ETV Bharat / city

ಕೋವಿಡ್ ನಡುವೆ ಬೆಂಗಳೂರಿನಲ್ಲಿ ಡೆಂಘೀ- ಚಿಕೂನ್ ಗುನ್ಯಾ ಪ್ರಕರಣಗಳ ಏರಿಕೆ - Bangalore

ಬಿಬಿಎಂಪಿ ಆರೋಗ್ಯ ವಿಭಾಗದ ವಿಶೇಷ ಆಯುಕ್ತ ಡಿ.ರಂದೀಪ್ ಮಾತನಾಡಿ, ನಗರದಲ್ಲಿ ಸೊಳ್ಳೆ ಹಾವಳಿ ಹೆಚ್ಚಾಗಿರುವುದರಿಂದ ಡೆಂಘೀ ಪ್ರಕರಣಗಳು ಹೆಚ್ಚಾಗಿವೆ. ಲಾರ್ವಾ ಸರ್ವೇ ನಡೆಸುವ ತಂಡಗಳು, ಫಾಗಿಂಗ್ ತಂಡಗಳು ಮತ್ತೆ ಕಾರ್ಯಾರಂಭಗೊಳಿಸಿವೆ..

Bangalore
ಬಿಬಿಎಂಪಿ ಆರೋಗ್ಯ ವಿಭಾಗದ ವಿಶೇಷ ಆಯುಕ್ತ ಡಿ.ರಂದೀಪ್
author img

By

Published : Jul 31, 2021, 8:51 PM IST

ಬೆಂಗಳೂರು : ನಗರದ ಕೆಲ ಪ್ರದೇಶಗಳಲ್ಲಿ ಸಾಂಕ್ರಾಮಿಕ ಕಾಯಿಲೆ ಹರಡುವ ಸೊಳ್ಳೆಗಳ ಉತ್ಪತ್ತಿ ಹೆಚ್ಚಾಗಿದೆ. ಡೆಂಘೀ, ಚಿಕೂನ್ ಗುನ್ಯಾ ತಡೆಯುವ ನಿಟ್ಟಿನಲ್ಲಿ ಲಾರ್ವಾ ಸರ್ವೇ ಕಾರ್ಯ ಚುರುಕುಗೊಂಡಿದೆ.

ಬಿಬಿಎಂಪಿ ಆರೋಗ್ಯ ವಿಭಾಗದ ವಿಶೇಷ ಆಯುಕ್ತ ಡಿ.ರಂದೀಪ್

ನಗರದಲ್ಲಿ 2021ರ ಜನವರಿಯಿಂದ 352 ಡೆಂಘೀ ಪ್ರಕರಣ ಹಾಗೂ 19 ಚಿಕೂನ್ ಗುನ್ಯಾ ಪ್ರಕರಣ ದೃಢಪಟ್ಟಿವೆ. ಈವರೆಗೂ 34,435 ಮನೆಗಳಿಗೆ ಸೊಳ್ಳೆ ಉತ್ಪತ್ತಿಯಾಗುವ ಮೂಲಗಳ ನಿರ್ಮೂಲನಾ ತಂಡ ಭೇಟಿ ನೀಡಿ ಸರ್ವೇ ಮಾಡಿದೆ.

ಈ ಪೈಕಿ 18,699 ಮನೆಗಳಲ್ಲಿ ಸೊಳ್ಳೆ ಉತ್ಪತ್ತಿ ಮಾಡುವ ಕಂಟೈನರ್​ಗಳಿದ್ದವು. (ಟಯರ್, ಟ್ಯೂಬ್, ಬಾಟಲಿಗಳು, ತಾರಸಿಯಲ್ಲಿ ನಿಂತ ನೀರು, ತೆರೆದ ವಾಟರ್ ಟ್ಯಾಂಕರ್​​ಗಳು). ಈ ಪೈಕಿ 10,015 ಮನೆಗಳಲ್ಲಿ ಲಾರ್ವಗಳು ಪತ್ತೆಯಾಗಿವೆ.

Bangalore
ಬೆಂಗಳೂರಿನಲ್ಲಿ ಡೆಂಗ್ಯೂ- ಚಿಕನ್ ಗುನ್ಯಾ ಪ್ರಕರಣಗಳ ಏರಿಕೆ

ಲಾರ್ವಾಗಳು ಅತಿಹೆಚ್ಚು ಪತ್ತೆಯಾಗಿರುವ ಪ್ರದೇಶಗಳು (ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಗಳು)

  1. ಸುಭಾಶ್ ನಗರ, ಕೆ.ಜಿ ಹಳ್ಳಿ, ಕಾಕ್ಸ್‌ಟೌನ್, ಕೆಆರ್ ಪುರಂ, ರಾಮಮೂರ್ತಿ ನಗರ ಪ್ರದೇಶಗಳಲ್ಲಿ ಹೆಚ್ಚು ಇವೆ.
  2. ಪೂರ್ವ ಹಾಗೂ ದಕ್ಷಿಣ ವಲಯದಲ್ಲಿ ಚಿಕೂನ್ ಗುನ್ಯಾ ಪ್ರಕರಣಗಳು ತಲಾ 8 ಜನರಲ್ಲಿ ದೃಢಪಟ್ಟಿದೆ.

