ETV Bharat / city

ಶಾಲೆಗಳ ಪುನಾರಂಭದ ಬಗ್ಗೆ ದುಡುಕುವುದು ಬೇಡ : ಡಾ.ಸಿ ಎನ್ ಮಂಜುನಾಥ್ ಸಲಹೆ

ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ, ಆಡಳಿತ ಪಕ್ಷದಲ್ಲಿ ಆದ ಏರುಪೇರು ಕೂಡ ಶಾಲೆಯಲ್ಲಿ ಭೌತಿಕ ತರಗತಿ ಆರಂಭಿಸಲು ಅಡ್ಡಗಾಲು ಹಾಕಿದೆ.‌ ಕಾರಣ ಮುಖ್ಯಮಂತ್ರಿ ಬದಲಾವಣೆಯಿಂದ ಸಚಿವ ಸಂಪುಟ ಪುನಾರಚನೆ ಆಗಬೇಕಿದೆ‌. ಅಲ್ಲಿವರೆಗೆ ಶಿಕ್ಷಣ ಇಲಾಖೆಗೆ ಶಿಕ್ಷಣ ಸಚಿವರು ಇಲ್ಲದಿರುವುದರಿಂದ ರಾಜ್ಯಮಟ್ಟದ ತೀರ್ಮಾನಗಳನ್ನ ಕೈಗೊಳ್ಳಲು ಅಧಿಕಾರಿಗಳು ಪೇಚಾಡುವಂತಾಗಿದೆ..

Bangalore
ಡಾ.ಸಿ. ಎನ್ ಮಂಜುನಾಥ್
author img

By

Published : Jul 30, 2021, 8:55 PM IST

ಬೆಂಗಳೂರು : ರಾಜ್ಯದಲ್ಲಿ ಕೊರೊನಾ ಭೀತಿ ಕೊಂಚ ಕಡಿಮೆಯಾಯಿತು ಎನ್ನುವ ಬೆನ್ನಲ್ಲೇ ಇದೀಗ ಆತಂಕ ಶುರುವಾಗಿದೆ. ಕೇರಳದಲ್ಲಿ ಕೊರೊನಾ ಪ್ರಕರಣಗಳ ಏರಿಕೆ ಇದಕ್ಕೆ ಕಾರಣ. ಹೀಗಾಗಿ, ರಾಜ್ಯದಲ್ಲಿ ಶಾಲಾರಂಭ ಮಾಡಬೇಕಾ ಅಥವಾ ಬೇಡವಾ? ಎಂಬ ಚರ್ಚೆ ಇನ್ನೂ ನಡೆಯುತ್ತಿದೆ.

ಸರ್ಕಾರ ಏನಾದರೂ ತೀರ್ಮಾನ ಮಾಡಲಿ. ಆಗಸ್ಟ್​​ ಮೊದಲ ವಾರ ಶಾಲೆ ಆರಂಭಿಸುತ್ತೇವೆ ಎಂದು ಖಾಸಗಿ ಶಾಲೆಗಳು ಟೊಂಕ ಕಟ್ಟಿ ನಿಂತಿವೆ. ಇದರ ಬೆನ್ನೆಲ್ಲೇ ಶಾಲಾರಂಭದ ಕುರಿತು ಜಯದೇವ ಆಸ್ಪತ್ರೆಯ ನಿರ್ದೇಶಕರು ಹಾಗೂ ತಾಂತ್ರಿಕ ಸಲಹಾ ಸಮಿತಿಯ ಸದಸ್ಯರಾಗಿರುವ ಡಾ.ಸಿ ಎನ್ ಮಂಜುನಾಥ್ ಅವರು ಶಾಲೆಗಳನ್ನ ಆರಂಭ ಮಾಡುವ ಸೂಕ್ಷ್ಮ ವಿಷಯದಲ್ಲಿ ದುಡುಕುವುದು ಬೇಡ ಎಂದು ಎಚ್ಚರಿಸಿದ್ದಾರೆ.

ಈ ಕುರಿತು ದೂರವಾಣಿ ಮೂಲಕ ಮಾತಾನಾಡಿ ಮಾಹಿತಿ ನೀಡಿರುವ ಅವರು, ನೆರೆಯ ರಾಜ್ಯ ಕೇರಳದಲ್ಲಿ ಕೋವಿಡ್​​ ಪ್ರಕರಣಗಳು ಏರಿಕೆಯಾಗುತ್ತಿವೆ. ಇಂತಹ ಸಮಯದಲ್ಲಿ ಆ ರಾಜ್ಯಕ್ಕೆ ಹೊಂದಿಕೊಂಡಿರುವ ಕರ್ನಾಟಕದಲ್ಲಿ ಶಾಲೆ ಆರಂಭಿಸಲು ಇನ್ನೆರಡು ವಾರಗಳ ಕಾಲ ಕಾದು ನೋಡುವುದು ಒಳಿತು ಎಂದು ಸಲಹೆ ನೀಡಿದ್ದಾರೆ.‌

