ETV Bharat / city

ಕೋವಿಡ್ ಎಫೆಕ್ಟ್​​: ಹೆಚ್ಚಿದ ಸ್ವಚ್ಛತಾ ಅರಿವು, ಕುಸಿದ ಡೆಂಗ್ಯೂ ಪ್ರಕರಣಗಳು - ಡೆಂಗ್ಯೂ ಪ್ರಕರಣಗಳ ಕುಸಿತ

ಬಿಬಿಎಂಪಿಯ 141 ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಉಚಿತವಾಗಿ ಪರೀಕ್ಷೆ ನಡೆಸಲಾಗುತ್ತಿದೆ. ಜೊತೆಗೆ ಮೊಬೈಲ್ ವಾಹನ, ಫಿವರ್ ಕ್ಲಿನಿಕ್​ಗಳಲ್ಲೂ ಟೆಸ್ಟಿಂಗ್ ಮಾಡಿಸಲಾಗುತ್ತದೆ. ಒಂದು ವೇಳೆ ಕೋವಿಡ್ ನೆಗೆಟಿವ್ ಬಂದೂ, ಜ್ವರ ಮುಂದುವರೆದರೆ ಡೆಂಗ್ಯೂ, ಚಿಕೂನ್ ಗುನ್ಯಾ ಪರೀಕ್ಷೆ ಮಾಡಿಸಲಾಗುತ್ತದೆ ಎಂದು ಸಾರ್ವಜನಿಕ ಆರೋಗ್ಯದ ಮುಖ್ಯ ಆರೋಗ್ಯಾಧಿಕಾರಿ ವಿಜಯೇಂದ್ರ ಹೇಳಿದರು.

decrease-of-dengue-cases
ಡೆಂಗ್ಯೂ ಜ್ವರ
author img

By

Published : Sep 26, 2020, 6:30 PM IST

ಬೆಂಗಳೂರು: ಸಾಂಕ್ರಾಮಿಕ ಪಿಡುಗು ಕೋವಿಡ್-19 ಬಂದ ಬಳಿಕ ಜನರಲ್ಲಿ ಸ್ವಚ್ಛತೆಯ ಅರಿವು ಅಗಾಧವಾಗಿ ಬೆಳೆದಿದ್ದು, ಬಿಬಿಎಂಪಿ ಎಲ್ಲಾ ವಾರ್ಡ್​​​​ನಲ್ಲೂ ನಿರಂತರ ಸ್ಯಾನಿಟೈಸ್​​​​ ಸಿಂಪಡಿಸುವ ಮೂಲಕ ಸ್ವಚ್ಛಾನಗರಿಯನ್ನಾಗಿ ಪರಿವರ್ತಿಸಿದೆ.

ಇತ್ತ ಪಾಲಿಕೆಯ ಘನತ್ಯಾಜ್ಯ ನಿರ್ವಹಣೆ ವಿಭಾಗವು ನಗರದ ಬ್ಲಾಕ್​ಸ್ಪಾಟ್​ಗಳಲ್ಲಿರುವ ಕಸ ತೆರವುಗೊಳಿಸಿ, ಸ್ವಚ್ಛಗೊಳಿಸಿ ರಂಗೋಲಿ ಹಾಕಿಸಿದೆ. ಕಸ ಹಾಕುವ ಜಾಗಗಳಲ್ಲಿ ಜಾಗೃತಿ ಚಿತ್ರಗಳನ್ನು ಬಿಡಿಸಲಾಗಿದೆ. ಅಲ್ಲದೆ, ಎಲ್ಲೆಂದರಲ್ಲಿ ಕಸ ಎಸೆಯುವವರಿಗೆ ಕಟ್ಟುನಿಟ್ಟಾಗಿ ದಂಡ ವಿಧಿಸುತ್ತಿದೆ. ಮಾಸ್ಕ್ ಧರಿಸುವುದನ್ನು ಕಡ್ಡಾಯ ಮಾಡಲಾಗಿದ್ದು, ಅವರಿಂದ ಜೂನ್​​ನಿಂದ ಸೆ.23ರವರೆಗೆ 1,10,767 ಜನರಿಂದ ₹ 2.51 ಕೋಟಿ ದಂಡ ಸಂಗ್ರಹವಾಗಿದೆ.

ಜನರು ಸ್ವಚ್ಛತೆಗೆ ಹೆಚ್ಚು ಆದ್ಯತೆ ನೀಡಿದ ಕಾರಣ ಪ್ರತಿ ವರ್ಷ ಈ ಸಮಯದಲ್ಲಿ ಕಾಣಿಸಿಕೊಳ್ಳುತ್ತಿದ್ದ ಡೆಂಗ್ಯೂ, ಮಲೇರಿಯಾ ಪ್ರಕರಣಗಳಲ್ಲಿ ತೀವ್ರ ಇಳಿದಿದೆ. ಮಳೆಗಾಲದ ಮಧ್ಯೆ ಬಿಸಿಲು ಬಂದಾಗ ನಿಂತ ನೀರಲ್ಲಿ ಸೊಳ್ಳೆ ಉತ್ಪತ್ತಿಯಾಗಿ, ಸಾಂಕ್ರಾಮಿಕ ರೋಗಗಳಾದ ಚಿಕೂನ್ ಗುನ್ಯಾ, ಡೆಂಗ್ಯೂ, ಕಾಲರಾ, ಶೀತಜ್ವರ, ಟೈಫಾಯ್ಡ್ ಜ್ವರಗಳು ಈ ವರ್ಷ ಕಡಿಮೆ ಪ್ರಮಾಣದಲ್ಲಿ ಬಾಧಿಸಿವೆ.

