ETV Bharat / city

ನಗರದಲ್ಲಿನ ತ್ಯಾಜ್ಯ ಸಮಸ್ಯೆ ನಿವಾರಣೆಗೆ ವಿಕೇಂದ್ರೀಕೃತ ವ್ಯವಸ್ಥೆ ಅಗತ್ಯ: ಪಾಲಿಕೆ ಮುಖ್ಯ ಆಯುಕ್ತ ಗೌರವ್ ಗುಪ್ತ

author img

By

Published : Apr 6, 2022, 11:57 AM IST

ಬೃಹತ್ ತ್ಯಾಜ್ಯ ಉತ್ಪಾದಕರಿಗೆ ಕಾಂಪೋಸ್ಟ್ ಮಾಡಲು ಅಥವಾ ಸಣ್ಣ ಬಯೋ ಮೆಥ್ ಸ್ಥಾವರವನ್ನು ಸ್ಥಾಪಿಸಲು ಸ್ಥಳವಿಲ್ಲದಿದ್ದರೆ, ಅವರು ಅಂತಹ ತ್ಯಾಜ್ಯವನ್ನು ಬೃಹತ್ ತ್ಯಾಜ್ಯ ಎಂಪನೆಲ್ಡ್ ಮಾರಾಟಗಾರರಿಗೆ ಹಸ್ತಾಂತರಿಸಬೇಕಾಗುತ್ತದೆ. ಅವರುಗಳು ತ್ಯಾಜ್ಯವನ್ನು ಸಂಗ್ರಹಿಸಿ ತಮ್ಮ ಘಟಕಗಳಲ್ಲಿ ಸಂಸ್ಕರಿಸುತ್ತಾರೆ ಎಂದರು..

decentralization-of-waste-management-is-essential-says-gourav-guptha
ನಗರದಲ್ಲಿನ ತ್ಯಾಜ್ಯ ಸಮಸ್ಯೆ ನಿವಾರಣೆಗೆ ವಿಕೇಂದ್ರೀಕೃತ ವ್ಯವಸ್ಥೆ ಅಗತ್ಯ: ಪಾಲಿಕೆ ಮುಖ್ಯ ಆಯುಕ್ತ ಗೌರವ್ ಗುಪ್ತ

ಬೆಂಗಳೂರು : ನಗರದಲ್ಲಿ ತ್ಯಾಜ್ಯ ವಿಲೇವಾರಿಗೆ ವಿಕೇಂದ್ರೀಕೃತ ವ್ಯವಸ್ಥೆ ಅಗತ್ಯವಿದೆ. ಈ ನಿಟ್ಟಿನಲ್ಲಿ ಪಾಲಿಕೆ ವ್ಯಾಪ್ತಿಯಲ್ಲಿನ ಬೃಹತ್ ಪ್ರಮಾಣದ ತ್ಯಾಜ್ಯ ಉತ್ಪಾದಕರು(ಬಲ್ಕ್ ಜನರೇಟರ್ಸ್) ಮತ್ತು ತ್ಯಾಜ್ಯ ಸಂಗ್ರಹಣಾ ಸೇವಾದಾರರು ತ್ಯಾಜ್ಯ ನಿವಾರಣೆಯ ಜವಾಬ್ದಾರಿಯನ್ನು ವ್ಯವಸ್ಥಿತವಾಗಿ ನಿರ್ವಹಿಸಬೇಕೆಂದು ಮುಖ್ಯ ಆಯುಕ್ತ ಗೌರವ್ ಗುಪ್ತ ಹೇಳಿದರು.

ಮಲ್ಲೇಶ್ವರಂನ ಐಪಿಪಿ ಕೇಂದ್ರದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಗೌರವ್ ಗುಪ್ತ, ಬಿಬಿಎಂಪಿ ವ್ಯಾಪ್ತಿಯಲ್ಲಿ ಬೃಹತ್ ಪ್ರಮಾಣದ ತ್ಯಾಜ್ಯ ಉತ್ಪಾದಕರುಗಳ ಮೂಲಕ ಮೂಲದಲ್ಲಿಯೇ ತ್ಯಾಜ್ಯವನ್ನು ಬೇರ್ಪಡಿಸಿ ನಿರ್ವಹಣೆ ಮಾಡಬೇಕಿದೆ. ಪಾಲಿಕೆ ವ್ಯಾಪ್ತಿಯಲ್ಲಿ ಪ್ರತಿನಿತ್ಯ ಸರಿಸುಮಾರು 6,000 ಟನ್ ತ್ಯಾಜ್ಯ ಉತ್ಪತ್ತಿಯಾಗುತ್ತಿದೆ.

ಅದರಲ್ಲಿ ಬೃಹತ್ ಪ್ರಮಾಣದ ತ್ಯಾಜ್ಯ ಉತ್ಪಾದಕರಿಂದ ಸುಮಾರು 1,500 ಟನ್ ತ್ಯಾಜ್ಯ ಉತ್ಪತ್ತಿ ಆಗುತ್ತಿದೆ. ಈ ಪೈಕಿ ವಿಕೇಂದ್ರೀಕೃತ ವ್ಯವಸ್ಥೆಯ ಮೂಲಕ ತ್ಯಾಜ್ಯ ಸಮಸ್ಯೆಯನ್ನು ನಿವಾರಣೆ ಮಾಡಬೇಕು ಎಂದು ತಿಳಿಸಿದರು. ಬೃಹತ್ ತ್ಯಾಜ್ಯ ಉತ್ಪಾದಕರು ತಮ್ಮ ನಿವಾಸ ಅಥವಾ ಆಸ್ತಿಯ ಪ್ರದೇಶದಲ್ಲಿ ತ್ಯಾಜ್ಯ ವಿಂಗಡಣೆ ಮತ್ತು ನಿರ್ವಹಣಾ ಘಟಕವನ್ನು ಸ್ಥಾಪಿಸಬೇಕು.