ಕೊರೊನಾ ಮೊದಲ ಹಾಗೂ 2ನೇ ಅಲೆಯ ವೇಳೆ ಕೇರಳ, ಮಹಾರಾಷ್ಟ್ರದಲ್ಲಿ ಕೇಸ್​​ಗಳು ಏರಿಕೆ ಕಂಡ ಎರಡು ವಾರಗಳ ನಂತರ ಕರ್ನಾಟಕದಲ್ಲಿ ಸೋಂಕಿತರ ಸಂಖ್ಯೆ ಏರಿಕೆ ಕಂಡಿತು. ‌ಹೀಗಾಗಿ, ಈ ಬಾರಿ ಇದೇ ಮಾದರಿಯಲ್ಲಿ ಕೊರೊನಾ‌ ಅಪ್ಪಳಿಸುವ ಸಾಧ್ಯತೆ ಹೆಚ್ಚಿದೆ. ಇಂತಹ ಸೂಕ್ಷ್ಮ ವಿಷಯದಲ್ಲಿ ಆತುರದ ನಿರ್ಧಾರ ತರವಲ್ಲ.

ಇದರ ಬಗ್ಗೆ ಕೂಲಂಕಷವಾಗಿ ಅಧ್ಯಯನ ನಡೆಸಬೇಕಿದೆ. ಮಕ್ಕಳಿಗೆ ಶಾಲೆ ಆರಂಭಿಸುವ ವಾತಾವರಣ ಅಷ್ಟು ಸೂಕ್ತವಾಗಿಲ್ಲ. ಒಂದು ವೇಳೆ ನೆರೆಯ ರಾಜ್ಯದಲ್ಲಿ ಸೋಂಕು ಕಡಿಮೆಯಾಗಿದ್ದರೆ, ಇಲ್ಲಿ ಟ್ರೈಯಲ್ ಮಾಡಬಹುದಿತ್ತು. ಆದರೆ, ಈಗ ಪಕ್ಕದ ರಾಜ್ಯದಲ್ಲಿ ಕೊರೊನಾ ಏರಿಕೆ ಹಿನ್ನೆಲೆ ಇನ್ನೆರಡು ವಾರ ಕಾಯುವುದು ಒಳ್ಳೆಯದು ಎಂದು ತಿಳಿಸಿದರು.

ಮಕ್ಕಳಿಗೆ ಇನ್ನೂ ಸಿಕ್ಕಿಲ್ಲ ಲಸಿಕೆ ಭಾಗ್ಯ : ಸದ್ಯ ರಾಜ್ಯದಲ್ಲಿ 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ದೊರೆಯುತ್ತಿದೆ.‌ ಮಕ್ಕಳಿಗೆ ಲಸಿಕೆ ಬಂದಿಲ್ಲ. ಹೀಗಿರುವಾಗ ಇದರ ಕುರಿತು ನಿಧಾನಗತಿ ಅನಿವಾರ್ಯ.‌ ಕಾರಣ ನೆರೆ ರಾಜ್ಯದ ಪಕ್ಕದಲ್ಲಿರುವ ಮಂಗಳೂರಿನಲ್ಲಿ ಕೇಸ್ ಏರಿಕೆಯಾಗುತ್ತಿವೆ. ಹಾಗೇ ಚಿಕ್ಕಮಗಳೂರು, ಚಾಮರಾಜನಗರ, ಮೈಸೂರು ಭಾಗದಲ್ಲಿ ಕೋವಿಡ್​​ ಪ್ರಕರಣಗಳು ಹೆಚ್ಚಾಗುವ ಸಾಧ್ಯತೆ ಇದೆ. ಹೀಗಾಗಿ, ಮಕ್ಕಳ ಆರೋಗ್ಯದ ದೃಷ್ಟಿಯಿಂದ ಕಾದು ನೋಡಿ ಶಾಲೆ ಆರಂಭಿಸುವುದು ಸೂಕ್ತ ಎಂದು ತಿಳಿಸಿದ್ದಾರೆ.

ಇತ್ತ ಆನ್​​ಲೈನ್ ಕ್ಲಾಸ್​​ನಿಂದಲ್ಲೂ ಮಕ್ಕಳಿಗೆ ಬೇರೆ ಬೇರೆ ಸಮಸ್ಯೆಗಳಿವೆ. ಮಕ್ಕಳಲ್ಲಿ ಒತ್ತಡ, ಮೊಬೈಲ್ ಅಡಿಕ್ಷನ್, ಏಕಾಗ್ರತೆ ಕೊರತೆ ಎದುರಿಸುತ್ತಿದ್ದಾರೆ‌. ಕೊರೊನಾ ಸೋಂಕಿನ ಪ್ರತಿಯೊಂದು ಅಲೆಯು ತೊಂದರೆಯ ಸಾಂಕ್ರಾಮಿಕ ರೋಗವಾಗಿ ಪರಿವರ್ತನೆಯಾಗುತ್ತಿದ್ದು, ಮುಂದಿನ ಅಲೆಯು ಯಾವ ರೀತಿ ಪರಿಣಾಮ ಬೀರಬಲ್ಲದು ತಿಳಿಯದು ಎಂದರು.

