ETV Bharat / city

ದೀಪಾವಳಿ ಸಂಭ್ರಮ: ಮಾರುಕಟ್ಟೆಯಲ್ಲಿ ಹಣತೆಗಳ ಮಾರಾಟ ಬಲು ಜೋರು...

ದೀಪಾವಳಿ ಹಬ್ಬಕ್ಕೆ ಇನ್ನು ಎರಡೇ ದಿನ ಬಾಕಿ ಇರುವ ಕಾರಣ ಮಾರುಕಟ್ಟೆಯಲ್ಲಿ ನೂರಾರು ಬಗೆಯ ಹಣತೆಗಳು ಬಂದಿದ್ದು, ಹೆಣ್ಣು ಮಕ್ಕಳು ಹಣತೆಗಳ ಖರೀದಿಯಲ್ಲಿ ತೊಡಗಿರುವ ದೃಶ್ಯ ಕಂಡು ಬಂತು.

bnaglore
ವಿಭಿನ್ನ ರೀತಿಯ ಹಣತೆಗಳು
author img

By

Published : Nov 11, 2020, 5:21 PM IST

ಬೆಂಗಳೂರು: ಕತ್ತಲಿನಿಂದ ಬೆಳಕಿನೆಡೆಗೆ ಕರೆದೊಯ್ಯೋ ಹಬ್ಬ ಅಂದರೆ ದೀಪಾವಳಿ. ಈ ಹಬ್ಬದ ಪ್ರಮುಖ ಆಕರ್ಷಣೆಯೇ ಬಣ್ಣಗಳಿಂದ ಕೂಡಿದ ಹಾಗೂ ವಿಭಿನ್ನ ರೀತಿಯ ಹಣತೆಗಳು. ಬೆಳಕಿನ ಹಬ್ಬಕ್ಕೆ ಇನ್ನು ಎರಡೇ ದಿನ ಬಾಕಿ ಇರುವ ಕಾರಣ ಮಾರುಕಟ್ಟೆಯಲ್ಲಿ ಹಣತೆಗಳ ಮಾರಾಟ ಜೋರಾಗಿದೆ. ನಾನಾ ರೀತಿಯ ಹಲವು ಬಣ್ಣಗಳಿಂದ ಕೂಡಿರುವ ಹಣತೆಗಳು ಎಲ್ಲರನ್ನೂ ಆಕರ್ಷಿಸುತ್ತಿದೆ.

ದೀಪಾವಳಿ ಆಚರಣೆಗೆ ಆಕರ್ಷಕವಾಗಿರುವ ನೂರಾರು ಬಗೆಯ ಹಣತೆಗಳು ಮಾರುಕಟ್ಟೆಗೆ ಬಂದಿವೆ.

ಹಬ್ಬ ಅಂತ ಬಂದರೆ ಜನರು ಎಲ್ಲವನ್ನೂ ಮರೆತು ಸಂಭ್ರಮದಿಂದ ಮನೆಮಂದಿ ಎಲ್ಲಾ ಆಚರಿಸುತ್ತಾರೆ. ಇತ್ತ ಮಾರುಕಟ್ಟೆಯಲ್ಲಿ ಹೆಣ್ಣು ಮಕ್ಕಳು ಹಣತೆಗಳ ಖರೀದಿಯಲ್ಲಿ ತೊಡಗಿರುವ ದೃಶ್ಯ ಕಂಡು ಬಂತು. ಸಾಮನ್ಯವಾಗಿ ಹಣತೆಯನ್ನು ವೆಸ್ಟ್ ಬೆಂಗಾಲ್, ರಾಜಸ್ಥಾನ, ಗುಜರಾತ್, ತಮಿಳುನಾಡು, ಆಂಧ್ರಪ್ರದೇಶಗಳಿಂದ ಆಮದು ಮಾಡಿಕೊಳ್ಳಲಾಗುತ್ತದೆ.‌ ಕರ್ನಾಟಕದಲ್ಲಿ ಬೆಂಗಳೂರು ಗ್ರಾಮಾಂತರ ಭಾಗ ಹಾಗೂ ಕುಂಬಾರರಿಂದ ತರಿಸಿಕೊಳ್ಳುವುದು ಇದೆ‌‌.

ಇನ್ನು ಈ ಬಾರಿ ಕೊರೊನಾ ವೈರಸ್ ಎಲ್ಲಾ ಸಂಭ್ರಮಗಳಿಗೂ ಕಡಿವಾಣ ಹಾಕಿದ್ದು, ಕಟ್ಟುನಿಟ್ಟಾಗಿ ಆಚರಿಸುವ ಸ್ಥಿತಿ ನಿರ್ಮಿಸಿದೆ. ಕೊರೊನಾ ಕಾರಣಕ್ಕೆ‌ ಜನರು ಖರೀದಿಗೆ ಹಿಂದೇಟು ಹಾಕುತ್ತಿದ್ದಾರೆ ಎಂದು ವರ್ಣ ಸ್ಟೋರ್​ನ ಮಾಲೀಕ ಅರುಣ್ ತಿಳಿಸಿದರು. ಈ ಸಲ ಮಣ್ಣಿನ ಹಣತೆಯು ಸೇರಿದಂತೆ ರಂಗು ತುಂಬಿರುವ ಮಡಿಕೆಯ ಆಕಾರದ, ತೇಲುವ, ತೂಗಾಡುವ ದೀಪಗಳು, ನವಿಲಿನ ದೀಪ ಹೀಗೇ ನೂರಾರು ಬಗೆಯ ಹಣತೆಗಳನ್ನು ತರಿಸಲಾಗಿದೆ ಎಂದು ಮಾಹಿತಿ ನೀಡಿದರು.

ಹಬ್ಬಕ್ಕೆ ಇನ್ನು ಎರಡು ದಿನಗಳು ಇರುವುದರಿಂದ ಜನರು ಬರುವ ನಿರೀಕ್ಷೆಯಲ್ಲಿ ಇದ್ದಾರೆ. 10 ರೂಪಾಯಿಯಿಂದ ಶುರುವಾಗುವ ಹಣತೆಯ ಬೆಲೆಯು ಆಯಾ ಡಿಸೈನ್​ಗೆ ತಕ್ಕಂತೆ ದರ ನಿಗಧಿ ಮಾಡಲಾಗಿದೆ.

ಒಟ್ಟಾರೆ ಅಂಧಕಾರವನ್ನು ಅಳಿಸಿ ಜ್ಞಾನವನ್ನು ಮೂಡಿಸುವ ಬೆಳಕಿನ ಹಬ್ಬಕ್ಕೆ ತಯಾರಿ ಜೋರಾಗಿ ನಡೆಯುತ್ತಿದೆ. ಆದರೆ ಕೊರೊನಾ ಅನ್ನೋ ಕರಿಛಾಯೆ ಹಬ್ಬದ ಸಂಭ್ರಮವನ್ನೇ ಕಸಿದುಕೊಂಡಿದೆ. ಇನ್ನು ಈ ದೀಪಾವಳಿ ಹಬ್ಬ ಕೊರೊನಾ ಅಂಧಕಾರವನ್ನು ತೊಲಗಿಸಲಿ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.