ETV Bharat / city

ದತ್ತಾಂಶ ಗೌಪ್ಯತೆ ಕಾಪಾಡಲು ಇ-ಸಹಮತಿ ವಿನೂತನ ತಂತ್ರಾಂಶ ಅಭಿವೃದ್ಧಿ: ರಾಜೀವ್ ಚಾವ್ಲಾ - ನಾಗರಿಕರ ದತ್ತಾಂಶ ಗೌಪ್ಯತೆ

ಇ-ಸಹಮತಿ ತಂತ್ರಾಂಶದ ಮೂಲಕ ಉದ್ಯೋಗಾಕಾಂಕ್ಷಿ ಯಾವುದೇ ಉದ್ಯೋಗದಾತರೊಂದಿಗೆ ಸುರಕ್ಷಿತವಾದ ರೀತಿಯಲ್ಲಿ ತನ್ನ ಪ್ರಮಾಣ ಪತ್ರಗಳನ್ನು/ದಾಖಲೆಗಳನ್ನು ಸಹಮತಿ ನೀಡುವ ಮೂಲಕ ಸುಲಲಿತವಾಗಿ ಹಂಚಿಕೊಳ್ಳಬಹುದು. ಈ ಪ್ರಕ್ರಿಯೆಯು ಎಲೆಕ್ಟ್ರಾನಿಕ್ ರೂಪದಲ್ಲಿ ನಡೆಯುವುದರಿಂದ ಹೆಚ್ಚಿನ ಸಮಯ ತೆಗೆದುಕೊಳ್ಳುವುದಿಲ್ಲ..

ರಾಜೀವ್ ಚಾವ್ಲಾ
ರಾಜೀವ್ ಚಾವ್ಲಾ
author img

By

Published : Dec 17, 2021, 6:47 AM IST

ಬೆಂಗಳೂರು : ರಾಜ್ಯ ಸರ್ಕಾರವು ನಾಗರಿಕರ ದತ್ತಾಂಶ ಗೌಪ್ಯತೆ ಕಾಪಾಡಲು ಮತ್ತು ಸುರಕ್ಷಿತವಾಗಿ ಅದನ್ನು ಇತರೆ ಸಂಸ್ಥೆಯೊಂದಿಗೆ ಹಂಚಿಕೊಳ್ಳಲು ವಿನೂತನ ತಂತ್ರಾಂಶವನ್ನು ಅಭಿವೃದ್ಧಿಪಡಿಸಲಾಗಿದೆ ಎಂದು ಆಡಳಿತ ಸುಧಾರಣಾ ಇಲಾಖೆಯ (ಇ-ಆಡಳಿತ) ಅಪರ ಮುಖ್ಯ ಕಾರ್ಯದರ್ಶಿ ರಾಜೀವ್ ಚಾವ್ಲಾ ತಿಳಿಸಿದರು.

ಈ ಬಗ್ಗೆ ಮಾಹಿತಿ ನೀಡಿದ ಅವರು, ಇ-ಸಹಮತಿ ತಂತ್ರಾಂಶವನ್ನು 'ನ್ಯಾಷನಲ್ ಇನ್‍ಫಾರ್ಮೇಟಿಕ್ ಸೆಂಟರ್' ಸಂಸ್ಥೆ (ಎನ್‍ಐಸಿ) ಅಭಿವೃದ್ಧಿ ಪಡಿಸಿದೆ. ಈ ತಂತ್ರಾಂಶದಲ್ಲಿ ಸೂಕ್ಷ್ಮ/ವೈಯುಕ್ತಿಕ ದತ್ತಾಂಶವನ್ನು ಸಂಬಂಧಪಟ್ಟ ನಾಗರಿಕರ ಸಹಮತಿ ಪಡೆದ ನಂತರ ನೋಂದಾಯಿತ ಖಾಸಗಿ ಸಂಸ್ಥೆಯೊಂದಿಗೆ ಹಂಚಿಕೊಳ್ಳಲು ಉಪಯುಕ್ತವಾಗಿದೆ. ಶೀಘ್ರದಲ್ಲಿಯೇ ನಾಗರಿಕರ ಉಪಯೋಗಕ್ಕಾಗಿ ವಿನೂತನ ತಂತ್ರಾಂಶಕ್ಕೆ ಚಾಲನೆ ನೀಡಲಾಗುವುದು ಎಂದು ಹೇಳಿದರು.