ಶಿಕ್ಷಣ ಸಚಿವರಿಲ್ಲದೆ ಬಡವಾದ ಶಿಕ್ಷಣ ಇಲಾಖೆ : ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ, ಆಡಳಿತ ಪಕ್ಷದಲ್ಲಿ ಆದ ಏರುಪೇರು ಕೂಡ ಶಾಲೆಯಲ್ಲಿ ಭೌತಿಕ ತರಗತಿ ಆರಂಭಿಸಲು ಅಡ್ಡಗಾಲು ಹಾಕಿದೆ.‌ ಕಾರಣ ಮುಖ್ಯಮಂತ್ರಿ ಬದಲಾವಣೆಯಿಂದ ಸಚಿವ ಸಂಪುಟ ಪುನಾರಚನೆ ಆಗಬೇಕಿದೆ‌. ಅಲ್ಲಿವರೆಗೆ ಶಿಕ್ಷಣ ಇಲಾಖೆಗೆ ಶಿಕ್ಷಣ ಸಚಿವರು ಇಲ್ಲದಿರುವುದರಿಂದ ರಾಜ್ಯಮಟ್ಟದ ತೀರ್ಮಾನಗಳನ್ನ ಕೈಗೊಳ್ಳಲು ಅಧಿಕಾರಿಗಳು ಪೇಚಾಡುವಂತಾಗಿದೆ.

ಪ್ರಮುಖವಾಗಿ ಈ ಹಿಂದಿನ ಶಿಕ್ಷಣ ಸಚಿವರಾಗಿದ್ದ ಸುರೇಶ್ ಕುಮಾರ್, ಶಾಲಾರಂಭಕ್ಕೆ ಆಯುಕ್ತರ ನೇತೃತ್ವದಲ್ಲಿ ಸಮಿತಿ ರಚನೆ ಮಾಡಿದರು. ಆ ಸಮಿತಿಯು ಸಭೆ ನಡೆಸಿ, ಶಿಫಾರಸು ಕೂಡ ನೀಡಿತ್ತು. ಆದರೆ, ಶಿಫಾರಸ್ಸಿನ ಅಂತಿಮ ಸಭೆ ನಡೆಯುವ ವೇಳೆಗೆ ರಾಜಕೀಯದಲ್ಲಿ ಆದ ಬದಲಾವಣೆಯಿಂದ ಇದೀಗ ಅದು ಕೂಡ ಅರ್ಧಕ್ಕೆ ನಿಂತಿದೆ.

ಈ ಕುರಿತು ಮಾಹಿತಿ ನೀಡಿರುವ ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ ಅನ್ಬುಕುಮಾರ್, ಆಗಸ್ಟ್ ಮೊದಲ ವಾರದಲ್ಲಿ ಶಾಲಾರಂಭಕ್ಕೆ ಶಿಫಾರಸು ಮಾಡಲಾಗಿತ್ತು‌. ಯಾವುದಾದರೂ ಒಂದು ರೀತಿಯಲ್ಲಿ ಮಕ್ಕಳಿಗೆ ಶಿಕ್ಷಣ ನೀಡಬೇಕು. ಅದರಲ್ಲೂ 1-5ನೇ ತರಗತಿ ಮಕ್ಕಳಿಗೆ ಸಂಪೂರ್ಣವಾಗಿ ಎರಡು ವರ್ಷದಿಂದ ಶಾಲೆ ಆರಂಭಿಸಿಲ್ಲ ಎಂಬ ಅಂಶಗಳನ್ನೊಳಗೊಂಡ ಸರ್ವೇ ವರದಿಯನ್ನ ನೀಡಿದರು.‌

ಇದಕ್ಕಾಗಿ ಮುಖ್ಯ ಕಾರ್ಯದರ್ಶಿಗಳ ನೇತೃತ್ವದಲ್ಲಿ ಹಾಗೂ ಟಾಸ್ಕ್ ಫೋರ್ಸ್ ಕಮಿಟಿ ಸದಸ್ಯರಾದ ಡಾ.ಸಿ ಎನ್ ಮಂಜುನಾಥ್ ಅವರೊಂದಿಗೆ ಅಂತಿಮವಾಗಿ ಸಭೆ ನಡೆಸಲು ಈ ತಿಂಗಳ ಅಂತ್ಯದಲ್ಲಿ ತೀರ್ಮಾನ ಮಾಡಲಾಗಿತ್ತು. ಆದರೆ, ಅಷ್ಟರಲ್ಲೇ ಸರ್ಕಾರದಲ್ಲಿ ಬದಲಾವಣೆಯಾಗಿದ್ದು, ಇದೀಗ ಮತ್ತೆ ಶಾಲಾರಂಭ ತಡವಾಗಬಹುದು ಎಂದು ಮಾಹಿತಿ ನೀಡಿದ್ದಾರೆ.‌

ಇದನ್ನೂ ಓದಿ: ಕೋವಿಡ್ 3ನೇ ಅಲೆ ಆರಂಭದ ಆತಂಕ : ಸೋಂಕಿತರ ಸಂಪರ್ಕಿತರಲ್ಲೂ ಹೆಚ್ಚಿದ ಪಾಸಿಟಿವ್ ಪ್ರಕರಣ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.