ETV Bharat / city

ಕೆಪಿಸಿಸಿ ಪದಾಧಿಕಾರಿಗಳ ಪಟ್ಟಿಗೆ ಅಂತಿಮ ಮುದ್ರೆ ಪಡೆಯಲು ದಿಲ್ಲಿಯಲ್ಲಿ ಡಿಕೆಶಿ ಕಸರತ್ತು - Dk Shivakumar meets congress high command

ಪಂಚರಾಜ್ಯ ಚುನಾವಣೆಯಲ್ಲಿ ಹೀನಾಯ ಪ್ರದರ್ಶನದ ಬಳಿಕ, ರಾಜ್ಯ ಚುನಾವಣೆಗೆ ಒಂದು ವರ್ಷ ಬಾಕಿ ಇರುವ ನಡುವೆಯೂ ಕಾಂಗ್ರೆಸ್ ಹಲವು ಯೋಜನೆಗಳನ್ನು ರೂಪಿಸಿದೆ. ಪಕ್ಷದ ಸಂಘಟನೆಗೆ ಒತ್ತು ನೀಡಿ ಕಾಂಗ್ರೆಸ್ ವರಿಷ್ಠರ ಭೇಟಿಗೆ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ತೆರಳಿದ್ದಾರೆ.

Dk Shivakumar meets congress high command
ಕೆಪಿಸಿಸಿ ಪದಾಧಿಕಾರಿಗಳ ಪಟ್ಟಿಗೆ ಅಂತಿಮ ಮುದ್ರೆ ಪಡೆಯಲು ದಿಲ್ಲಿಯಲ್ಲಿ ಡಿಕೆಶಿ ಕಸರತ್ತು
author img

By

Published : Mar 13, 2022, 11:01 PM IST

ಬೆಂಗಳೂರು: ಪಂಚರಾಜ್ಯ ಚುನಾವಣೆಯಲ್ಲಿ ಕಾಂಗ್ರೆಸ್ ಹೀನಾಯ ಪ್ರದರ್ಶನದ ನಂತರ, ರಾಜ್ಯ ಕಾಂಗ್ರೆಸ್ ಎಚ್ಚೆತ್ತುಕೊಂಡು ಚುನಾವಣೆಗೆ ವರ್ಷ ಬಾಕಿ ಇರುವಾಗಲೇ ಈ ಬಗ್ಗೆ ಹಲವು ಸಿದ್ಧತೆ ಕೈಗೊಳ್ಳಲು ತೀರ್ಮಾನಿಸಿದೆ.

ಒಂದೆಡೆ ಪಕ್ಷದ ಅಧ್ಯಕ್ಷರಾಗಿ ಎರಡೂವರೆ ವರ್ಷ ಹಾಗೂ ಅಧಿಕೃತ ಪದಗ್ರಹಣ ಮಾಡಿ ಎರಡು ವರ್ಷ ಕಳೆಯುತ್ತಾ ಬಂದಿದ್ದು, 2023ರ ಚುನಾವಣೆಗೆ ಇನ್ನೂ ಒಂದು ವರ್ಷ ಬಾಕಿ ಇರುವಾಗಲೇ, ಪಕ್ಷ ಸಂಘಟನೆಗೆ ಒತ್ತು ನೀಡಬೇಕಾದ ಅನಿವಾರ್ಯತೆ ಡಿಕೆಶಿಗೆ ಎದುರಾಗಿದೆ. ಪಂಚರಾಜ್ಯ ಚುನಾವಣೆ ಸೋಲಿನ ಆತಂಕವನ್ನು ಮುಂದಿಟ್ಟುಕೊಂಡು ಪಕ್ಷದ ವರಿಷ್ಠರ ಭೇಟಿಗೆ ತೆರಳಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಶತಾಯ ಗತಾಯ ಈ ಸಾರಿ ಕೆಪಿಸಿಸಿ ವಿವಿಧ ಸಮಿತಿ ಅಧ್ಯಕ್ಷ, ಪದಾಧಿಕಾರಿಗಳ ನೇಮಕ ಪಟ್ಟಿಗೆ ಹೈಕಮಾಂಡ್ ನಾಯಕರಿಂದ ಅಂತಿಮ ಮುದ್ರೆ ಹಾಕಿಸಿಕೊಂಡೆ ಬರಲು ತೀರ್ಮಾನಿಸಿದ್ದಾರೆ. ಬರೋಬ್ಬರಿ 300 ಮಂದಿಯ ಹೆಸರನ್ನು ಒಳಗೊಂಡ ಬೃಹತ್ ಪಟ್ಟಿಯೊಂದಿಗೆ ದಿಲ್ಲಿಗೆ ತೆರಳಿರುವ ಡಿಕೆಶಿ ಈ ಮೂಲಕ ಪಕ್ಷ ಸಂಘಟನೆ, ನಾಯಕರಿಗೆ ಜವಾಬ್ದಾರಿ ವಹಿಸಲು ಚಿಂತನೆ ನಡೆಸಿದ್ದಾರೆ.

