ETV Bharat / city

ಸಿದ್ದರಾಮಯ್ಯ ನಿವಾಸಕ್ಕೆ ಭೇಟಿ ಕೊಟ್ಟ ಡಿಕೆಶಿ.. ಪದಗ್ರಹಣ ಸಂಬಂಧ ಸುದೀರ್ಘ ಮಾತುಕತೆ.. - ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್

ಮಾಜಿ ಮುಖ್ಯಮಂತ್ರಿ ಹಾಗೂ ವಿಧಾನಸಭೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಕೂಡ ಇದೇ ಸಂದರ್ಭ ಕಾರ್ಖಾನೆಯನ್ನು ಖಾಸಗಿಯವರಿಗೆ ವಹಿಸುವುದನ್ನು ಖಂಡಿಸಿದರು. ಅಲ್ಲದೆ ತಮ್ಮ ಅವಧಿಯಲ್ಲಿ ಇದರ ಪುನಶ್ಚೇತನಕ್ಕೆ ಸಾಕಷ್ಟು ಅನುದಾನ ನೀಡಿದ್ದು, ಈಗಿನ ಸರ್ಕಾರವು ಅದನ್ನು ಮುನ್ನಡೆಸಿಕೊಂಡು ಹೋಗಬೇಕು.

ಡಿಕೆಶಿ
ಡಿಕೆಶಿ
author img

By

Published : Jun 6, 2020, 9:05 PM IST

ಬೆಂಗಳೂರು : ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರು ವಿಧಾನಸಭೆ ಪ್ರತಿಪಕ್ಷ ನಾಯಕ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ಅವರ ನಿವಾಸಕ್ಕೆ ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ.

ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಜೂನ್‌ 7ರಂದು ನನ್ನ ಅಧಿಕಾರ ಪದಗ್ರಹಣ ಸಮಾರಂಭ ನಡೆಸಲು ತೀರ್ಮಾನಿಸಿದ್ದೆವು. ಆದರೆ, ಜೂನ್‌ 8ರವರೆಗೂ ಯಾವುದೇ ಸಾರ್ವಜನಿಕ ಸಮಾರಂಭ ನಡೆಸಲು ರಾಜ್ಯ ಸರ್ಕಾರ ಅನುಮತಿ ನೀಡದ ಹಿನ್ನೆಲೆ ಅದನ್ನು ಪಾಲಿಸಲೇಬೇಕಿದೆ. ಹೀಗಾಗಿ ಜೂನ್‌ 14ಕ್ಕೆ ಪದಗ್ರಹಣ ಸಮಾರಂಭ ಹಮ್ಮಿಕೊಳ್ಳಲು ತೀರ್ಮಾನಿಸಿದ್ದೇವೆ. ಈ ಸಂಬಂಧ ಮುಖ್ಯಮಂತ್ರಿ ಹಾಗೂ ಸರ್ಕಾರದ ಮುಖ್ಯ ಕಾರ್ಯದರ್ಶಿಗಳನ್ನು ಮನವಿ ಮಾಡಿದ್ದು ಸಮ್ಮತಿ ಸಿಗುವ ನಿರೀಕ್ಷೆಯಿದೆ ಎಂದರು.

ಮಾಧ್ಯಮಗಳೊಂದಿಗೆ ಮಾತನಾಡಿದ ಡಿಕೆಶಿ ಹಾಗೂ ಸಿದ್ದರಾಮಯ್ಯ

ಮೈ ಶುಗರ್​​ ಸಕ್ಕರೆ ಕಾರ್ಖಾನೆಯನ್ನು ಖಾಸಗಿಯವರಿಗೆ ಮಾರಾಟ ಮಾಡುವುದರ ಕುರಿತಾಗಿ ಮಾತನಾಡಿದ ಅವರು, ಮೈಸೂರು-ಮಂಡ್ಯಕ್ಕೂ ಭಾವನಾತ್ಮಕ ಸಂಬಂಧವಿದೆ. ಇದನ್ನು ಖಾಸಗಿಯವರಿಗೆ ಮಾರುವುದು ಸರಿಯಲ್ಲ. ಇದೊಂದು ವ್ಯಾಪಾರದ ವಸ್ತು ಅಲ್ಲ. ನೂರಾರು ಎಕರೆ ದೊಡ್ಡ ಆಸ್ತಿ ಇದು. ಇದನ್ನು ಸರ್ಕಾರ ತನ್ನಿಂದ ನಡೆಸಲು ಸಾಧ್ಯವಿಲ್ಲದಿದ್ದರೆ ತಿಳಿಸಲಿ, ಕಾಂಗ್ರೆಸ್ ಪಕ್ಷವೇ ಮುನ್ನಡೆಸಿಕೊಂಡು ಹೋಗಲಿದೆ ಎಂದರು.

ಮಾಜಿ ಮುಖ್ಯಮಂತ್ರಿ ಹಾಗೂ ವಿಧಾನಸಭೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಕೂಡ ಇದೇ ಸಂದರ್ಭ ಕಾರ್ಖಾನೆಯನ್ನು ಖಾಸಗಿಯವರಿಗೆ ವಹಿಸುವುದನ್ನು ಖಂಡಿಸಿದರು. ಅಲ್ಲದೆ ತಮ್ಮ ಅವಧಿಯಲ್ಲಿ ಇದರ ಪುನಶ್ಚೇತನಕ್ಕೆ ಸಾಕಷ್ಟು ಅನುದಾನ ನೀಡಿದ್ದು, ಈಗಿನ ಸರ್ಕಾರವು ಅದನ್ನು ಮುನ್ನಡೆಸಿಕೊಂಡು ಹೋಗಬೇಕು. ಇದು ನಮ್ಮ ನಾಡಿನ ಆಸ್ತಿ ಎಂದು ಅಭಿಪ್ರಾಯಪಟ್ಟರು. ಭೇಟಿ ಸಂದರ್ಭ ಸಮಾಲೋಚನೆ ಈ ಭೇಟಿ ಸಂದರ್ಭ ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಸಹ ಉಪಸ್ಥಿತರಿದ್ದರು. ಶಿವಕುಮಾರ್ ಪದಗ್ರಹಣ ಸಮಾರಂಭದ ಸಂಬಂಧ ಇದೇ ಸಂದರ್ಭ ಸುದೀರ್ಘ ಚರ್ಚೆ ನಡೆಯಿತು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.