2019ರಲ್ಲಿ 7,273 ಮಂದಿಯಲ್ಲಿ ಡೆಂಗ್ಯೂ ಜ್ವರ ಕಾಣಿಸಿಕೊಂಡಿತ್ತು. ಕಳೆದ ವರ್ಷಕ್ಕೆ ಹೋಲಿಸಿದರೆ ಗಣನೀಯ ಇಳಿಕೆ ಕಂಡಿವೆ. ಈ ಬಾರಿ ಕೋವಿಡ್​ ನಡುವೆಯೂ ಬರೀ 1,295 ಪ್ರಕರಣಗಳು (ಜನವರಿಯಿಂದ ಸೆಪ್ಟೆಂಬರ್ 2ರವರೆಗೆ) ಕಾಣಿಸಿಕೊಂಡಿವೆ. ಇನ್ನು ಈ ವರ್ಷ 100 ಜನರಲ್ಲಿ ಮಾತ್ರ ಚಿಕೂನ್ ಗುನ್ಯಾ ಕಾಣಿಸಿಕೊಂಡಿದೆ. 2018ರಲ್ಲಿ 99, 2019ರಲ್ಲಿ 210 ಪ್ರಕರಣಗಳು ದಾಖಲಾಗಿದ್ದವು.

1,295 ಪ್ರಕರಣಗಳ ಪೈಕಿ 6 ಮಂದಿಯಲ್ಲಿ ಮೆದುಳಿನ ಉರಿಯೂತ (ಜಾಪ್ನಿಸ್ ಎನ್ಸಫಲಿಟೀಸ್), 141 ಟೈಫಾಯ್ಡ್, 34 ಯಕೃತ್ತಿನ ಸೋಂಕು (ವೈರಲ್ ಹೆಪಟೈಟಿಸ್), 467 ಕಾಲರಾ, ಹಾಗೂ 635 ಮಂದಿಗೆ ಶೀತ ಜ್ವರ ಕಾಣಿಸಿಕೊಂಡಿದೆ. ಹಾಗೆಯೇ ಟೈಫಾಯ್ಡ್ 285 ಪ್ರಕರಣಗಳು ಈ ಬಾರಿ 141ಕ್ಕೆ, ಶೀತಜ್ವರ 1,101 ರಿಂದ 635ಕ್ಕೆ ಇಳಿದಿದ್ದರೆ, ಕಾಲರಾ ಮಾತ್ರ 4 ರಿಂದ 467ಕ್ಕೆ ಏರಿಕೆ ಕಂಡಿದೆ.

ಈ ಬಗ್ಗೆ ಈಟಿವಿ ಭಾರತಕ್ಕೆ ಮಾಹಿತಿ ನೀಡಿದ ಬಿಬಿಎಂಪಿ ಸಾರ್ವಜನಿಕ ಆರೋಗ್ಯದ ಮುಖ್ಯ ಆರೋಗ್ಯಾಧಿಕಾರಿ ವಿಜಯೇಂದ್ರ, ಈ ಬಾರಿ ಸಾಂಕ್ರಾಮಿಕ ರೋಗಗಳು ಗಮನಾರ್ಹವಾಗಿ ಕಡಿಮೆ ಆಗಿದೆ. ಇದಕ್ಕೆ ಕಾರಣ ಕೋವಿಡ್ ಹಿನ್ನೆಲೆ ಜನರ ಸ್ವಚ್ಛತೆಗೆ ಆದ್ಯತೆ ನೀಡುತ್ತಿರುವುದೇ ಕಾರಣ. ಪಾಲಿಕೆಯ 141 ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಉಚಿತವಾಗಿ ಪರೀಕ್ಷೆ ನಡೆಸಲಾಗುತ್ತಿದೆ. ಜೊತೆಗೆ ಮೊಬೈಲ್ ವಾಹನ, ಫಿವರ್ ಕ್ಲಿನಿಕ್​ಗಳಲ್ಲೂ ಪರೀಕ್ಷೆ ಮಾಡಿಸಲಾಗುತ್ತದೆ. ಒಂದು ವೇಳೆ ಕೋವಿಡ್ ನೆಗೆಟಿವ್ ಬಂದೂ, ಜ್ವರ ಮುಂದುವರೆದರೆ ಡೆಂಗ್ಯೂ, ಚಿಕೂನ್ ಗುನ್ಯಾ ಪರೀಕ್ಷೆ ಮಾಡಿಸಲಾಗುತ್ತದೆ ಎಂದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.