ಪಕ್ಷದ ಸದಸ್ಯತ್ವ ನೋಂದಣಿ, ಯುವ ಕಾಂಗ್ರೆಸ್, ಮಹಿಳಾ ಮತ್ತು ಇತರೆ ವಿಭಾಗಗಳ ಬಲವರ್ಧನೆಗೆ ಕಾರ್ಯಯೋಜನೆ ರೂಪಿಸುತ್ತಿರುವ ಡಿಕೆಶಿ ಸದ್ಯ ದಿಲ್ಲಿಗೆ ತೆರಳಿದ್ದು, ಸೋಮವಾರ ಪಕ್ಷದ ಮುಖಂಡ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಿ ತಾವು ತೆಗೆದುಕೊಂಡು ಹೋಗಿರುವ ಕೆಪಿಸಿಸಿ ಪದಾಧಿಕಾರಿಗಳ ನೇಮಕ ಪಟ್ಟಿಗೆ ಅಂತಿಮ ಒಪ್ಪಿಗೆ ಪಡೆಯಲು ನಿರ್ಧರಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ಅತಿ ಹೆಚ್ಚು ಸದಸ್ಯತ್ವ ನೋಂದಣಿ ಮಾಡಿರುವ, ಕಾಂಗ್ರೆಸ್ ಪಕ್ಷದ ಮೇಕೆದಾಟು ಪಾದಯಾತ್ರೆ ಸಂದರ್ಭ ಪಕ್ಷದ ಬಲವಾಗಿ ನಿಂತು ಜನರನ್ನು ಸಂಘಟಿಸಿರುವ, ಅಚ್ಚುಕಟ್ಟಾಗಿ ಪಾದಯಾತ್ರೆ ನಡೆಸಿಕೊಂಡು ಸಾಗಿರುವ ನಾಯಕರಿಗೆ ಆದ್ಯತೆ ನೀಡಿ ಪಟ್ಟಿ ಸಿದ್ಧಪಡಿಸಿಕೊಂಡು ಡಿಕೆಶಿ ತೆರಳಿದ್ದಾರೆ ಎಂಬ ಮಾಹಿತಿ ಇದೆ. ಯುವ ತಂಡವನ್ನು ಕಟ್ಟುವ ಜತೆಗೆ ಹಿರಿಯರ ಮಾರ್ಗದರ್ಶನವನ್ನೂ ನೀಡಲು ಅನುಕೂಲವಾಗುವ ರೀತಿ ಪಟ್ಟಿ ಸಿದ್ಧಪಡಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ಕಳೆದ ತಿಂಗಳು ದಿಲ್ಲಿಗೆ ತೆರಳಿದ್ದ ಸಂದರ್ಭ ಪದಾಧಿಕಾರಿಗಳ ಪಟ್ಟಿಯನ್ನು ಪಕ್ಷದ ಹಿರಿಯ ನಾಯಕ ರಾಹುಲ್ ಗಾಂಧಿ ಮುಂದೆ ಇಟ್ಟಾಗ ಪಕ್ಷದ ಎಲ್ಲಾ ರಾಜ್ಯದ ಎಲ್ಲ ನಾಯಕರ ವಿಶ್ವಾಸ ಪಡೆದು ಪಟ್ಟಿ ಸಿದ್ಧಪಡಿಸಿಕೊಂಡು ಬರುವಂತೆ ಸಲಹೆ ನೀಡಿದ್ದರು. ಈ ಹಿನ್ನೆಲೆ ಶಿವಕುಮಾರ್ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ, ಐವರು ಕಾಯಾಧ್ಯಕ್ಷರು ಸೇರಿದಂತೆ ಪಕ್ಷದ ಇತರ ಹಿರಿಯ ನಾಯಕರ ಜೊತೆ ಸಮಾಲೋಚನೆ ನಡೆಸಿ ಪಟ್ಟಿ ಸಿದ್ದಪಡಿಸಿಕೊಂಡು ದೆಹಲಿಗೆ ತೆರಳಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಪಕ್ಷದ ಬಲವರ್ಧನೆಗೆ ತಳಮಟ್ಟದ ಸಂಘಟನೆ ಅನಿವಾರ್ಯ: ಪಕ್ಷ ಅಧಿಕಾರಕ್ಕೆ ಬರಬೇಕು ಎಂದರೆ ಅಲ್ಲಿ ಯುವ ನಾಯಕತ್ವ ಹಾಗೂ ಪಕ್ಷದ ತಳಮಟ್ಟದ ಸಂಘಟನೆ ಅನಿವಾರ್ಯ ಎಂಬ ವಿಚಾರ ಅರಿತಿರುವ ಡಿಕೆಶಿ, ಇದಕ್ಕೆ ಸೂಕ್ತ ರೀತಿ ಪಟ್ಟಿ ಸಿದ್ಧಪಡಿಸಿಕೊಂಡು ತೆರಳಿದ್ದಾರೆ. ಎಲ್ಲರ ವಿಶ್ವಾಸ ಪಡೆದು ಪಟ್ಟಿ ಸಿದ್ಧಪಡಿಸಿ, ತಳಮಟ್ಟದ ನಾಯಕರಿಗೆ ಅಧಿಕಾರ ನೀಡಿ, ಪಕ್ಷವನ್ನು ಬಲಪಡಿಸುವ ನಿಟ್ಟಿನಲ್ಲಿ ಕ್ರಮ ಕೈಗೊಂಡಿದ್ದಾರೆ. ಮುಂಬರುವ ದಿನಗಳಲ್ಲಿ ಕಾರ್ಯಕರ್ತರೇ ಪಕ್ಷದ ಆಸ್ತಿ ಎಂಬುದನ್ನು ಮನಗಂಡಿರುವ ಅವರು, ಅವಕಾಶವನ್ನು ಸಹ ತಳಮಟ್ಟದಲ್ಲಿದ್ದು, ಉತ್ತಮ ಸಂಘಟನೆಯಲ್ಲಿ ತೊಡಗಿದವರನ್ನು ಹುಡುಕಿ ಹುಡುಕಿ ಪಟ್ಟಿಗೆ ಸೇರಿಸಿಕೊಂಡಿದ್ದಾರೆ. ರಾಹುಲ್ ಗಾಂಧಿ ಪಟ್ಟಿಗೆ ಅಸ್ತು ಎಂದರೆ ಮುಂದಿನ ವಾರದಿಂದಲೇ ಕೆಪಿಸಿಸಿ ಪದಾಧಿಕಾರಿಗಳ ನೇಮಕ ಪ್ರಕ್ರಿಯೆ ಆರಂಭವಾಗಲಿದೆ ಎಂದು ತಿಳಿದುಬಂದಿದೆ.

ಓದಿ : ಕಾಂಗ್ರೆಸ್​ಗೆ​ ಮತ್ತೆ ಗಾಂಧಿ ಕುಟುಂಬವೇ ಸಾರಥ್ಯ: ​ಹಂಗಾಮಿ ಅಧ್ಯಕ್ಷರಾಗಿ ಸೋನಿಯಾ ಮುಂದುವರಿಕೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.