ETV Bharat / city

20 ಲಕ್ಷ ರೂ. ಮೌಲ್ಯದ ದಿನಸಿ ವಿತರಿಸಿದ ಶಾಂತಾ ಕೃಷ್ಣಮೂರ್ತಿ ಫೌಂಡೇಶನ್ - corona virus

ದೇಶದಲ್ಲಿ ಕೊರೊನಾ ವೈರಸ್ ನಿಯಂತ್ರಣಕ್ಕೆ ಬರುವವರೆಗೂ ನಿಮಗೆ ಬೇಕಾದ ದಿನಸಿ ಸಾಮಗ್ರಿಗಳನ್ನ ನಿಮ್ಮ ಮನೆ ಬಾಗಿಲಿಗೆ ತಲುಪಿಸುತ್ತೇವೆ ಎಂಬ ಭರವಸೆಯನ್ನ ಈ ಫೌಂಡೇಶನ್ ನೀಡಿದೆ.

distribution-for-groceries-to-poor-people
ದಿನಸಿ ವಿತರಣೆ
author img

By

Published : Apr 1, 2020, 8:19 PM IST

ಬೆಂಗಳೂರು: ಲಾಕ್​​​​​ಡೌನ್​​​ನಿಂದಾಗಿ ದಿನಗೂಲಿ ನೌಕರರು, ಬಡವರು, ನಿರ್ಗತಿಕರು ಮನೆ ಬಿಟ್ಟು ಹೊರಗೆ ಬರದಂತಾಗಿದೆ. ದಿನಸಿ ಕೊಂಡುಕೊಳ್ಳಲು ಹಣವೂ ಇಲ್ಲದೇ ಕಂಗಾಲಾಗಿದ್ದಾರೆ. ಹೀಗಾಗಿ ಹಲವು ಸಂಘ-ಸಂಸ್ಥೆಗಳು ಆಹಾರ ಸಾಮಗ್ರಿಗಳನ್ನು ವಿತರಿಸುತ್ತಿವೆ.

ಅದೇ ರೀತಿ, ನಗರದ ರಾಮಮೂರ್ತಿನಗರ ವಾರ್ಡ್​​​ನ ಬಡವರು, ನಿರ್ಗತಿಕರಿಗೆ ಶಾಂತಾ ಕೃಷ್ಣಮೂರ್ತಿ ಫೌಂಡೇಶನ್​​ನಿಂದ 20 ಲಕ್ಷ ಮೌಲ್ಯದ ದಿನಸಿ ಪದಾರ್ಥಗಳನ್ನು ಖರೀದಿಸಿ, ಪ್ರತಿ ಕುಟುಂಬಕ್ಕೆ 5 ಕೆಜಿ ಅಕ್ಕಿ, 2 ಕೆಜಿ ಬೇಳೆ, 1 ಕೆಜಿ ಉಪ್ಪು, ಒಂದು ಲೀಟರ್ ಎಣ್ಣೆ, 2 ಕೆಜಿ ಸಕ್ಕರೆ ಸೇರಿದಂತೆ ಇತರ ವಸ್ತುಗಳನ್ನು ಸುಮಾರು 2000ಕ್ಕೂ ಹೆಚ್ಚು ಕುಟುಂಬಗಳಿಗೆ ವಿತರಿಸಲಾಗಿದೆ.

ಅಷ್ಟೇ ಅಲ್ಲದೇ, 25 ಸಾವಿರ ಮಂದಿಗೆ ಮಾಸ್ಕ್, 5 ಸಾವಿರ ಸ್ಯಾನಿಟೈಸರ್​​ಗಳನ್ನೂ ಸಹ ವಿತರಿಸಿದರು. ಕೊರೊನಾ ವೈರಸ್ ನಿಯಂತ್ರಣಕ್ಕೆ ಬರುವವರೆಗೂ ಮನೆಯಲ್ಲೇ ಇರಿ ಎಂದು ಫೌಂಡೇಷನ್ ತಿಳಿಸಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.