ಇಂತಹ ಒಂದು ವಿಶಿಷ್ಟ, ವಿನೂತನವಾದ ತಂತ್ರಾಂಶವನ್ನು ರಾಜ್ಯ ಸರ್ಕಾರದಿಂದ ಅಭಿವೃದ್ಧಿಪಡಿಸಲಾಗಿದೆ. ಇದು ಇಡೀ ದೇಶದಲ್ಲಿ ವಿನೂತನವಾಗಿದೆ. ಕೇಂದ್ರ ಕೌಶಲ್ಯಾಭಿವೃದ್ಧಿ ಮತ್ತು ರಾಜ್ಯ ಸಚಿವರ ಸೂಚನೆ ಮೇರೆಗೆ ಇತರೆ ರಾಜ್ಯಗಳಿಗೂ ಸಹ ಈ ತಂತ್ರಾಂಶದ ಸೇವೆಯನ್ನು ಬಳಸಿಕೊಳ್ಳಲು ಅವಕಾಶ ಕಲ್ಪಿಸಲಾಗುವುದು. ಈಗಾಗಲೇ ಈ ತಂತ್ರಾಂಶದ ಸೇವೆಯನ್ನು ಒದಗಿಸುವಂತೆ ತೆಲಂಗಾಣ ರಾಜ್ಯವು ಪತ್ರ ಬರೆದಿರುತ್ತದೆ ಎಂದು ತಿಳಿಸಿದರು.

ಇ- ಸಹಮತಿ ತಂತ್ರಾಂಶದಲ್ಲಿ ದತ್ತಾಂಶ ಒಡೆಯನು ತನ್ನ ದತ್ತಾಂಶವನ್ನು ನಿಗದಿತ ಉದ್ದೇಶಕ್ಕಾಗಿ ಬಳಸಲು ನೀಡಿರುವ ಸಹಮತಿಯಂತೆ, ಕೇವಲ ಉದ್ದೇಶಕ್ಕಾಗಿ ಮಾತ್ರ ದತ್ತಾಂಶ ಬಳಕೆಯು ಸೀಮಿತವಾಗಿದೆ. ಅವಶ್ಯವಿರುವ ದತ್ತಾಂಶವನ್ನು ಮಾತ್ರ ನಾಗರಿಕರಿಂದ ಪಡೆಯಲಾಗುವುದು. ದತ್ತಾಂಶದ ಬಳಕೆಗೆ ಕಾಲಮಿತಿಯನ್ನು ನಿಗದಿಪಡಿಸಲಾಗಿದೆ. ದತ್ತಾಂಶ ಅವಶ್ಯಕತೆ ಇರುವವರಿಗೆ ಮಾತ್ರ ಬಳಸಿ ನಂತರ ಅಳಿಸಬಹುದಾಗಿದೆ. ಈ ದತ್ತಾಂಶವು ಸುರಕ್ಷಿತವಾಗಿ ನಿರ್ವಹಣೆಯಾಗಿರುತ್ತದೆ ಎಂದರು.

ರಾಜ್ಯದ ಎಸ್‍ಎಸ್‍ಎಲ್‍ಸಿ, ಪಿಯುಸಿ ಪರೀಕ್ಷಾ ಮಂಡಳಿ, 60ಕ್ಕೂ ಅಧಿಕ ವಿಶ್ವವಿದ್ಯಾಲಯಗಳಿಂದ ವಿದ್ಯಾರ್ಥಿಗಳ ದತ್ತಾಂಶ ಪಡೆದುಕೊಳ್ಳಲಾಗಿದೆ. ಮುಂದಿನ ದಿನಗಳಲ್ಲಿ ಸರ್ಕಾರ ವಿವಿಧ ಇಲಾಖೆ, ಅಂಗಸಂಸ್ಥೆಗಳಿಂದಲೂ ನಾಗರಿಕರ ದತ್ತಾಂಶಗಳನ್ನು ಪಡೆದುಕೊಳ್ಳಲಾಗುತ್ತದೆ.

ಸರ್ಕಾರಿ ಅಥವಾ ಉನ್ನತ ಖಾಸಗಿ ಸಂಸ್ಥೆಗಳು ಇ-ಆಡಳಿತ ಇಲಾಖೆಯೊಂದಿಗೆ ನಿಗದಿತ ಹಣ ಪಾವತಿಸಿ ನೋಂದಣಿ ಮಾಡಿಕೊಂಡು ತಮ್ಮ ಅಭ್ಯರ್ಥಿಗಳ ಅನುಮತಿ ಮೇರೆಗೆ ಅವರ ದತ್ತಾಂಶವನ್ನು ಅಧಿಕೃತ ಇಲಾಖೆ/ಸಂಸ್ಥೆಯಿಂದಲೇ ಕ್ಷಣ ಮಾತ್ರದಲ್ಲಿ ಪಡೆದು ಪರಿಶೀಲಿಸಿಕೊಳ್ಳಬಹುದು. ಆಸಕ್ತ ಖಾಸಗಿ ಸಂಸ್ಥೆಗಳು ಇ-ಸಹಮತಿ ನೋಂದಣಿಗೆ ಅರ್ಜಿ ಸಲ್ಲಿಸಬಹುದು ಎಂದು ತಿಳಿಸಿದರು.