ಸಾಂಸ್ಥಿಕ ಬೃಹತ್ ಪ್ರಮಾಣದ ತ್ಯಾಜ್ಯ ಉತ್ಪಾದಕರುಗಳಾದ ಸರ್ಕಾರಿ ಸಂಸ್ಥೆಗಳು, ಧಾರ್ಮಿಕ, ಶೈಕ್ಷಣಿಕ ಸಂಸ್ಥೆಗಳು, ಹೋಟೆಲ್‌ಗಳು, ಎಪಿಎಂಸಿಯಂಥಹ ಮಾರುಕಟ್ಟೆ ಪ್ರದೇಶಗಳು, ನರ್ಸರಿ, ಉದ್ಯಾನವನ, ವಸತಿ ನಿಲಯಗಳು, ಹೋಟೆಲ್, ರೆಸ್ಟೋರೆಂಟ್‌ಗಳು, ಕಲ್ಯಾಣ ಮಂಟಪ, ಮಾಲ್, ಶಾಪಿಂಗ್ ಕಾಂಪ್ಲೆಕ್ಸ್, ಸೂಪರ್ ಮಾರ್ಕೆಟ್, ಕಲ್ಯಾಣ ಮಂಟಪ, ಕ್ಲಬ್, ಆಡಿಟೋರಿಯಂ, ಪೆಟ್ರೋಲ್ ಬಂಕ್, ಆಹಾರ ಉದ್ದಿಮೆಗಳೆಲ್ಲರೂ ಘನ ತ್ಯಾಜ್ಯ ನಿರ್ವಹಣೆಯನ್ನು ಸರಿಯಾಗಿ ಅನುಸರಿಸಬೇಕಿದೆ.

ಘನತ್ಯಾಜ್ಯ ನಿರ್ವಹಣೆಗೆ ಪ್ರತ್ಯೇಕ ಸ್ಥಳವಿಲ್ಲದಿದ್ದರೆ ಅಧಿಕೃತ ತ್ಯಾಜ್ಯ ಸಂಸ್ಕರಣಾ ಸಂಸ್ಥೆಗಳ ಜೊತೆ ಕೈಜೋಡಿಸಿ ತ್ಯಾಜ್ಯವನ್ನು ನಿರ್ದಿಷ್ಟ ಸ್ಥಳಕ್ಕೆ ಸಾಗಿಸಬಹುದಾಗಿದೆ. ಇದೆಲ್ಲವೂ ವ್ಯವಸ್ಥಿತವಾಗಿ ನಡೆಯಬೇಕು ಎಂದರು. ಬೃಹತ್ ತ್ಯಾಜ್ಯ ಉತ್ಪಾದಕರಿಗೆ ಕಾಂಪೋಸ್ಟ್ ಮಾಡಲು ಅಥವಾ ಸಣ್ಣ ಬಯೋ ಮೆಥ್ ಸ್ಥಾವರವನ್ನು ಸ್ಥಾಪಿಸಲು ಸ್ಥಳವಿಲ್ಲದಿದ್ದರೆ, ಅವರು ಅಂತಹ ತ್ಯಾಜ್ಯವನ್ನು ಬೃಹತ್ ತ್ಯಾಜ್ಯ ಎಂಪನೆಲ್ಡ್ ಮಾರಾಟಗಾರರಿಗೆ ಹಸ್ತಾಂತರಿಸಬೇಕಾಗುತ್ತದೆ. ಅವರುಗಳು ತ್ಯಾಜ್ಯವನ್ನು ಸಂಗ್ರಹಿಸಿ ತಮ್ಮ ಘಟಕಗಳಲ್ಲಿ ಸಂಸ್ಕರಿಸುತ್ತಾರೆ ಎಂದರು.

ಸಭೆಯಲ್ಲಿ ವಿಶೇಷ ಆಯುಕ್ತ ಡಾ. ಹರೀಶ್ ಕುಮಾರ್, ಜಂಟಿ ಆಯುಕ್ತ ಪರುಶುರಾಮ್ ಶಿನ್ನಾಳ್ಕರ್, ಅಧೀಕ್ಷಕ ಇಂಜಿನಿಯರ್ ಬಸವರಾಜ್ ಕಬಾಡೆ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಹಿರಿಯ ಪರಿಸರ ಅಧಿಕಾರಿ ಯತೀಶ್, ಬೃಹತ್ ತ್ಯಾಜ್ಯ ಸಂಗ್ರಹಿಸುವ ಸಂಸ್ಥೆಗಳು, ಅರ್‌ಡಬ್ಲ್ಯೂಎಗಳ ಅಧ್ಯಕ್ಷರು, ಒಣ ತ್ಯಾಜ್ಯ ಸಂಗ್ರಹಣಾ ಕೇಂದ್ರಗಳ ನಿರ್ವಾಹಕರು ಸೇರಿದಂತೆ ಪಾಲಿಕೆಯ ಸಂಬಂಧಪಟ್ಟ ಅಧಿಕಾರಿಗಳು ಉಪಸ್ಥಿತರಿದ್ದರು.

ಓದಿ : ರಾಜಕೀಯ ಮುನ್ನೆಲೆಗೆ ಬರಲು ಸಜ್ಜಾದ ವಿಜಯೇಂದ್ರ, ಬಿಎಸ್​ವೈ ತಂತ್ರಗಾರಿಕೆ ಏನು?

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.