ಬೆಂಗಳೂರು: ಸಾಂಗ್ಲಿ, ಕೊಲ್ಲಾಪುರ ಬಾರ್ಡರ್ನಲ್ಲಿರುವ ರಾಜ್ಯದ ಜಿಲ್ಲೆಗಳಿಗೆ ಪ್ರತಿದಿನ ಮಹಾರಾಷ್ಟ್ರದಿಂದ ಖಾಸಗಿ ಆಕ್ಸಿಜನ್ ಸಿಲಿಂಡರ್ಗಳು ಪೂರೈಕೆ ಆಗುತ್ತಿವೆ. ಆದರೆ ಕೊಲ್ಲಾಪುರ ಜಿಲ್ಲಾಧಿಕಾರಿ ನಿನ್ನೆಯಿಂದ ಕರ್ನಾಟಕಕ್ಕೆ ಬರುವ ಸಿಲಿಂಡರ್ಗಳನ್ನು ಬಂದ್ ಮಾಡಿದ್ದರು. ಈ ಹಿನ್ನೆಲೆಯಲ್ಲಿ ರಾಜ್ಯದ ಗಡಿಜಿಲ್ಲೆಗಳ ಆಸ್ಪತ್ರೆಗಳಿಗೆ ಸಮಸ್ಯೆ ಆಗಿತ್ತು.
ಹೀಗಾಗಿ ಮಹಾರಾಷ್ಟ್ರ ಸಚಿವ ವಿಶ್ವಜಿತ್ ಕದಮ್ ಜೊತೆ ದೂರವಾಣಿ ಮೂಲಕ ಮಾತನಾಡಿದ ಲಕ್ಷ್ಮಣ ಸವದಿ ಸಮಸ್ಯೆ ಬಗೆಹರಿಸಿದ್ದಾರೆ. ಎಂದಿನಂತೆ ಆಕ್ಸಿಜನ್ಅನ್ನು ಗಡಿಜಿಲ್ಲೆಗಳಿಗೆ ಬರುವುದಕ್ಕೆ ಅನುಮತಿ ನೀಡಬೇಕು ಎಂದು ಬೆಂಗಳೂರಿನ ತಮ್ಮ ಸರ್ಕಾರಿ ನಿವಾಸದಿಂದಲೇ ತಾಕೀತು ಮಾಡಿದರು.
ಈ ಹಿನ್ನೆಲೆಯಲ್ಲಿ ಡಿಸಿಎಂ ಮಾತಿಗೆ ಒಪ್ಪಿಗೆ ನೀಡಿದ ಮಹಾರಾಷ್ಟ್ರ ಸಚಿವ ಕದಂ, ಕೊಲ್ಲಾಪುರ ಡಿಸಿಗೆ ಸೂಚನೆ ನೀಡುವುದಾಗಿ ದೂರವಾಣಿ ಮೂಲಕ ಭರವಸೆ ನೀಡಿದರು.