ಸಾರ್ವಜನಿಕರ ದತ್ತಾಂಶ ಸುರಕ್ಷತೆಗೆ ಆದ್ಯತೆ ನೀಡಿದ್ದು, ಗೌಪ್ಯತೆ ಕಾಪಾಡಿಕೊಳ್ಳಲಾಗುತ್ತದೆ. ಸಾರ್ವಜನಿಕರು ತಮ್ಮ ದತ್ತಾಂಶದ ಮಾಲೀಕರಾಗಿದ್ದು, ಇಚ್ಛೆಪಟ್ಟರೆ ಮಾತ್ರ ದತ್ತಾಂಶ ವಿನಿಮಯ ಮಾಡಿಕೊಳ್ಳಬಹುದು. ಇಲಾಖೆಯಿಂದಲೇ ನೇರವಾಗಿ ಮಾಹಿತಿ ಲಭ್ಯವಿರುವುದರಿಂದ ಇ ಆಡಳಿತ ಇಲಾಖೆಯಿಂದ ಅಥವಾ ತಂತ್ರಾಂಶದಿಂದ ಸಾರ್ವಜನಿಕರ ಮಾಹಿತಿ ಸೋರಿಕೆಯಾಗುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಇತ್ತೀಚಿನ ದಿನಗಳಲ್ಲಿ ಕೆಲವು ಉದ್ಯೋಗಾಕಾಂಕ್ಷಿಗಳು ನಕಲಿ ಪ್ರಮಾಣ ಪತ್ರವನ್ನು ಉದ್ಯೋಗದಾತರಿಗೆ ಸಲ್ಲಿಸುತ್ತಿರುವುದು ಕಂಡು ಬರುತ್ತಿದೆ. ಇದಲ್ಲದೆ ಸಾಂಪ್ರದಾಯಿಕ ವ್ಯವಸ್ಥೆಯಲ್ಲಿ ಪ್ರಮಾಣಪತ್ರಗಳನ್ನು ದೃಢೀಕರಿಸಿ ಉದ್ಯೋಗದಾತರಿಗೆ ಸಲ್ಲಿಸುವ ಪ್ರಕ್ರಿಯೆ ಕ್ಲಿಷ್ಟಕರ ಹಾಗೂ ಹೆಚ್ಚಿನ ಸಮಯ ತೆಗೆದುಕೊಳ್ಳುತ್ತಿದೆ.

ಸದ್ಯದ ಪರಿಸ್ಥಿತಿಯಲ್ಲಿ ದಾಖಲೆಗಳ ಪರಿಶೀಲನೆ ಪ್ರಕ್ರಿಯೆಯು ಅತಿ ಹೆಚ್ಚಿನ ಸಮಯ ತೆಗೆದುಕೊಳ್ಳುವುದರಿಂದ ಉದ್ಯೋಗಾಕಾಂಕ್ಷಿಗಳಿಗೆ ಉದ್ಯೋಗವನ್ನು ನೀಡುವುದು ವಿಳಂಬವಾಗುತ್ತಿದೆ. ಇಂತಹ ಸಮಸ್ಯೆಗಳ ನಿವಾರಣೆಗಾಗಿ ಸರ್ಕಾರವು ಇ-ಸಹಮತಿ ತಂತ್ರಾಂಶವನ್ನು ಅಭಿವೃದ್ಧಿಪಡಿಸಿದೆ ಎಂದು ತಿಳಿಸಿದರು.

ಇ-ಸಹಮತಿ ತಂತ್ರಾಂಶದ ಮೂಲಕ ಉದ್ಯೋಗಾಕಾಂಕ್ಷಿ ಯಾವುದೇ ಉದ್ಯೋಗದಾತರೊಂದಿಗೆ ಸುರಕ್ಷಿತವಾದ ರೀತಿಯಲ್ಲಿ ತನ್ನ ಪ್ರಮಾಣ ಪತ್ರಗಳನ್ನು/ದಾಖಲೆಗಳನ್ನು ಸಹಮತಿ ನೀಡುವ ಮೂಲಕ ಸುಲಲಿತವಾಗಿ ಹಂಚಿಕೊಳ್ಳಬಹುದು. ಈ ಪ್ರಕ್ರಿಯೆಯು ಎಲೆಕ್ಟ್ರಾನಿಕ್ ರೂಪದಲ್ಲಿ ನಡೆಯುವುದರಿಂದ ಹೆಚ್ಚಿನ ಸಮಯ ತೆಗೆದುಕೊಳ್ಳುವುದಿಲ್ಲ ಎಂದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.