್​ ಕಚೇರಿಗಳು ಸೇರಿದಂತೆ ಐದಾರು ಕಡೆಗಳಲ್ಲಿ ಬೆಳಗ್ಗೆ ಆದಾಯ ತೆರಿಗೆ ಇಲಾಖೆ(IT) ಅಧಿಕಾರಿಗಳು ದಾಳಿ ನಡೆಸಿದ್ದಾರೆ ಎಂದು ಸುದ್ದಿಯಾಗಿತ್ತು. ಆದರೆ, ಅಧಿಕಾರಿಗಳು ಈಗ ನೀಡಿರುವ ಮಾಹಿತಿ ಪ್ರಕಾರ, ಜಮೀರ್ ಅಹಮದ್​ ಮನೆ ಮೇಲೆ ನಡೆದಿರುವುದು ಐಟಿ ದಾಳಿ ಅಲ್ಲ, ಅದು ಜಾರಿ ನಿರ್ದೇಶನಾಲಯ (ಇಡಿ) ಅಧಿಕಾರಿಗಳ ದಾಳಿ ಎಂದು ತಿಳಿದುಬಂದಿದೆ.

ಐಎಂಎ ಅವ್ಯವಹಾರ ಪ್ರಕರಣದಲ್ಲಿ ಪ್ರಧಾನ ವಂಚಕ ಮನ್ಸೂರ್ ಎಂಬಾತ ಶಾಸಕ ಜಮೀರ್​ ಮತ್ತು ರೋಷನ್​ ಬೇಗ್​ ಅವರುಗಳ ಹೆಸರುಗಳನ್ನು ಪ್ರಸ್ತಾಪಿಸಿದ್ದ. ಹಾಗಾಗಿ ಇವರಿಬ್ಬರ ಮನೆಗಳು ಹಾಗು ಕಚೇರಿಗಳ ಮೇಲೆ ದಾಳಿ ನಡೆಸಲಾಗಿದೆ ಎಂದು ತಿಳಿದುಬಂದಿದೆ.

ಶಾಸಕ ಜಮೀರ್ ಅಹಮದ್​ ಮಗಳ ಮದುವೆಗೆ ಹಣ, ಚಿನ್ನ ನೀಡಿದ್ದರ ಬಗ್ಗೆ ಮನ್ಸೂರ್ ಇಡಿ ಅಧಿಕಾರಿಗಳ ಎದುರು ಬಾಯ್ಬಿಟ್ಟಿದ್ದಾನೆ ಎಂದು ತಿಳಿದುಬಂದಿದೆ. ಇದೇ ವಿಚಾರವಾಗಿ ಜಮೀರ್ ಮನೆ, ಕಚೇರಿಗಳ ಮೇಲೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಕಣ್ಣಿಟ್ಟಿದ್ದು ಇದೀಗ ದಾಖಲೆಗಳ ಪರಿಶೀಲನೆಯಲ್ಲಿ ತೊಡಗಿದ್ದಾರೆ.

ಇದನ್ನೂ ಓದಿ: ಮಾಜಿ ಸಚಿವ ರೋಷನ್ ಬೇಗ್​ ನಿವಾಸದ ಮೇಲೆ ಇಡಿ ಅಧಿಕಾರಿಗಳಿಂದ ದಾಳಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.