ವಲಯವಾರು ಡೆಂಘೀ ಪ್ರಕರಣಗಳು

  • ಬೊಮ್ಮನಹಳ್ಳಿ-10
  • ದಾಸರಹಳ್ಳಿ-7
  • ಪೂರ್ವ ವಲಯ-96
  • ಮಹದೇವಪುರ-52
  • ಬಿಬಿಎಂಪಿ ಹೊರವಲಯ-88
  • ಆರ್​ಆರ್ ನಗರ-30
  • ದಕ್ಷಿಣ ವಲಯ-22
  • ಪಶ್ಚಿಮ ವಲಯ-22
  • ಯಲಹಂಕ-25

-ಒಟ್ಟು- 352

Bangalore
ಬೆಂಗಳೂರಿನಲ್ಲಿ ಡೆಂಘೀ- ಚಿಕೂನ್ ಗುನ್ಯಾ ಪ್ರಕರಣಗಳ ಏರಿಕೆ

ನಗರದ ಪಾರ್ಕ್ ಜಾಗಗಳಲ್ಲಿ, ಖಾಲಿ ಸೈಟ್​​ಗಳಲ್ಲಿ ಎಸೆಯುವ ತ್ಯಾಜ್ಯ, ನಿಂತ ನೀರಿನಿಂದಾಗಿ ಜನವಸತಿ ಪ್ರದೇಶಗಳಲ್ಲಿ ಸೊಳ್ಳೆ ಉತ್ಪತ್ತಿ ಹೆಚ್ಚಾಗಿದೆ. ಮನೆ ತಾರಸಿ, ಟಯರ್, ಟ್ಯೂಬ್, ಪ್ಲಾಸ್ಟಿಕ್ ಮೇಲೆ ನಿಂತ ನೀರಿನಲ್ಲಿ ಸೊಳ್ಳೆ ಮೊಟ್ಟೆ ಇಟ್ಟು, ಸೊಳ್ಳೆಗಳ ಹಾವಳಿ ಹೆಚ್ಚಾಗುತ್ತಿವೆ. ಬಿಬಿಎಂಪಿಯಿಂದ ಆರೋಗ್ಯ ಸಿಬ್ಬಂದಿ ಸೊಳ್ಳೆ ಉತ್ಪತ್ತಿ ತಾಣ ನಾಶಪಡಿಸುವ ಕೆಲಸ ಚುರುಕುಗೊಳಿಸಿದ್ದಾರೆ.

ಬಿಬಿಎಂಪಿ ಆರೋಗ್ಯ ವಿಭಾಗದ ವಿಶೇಷ ಆಯುಕ್ತ ಡಿ.ರಂದೀಪ್ ಮಾತನಾಡಿ, ನಗರದಲ್ಲಿ ಸೊಳ್ಳೆ ಹಾವಳಿ ಹೆಚ್ಚಾಗಿರುವುದರಿಂದ ಡೆಂಘೀ ಪ್ರಕರಣಗಳು ಹೆಚ್ಚಾಗಿವೆ. ಲಾರ್ವಾ ಸರ್ವೇ ನಡೆಸುವ ತಂಡಗಳು, ಫಾಗಿಂಗ್ ತಂಡಗಳು ಮತ್ತೆ ಕಾರ್ಯಾರಂಭಗೊಳಿಸಿವೆ.

ಇದನ್ನು ಇನ್ನಷ್ಟು ಸಮರ್ಪಕವಾಗಿ ತಡೆಗಟ್ಟಲು ಟೆಂಡರ್ ಮಾಡಿ ವ್ಯವಸ್ಥಿತ ರೀತಿಯಲ್ಲಿ ತಡೆಗಟ್ಟಲು ಕ್ರಮಕೈಗೊಳ್ಳಲಾಗುತ್ತದೆ. ಸದ್ಯ ಎಲ್ಲಾ ವಾರ್ಡ್​ಗಳಲ್ಲಿ ಈ ತಂಡಗಳನ್ನು ಚುರುಕುಗೊಳಿಸಲಾಗಿದೆ ಎಂದರು.

ಇದನ್ನೂ ಓದಿ: ರಾಜ್ಯದಲ್ಲಿ 1,987 ಜನರಿಗೆ ಕೋವಿಡ್ ಸೋಂಕು.. 37 ಮಂದಿ ಸಾವು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.