ಬೆಂಗಳೂರು : ರಾಜ್ಯ ಪೊಲೀಸ್ ವಸತಿ ನಿಗಮದ ಡಿಜಿಪಿ ಆರ್ ಪಿ ಶರ್ಮಾ ಅವರ ಗನ್ನಿಂದ ಮಿಸ್ ಫೈರ್ ಆಗಿರುವ ಘಟನೆ ಕೊತ್ತನೂರು ಪೊಲೀಸ್ ಠಾಣಾ ವ್ಯಾಪ್ತಿಯ ಮನೆಯಲ್ಲಿ ಬೆಳಕಿಗೆ ಬಂದಿದೆ. ಸದ್ಯ ಗಾಯಗೊಂಡಿರುವ ಶರ್ಮಾ ಅವರನ್ನು ಹೆಬ್ಬಾಳದ ಕೊಲಂಬಿಯಾ ಏಷ್ಯಾ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ. ಆಸ್ಪತ್ರೆಗೆ ನಗರ ಪೊಲೀಸ್ ಆಯುಕ್ತ ಕಮಲ್ ಪಂಥ್ ಹಾಗೂ ಡಿಸಿಪಿ ಭೇಟಿ ನೀಡಿದ್ದಾರೆ.
ಡಿಸಿಪಿ ಡಾ. ಭೀಮಾಶಂಕರ್ ಗುಳೇದ್ ಅವರು ಘಟನೆ ಬಗ್ಗೆ ಮಾಹಿತಿ ಹಂಚಿಕೊಂಡಿದ್ದು, ಮಿಸ್ ಫೈರ್ ಆಗಿದೆ ಎಂದಿದ್ದಾರೆ. ಎದೆ ಹಾಗೂ ಕುತ್ತಿಗೆಗೆ ಗಾಯಗಳಾಗಿದ್ದು, ಸದ್ಯ ಶರ್ಮಾ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಅಲ್ಲದೆ ಯಾವುದೇ ಸಮಸ್ಯೆ ಇಲ್ಲ ಎಂದಿದ್ದಾರೆ.
ಮಿಸ್ ಫೈರ್ ಆಗಿರುವುದರ ನಡುವೆ, ಡಿಜಿಪಿ ಆತ್ಮಹತ್ಯೆಗೆ ಯತ್ನ ಪಟ್ಟಿದ್ರು ಅನ್ನೋ ವಿಚಾರ ಕೇಳಿ ಬಂದಿತ್ತು. ಇದು ಕೂಡ ಸುಳ್ಳು ಎಂದು ಗುಳೇದ್ ತಿಳಿಸಿದ್ದಾರೆ. ಮತ್ತೊಂದೆಡೆ ಮಿಸ್ ಫೈರ್ ಆಗಲು ಹೇಗೆ ಸಾಧ್ಯ? ಐಪಿಎಸ್ ಅಧಿಕಾರಿಗಳು ವೆಪನ್ ಕ್ಲೀನ್ ಮಾಡಲು ಹೋಗುವುದಿಲ್ಲ. ಅವನ್ನೆಲ್ಲಾ ತಮ್ಮ ಜೊತೆಗೆ ಇರುವ ಗನ್ಮ್ಯಾನ್ ನೋಡಿಕೊಳ್ಳುತ್ತಾರೆ ಎನ್ನುವ ಮಾತುಗಳು ಕೇಳಿ ಬಂದಿವೆ.
ಶರ್ಮಾ ಅವರು 1987 ಬ್ಯಾಚ್ನ ಐಪಿಎಸ್ ಅಧಿಕಾರಿಯಾಗಿದ್ದಾರೆ. ರಾಜ್ಯ ಪೊಲೀಸ್ ಮಹಾನಿರ್ದೇಶಕರ ಹುದ್ದೆಗೆ ಇವರ ಹೆಸರು ಕೂಡ ಕೇಳಿ ಬಂದಿತ್ತು. ನಂತರ ಸದ್ಯ ಇರುವ ಪ್ರವೀಣ್ ಸೂದ್ ಅವರು ರಾಜ್ಯ ಪೊಲೀಸ್ ಮಹಾನಿರ್ದೇಶಕರಾಗಿದ್ದಾರೆ. ಶರ್ಮಾ ಅವರು ಸದ್ಯ ಪೊಲೀಸ್ ಹೌಸಿಂಗ್ ಬೋರ್ಡ್ ಡಿಜಿಪಿಯಾಗಿ ಕಾರ್ಯನಿರ್ವಹಣೆ ಮಾಡ್ತಿದ್ದಾರೆ.