ETV Bharat / city

ಬೆಂಗಳೂರು: ಅಪಾರ್ಟ್‍ಮೆಂಟ್‍ನ ಐದನೇ ಮಹಡಿಯಿಂದ ಆಯತಪ್ಪಿ ಬಿದ್ದು ಬಾಲಕ ಸ್ಥಳದಲ್ಲೇ ಸಾವು - boy fell down from apartment

ಅಪಾರ್ಟ್‍ಮೆಂಟ್‍ನ ಐದನೇ ಮಹಡಿಯಿಂದ ಆಯತಪ್ಪಿ ಕೆಳಗೆ ಬಿದ್ದು 2 ವರ್ಷದ ಬಾಲಕ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಬೆಂಗಳೂರಲ್ಲಿ ನಡೆದಿದೆ.

bangalore boy died
ಬೆಂಗಳೂರು ಬಾಲಕ ಮೃತ
author img

By

Published : Dec 18, 2021, 9:58 AM IST

ಬೆಂಗಳೂರು: ರಾಜಧಾನಿಯ ಎಲೆಕ್ಟ್ರಾನಿಕ್‍ಸಿಟಿ ನೀಲಾದ್ರಿ ಇನ್‍ವೆಸ್ಟ್​ಮೆಂಟ್​​ ಲೇಔಟ್‍ನಲ್ಲಿರುವ ಅಪಾರ್ಟ್‍ಮೆಂಟ್‍ನ ಐದನೇ ಮಹಡಿಯಿಂದ ಆಯತಪ್ಪಿ ಕೆಳಗೆ ಬಿದ್ದು 2 ವರ್ಷದ ಬಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಎಲೆಕ್ಟ್ರಾನಿಕ್‍ಸಿಟಿಯ ನಿವಾಸಿ ದಿವ್ಯಾಂಶ್ ರೆಡ್ಡಿ (2) ಮೃತ ಬಾಲಕ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ದಿವ್ಯಾಂಶ್ ರೆಡ್ಡಿ ತಂದೆ ತರಕಾರಿ ವ್ಯಾಪಾರಿಯಾಗಿದ್ದು, ತಾಯಿ ಮನೆ ಕೆಲಸ ಮಾಡಿಕೊಂಡಿದ್ದಾರೆ. ಬಾಲಕನ ಅಜ್ಜಿ ಕೆಲ ದಿನಗಳಿಂದ ನಗರದಲ್ಲಿ ಬಾಡಿಗೆ ಮನೆ ಹುಡುಕುತ್ತಿದ್ದರು. ಆಗ ನೀಲಾದ್ರಿ ಇನ್‍ವೆಸ್ಟ್​​ಮೆಂಟ್​​ ಲೇಔಟ್‍ನ ಅಪಾರ್ಟ್‍ಮೆಂಟ್‍ವೊಂದರಲ್ಲಿ ಮನೆ ಬಾಡಿಗೆಗಿರುವುದು ಗಮನಕ್ಕೆ ಬಂದಿತ್ತು. ಶುಕ್ರವಾರ ಸಂಜೆ ಮೊಮ್ಮಗ ದಿವ್ಯಾಂಶ ರೆಡ್ಡಿಯನ್ನು ಕರೆದುಕೊಂಡು ಮನೆ ನೋಡಲು ಹೋಗಿದ್ದರು.

ಅಪಾರ್ಟ್‍ಮೆಂಟ್‍ನ 5ನೇ ಮಹಡಿಯಲ್ಲಿ ಅಜ್ಜಿ ಮನೆ ನೋಡುತ್ತಿದ್ದರೆ, ದಿವ್ಯಾಂಶ್ ಬಾಲ್ಕನಿಯಲ್ಲಿ ಆಟವಾಡುತ್ತಿದ್ದ. ಆ ವೇಳೆ ಬಾಲ್ಕನಿಯ ಸಮೀಪದ ಪ್ಲಾಸ್ಟಿಕ್ ಶೀಟ್ ಮೇಲೆ ಕಾಲಿಟ್ಟು ಪಕ್ಕದಲ್ಲಿದ್ದ ಹೋಲ್‍ನಿಂದ ಕೆಳಗೆ ಬಿದ್ದು ಗಂಭೀರವಾಗಿ ಗಾಯಗೊಂಡು ದಿವ್ಯಾಂಶ್ ಸ್ಥಳದಲ್ಲೇ ಮೃತಪಟ್ಟಿದ್ದಾನೆ ಎಂದಿದ್ದಾರೆ.

ಇದನ್ನೂ ಓದಿ: ಬೆಳಗಾವಿಯಲ್ಲಿ ಪೊಲೀಸ್​ ವಾಹನಕ್ಕೆ ಕಲ್ಲು ತೂರಿದ 27 ಮಂದಿ ಕಿಡಿಗೇಡಿಗಳು ಅರೆಸ್ಟ್​.. ಪುಂಡರ ಹಾವಳಿ ಸಿಸಿಟಿವಿಯಲ್ಲಿ ಸೆರೆ

ಶುಕ್ರವಾರ ರಾತ್ರಿಯೇ ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಪರಿಶೀಲಿಸಿ ಸ್ಥಳದಲ್ಲಿದ್ದವರ ಹೇಳಿಕೆ ಪಡೆದಿದ್ದಾರೆ. ಈ ಕುರಿತು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.