ETV Bharat / city

ಸಾಲ ಹಿಂತಿರುಗಿಸದಿರುವ ಕಾರಣಕ್ಕೆ ಸಹೋದರಿಯರ ಬಟ್ಟೆ ಬಿಚ್ಚಿ ಮಾರಣಾಂತಿಕ ಹಲ್ಲೆ - ಆನೇಕಲ್

ಸಾಲ ಮರು ಪಾವತಿಸಿಲ್ಲ ಎಂಬ ಕಾರಣಕ್ಕೆ ಸಹೋದರಿಯರ ಬಟ್ಟೆ ಬಿಚ್ಚಿ ಮಾರಣಾಂತಿಕವಾಗಿ ಹಲ್ಲೆ ಮಾಡಿದ ಪ್ರಕರಣ ಎರಡು ದಿನ ತಡವಾಗಿ ಬೆಳಕಿಗೆ ಬಂದಿದೆ..

Deadly assault
ಸಾಲ ಹಿಂತಿರುಗಿಸದಿರುವ ಕಾರಣಕ್ಕೆ ಮಹಿಳೆಯ ಬಟ್ಟೆ ಬಿಚ್ಚಿ ಮಾರಣಾಂತಿಕ ಹಲ್ಲೆ
author img

By

Published : Jun 29, 2022, 3:41 PM IST

Updated : Jun 29, 2022, 4:10 PM IST

ಆನೇಕಲ್(ಬೆಂಗಳೂರು) : ಕೊಟ್ಟ ಸಾಲವನ್ನು ಹಿಂತಿರುಗಿಸದಿರುವ ಕಾರಣಕ್ಕೆ ಸಹೋದರಿಯರ ಬಟ್ಟೆ ಬಿಚ್ಚಿ ಅವಮಾನಿಸಿ ಮಾರಣಾಂತಿಕವಾಗಿ ಹಲ್ಲೆ ನಡೆಸಿರುವ ಅಮಾನವೀಯ ಘಟನೆ ಆನೇಕಲ್ ತಾಲೂಕಿನ ಸರ್ಜಾಪುರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಈ ಘಟನೆ ಭಾನುವಾರ ನಡೆದಿದ್ದು, ಎರಡು ದಿನ ತಡವಾಗಿ ಬೆಳಕಿಗೆ ಬಂದಿದೆ.

ದೊಮ್ಮಸಂದ್ರ ವ್ಯಾಪ್ತಿಯ ನೆರಿಗಾ ಗ್ರಾಮದ ಇಬ್ಬರು ಸಹೋದರಿಯರ ಮೇಲೆ ದೌರ್ಜನ್ಯ ನಡೆದಿದೆ. ಸಾಲ ನೀಡಿದ್ದವರು ಸಹೋದರಿಯರ ಬಟ್ಟೆ ಬಿಚ್ಚಿ ಹಲ್ಲೆ ನಡೆಸಿದ ಆರೋಪಿಗಳಾಗಿದ್ದಾರೆ.

ಈ ಇಬ್ಬರು ಸಹೋದರಿಯರಲ್ಲಿ ಓರ್ವರು ತಮ್ಮ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಒಂದು ವರ್ಷದ ಹಿಂದೆ 30% ರಷ್ಟು ಬಡ್ಡಿದರದಲ್ಲಿ 1 ಲಕ್ಷ ಸಾಲವನ್ನು ಪಡೆದಿದ್ದರು. ಕಾಲಕಾಲಕ್ಕೆ ಬಡ್ಡಿ ಕಟ್ಟಿಕೊಂಡು ಬಂದಿದ್ದರು. ಆದರೆ, ಇತ್ತೀಚಿಗೆ ಅಸಲು ವಾಪಸ್‌ ನೀಡುವಂತೆ ಸಾಲ ನೀಡಿದವರು ಒತ್ತಡ ಹಾಕಿದ್ದರು. ಆದರೆ, ಹಣ ಇಲ್ಲದ ಕಾರಣಕ್ಕೆ ಗ್ರಾಮಸ್ಥರ ಸಮ್ಮುಖದಲ್ಲಿ ಜಮೀನು ಮಾರಾಟ ಮಾಡಿ ಹಣ ಕೊಡುವುದಾಗಿ ರಾಜಿ ಸಂಧಾನ ಆಗಿತ್ತು.

ಆದರೂ ಕೂಡ ಭಾನುವಾರ ಬೆಳಗ್ಗೆ ಮಹಿಳೆಯರ ಮನೆಗೆ ನುಗ್ಗಿದ ಸಾಲ ನೀಡಿದ ಕುಟುಂಬಸ್ಥರು ಸಾಲ ಪಡೆದವರ ಮೇಲೆ ಹಲ್ಲೆ ನಡೆಸಿದ್ದಾರೆ. ತಮಗಾದ ಅನ್ಯಾಯದ ಬಗ್ಗೆ ಸಂತ್ರಸ್ತೆಯ ಕುಟುಂಬದವರು ಮಾಹಿತಿ ನೀಡಿದ್ದಾರೆ. ಈ ಸಂಬಂಧ ಸರ್ಜಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಪತ್ರಕರ್ತರ ಹೆಸರಿನಲ್ಲಿ ಹಣ ಸುಲುಗೆ, ವ್ಯಾಪಾರಿ ಮೇಲೆ ಹಲ್ಲೆ

Last Updated : Jun 29, 2022, 4:10 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.