ETV Bharat / city

ಕೊರೊನಾ ಸಂಕಷ್ಟದಲ್ಲೂ ಜನಪರ ಬಜೆಟ್ : ಡಿಸಿಎಂ ಗೋವಿಂದ ಕಾರಜೋಳ

author img

By

Published : Feb 1, 2021, 4:38 PM IST

Updated : Feb 1, 2021, 6:52 PM IST

ಬೆಂಗಳೂರು ನಗರಕ್ಕೆ ಇನ್ನೂ 2 ಮಾರ್ಗಗಳ ಮೆಟ್ರೋ ರೈಲು ಯೋಜನೆಗೆ ಅನುದಾನ ಒದಗಿಸಲಾಗಿದೆ. ಅತಿಮುಖ್ಯವಾಗಿ ಅಭಿವೃದ್ಧಿ ಅಂಶವೆಂದ್ರೆ ವಸತಿ ಸೌಕರ್ಯಗಳ ವಿತರಣೆ, ಕರ್ನಾಟಕವೂ ಸೇರಿ ಈಗ ಕೈಗೊಳ್ಳಲಾಗಿರುವ ವಸತಿ ಕಾರ್ಯಯೋಜನೆಗಳಿಗೆ ಹೆಚ್ಚು ಅನುದಾನ ದೊರಕಲಿದೆ..

dcm-govinda-karajola-reaction-about-union-budget
ಡಿಸಿಎಂ ಗೋವಿಂದ ಕಾರಜೋಳ

ಬೆಂಗಳೂರು : ಕೊರೊನಾ ಸಂಕಷ್ಟದಲ್ಲೂ ಎಲ್ಲಾ ವರ್ಗಗಳ, ಸಮುದಾಯಗಳ, ವಲಯಗಳ ಅಭಿವೃದ್ಧಿಗಾಗಿ ದೂರದೃಷ್ಠಿಯುಳ್ಳ, ಅತ್ಯುತ್ತಮ ಹಾಗೂ ಜನಪರ ಬಜೆಟ್‍ನ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ್ದಾರೆ. ಈ ಬಜೆಟ್‍ನ ಮುಕ್ತಕಂಠದಿಂದ ಸ್ವಾಗತಿಸುವುದಾಗಿ ಉಪ ಮುಖ್ಯಮಂತ್ರಿಗ ಗೋವಿಂದ ಕಾರಜೋಳ ತಿಳಿಸಿದ್ದಾರೆ.

ಕೊರೊನಾ ಸಂಕಷ್ಟದಲ್ಲೂ ಜನಪರ ಬಜೆಟ್ : ಡಿಸಿಎಂ ಗೋವಿಂದ ಕಾರಜೋಳ

ಬಜೆಟ್ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಬಡವರ, ಪರಿಶಿಷ್ಟರ, ಕೃಷಿಕರ, ಕಾರ್ಮಿಕರ ಕಲ್ಯಾಣಕ್ಕೆ ವಿಶೇಷ ಒತ್ತು ನೀಡಲಾಗಿದೆ. ಹಲವಾರು ಅಭಿವೃದ್ಧಿ ಕ್ಷೇತ್ರಗಳಿಗೆ ಈ ಬಾರಿಯ ಬಜೆಟ್‍ನಲ್ಲಿ ಹೆಚ್ಚಿನ ಒತ್ತು ಕೊಡಲಾಗಿದೆ.

ಎಲ್ಲದಕ್ಕಿಂತ ಮುಖ್ಯವಾಗಿ ಆರೋಗ್ಯ ಕ್ಷೇತ್ರಕ್ಕೆ ಹೆಚ್ಚು ಅನುದಾನ ಮೀಸಲಿಡಲಾಗಿದೆ. ಕೋವಿಡ್ ಹೆಮ್ಮಾರಿ ತಡೆಗಟ್ಟಲು ಈ ಬಾರಿಯ ಬಜೆಟ್ ವಿಶೇಷ ಗಮನ ನೀಡಿದೆ.

11,000 ಕಿಮೀ. ಹೆಚ್ಚುವರಿ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ, 650 ಕಿ.ಮೀ. ರಸ್ತೆಗಳನ್ನು ರಾಷ್ಟ್ರೀಯ ಹೆದ್ದಾರಿಗಳನ್ನಾಗಿ ಉನ್ನತೀಕರಿಸಲು ಅನುದಾನ ಮೀಸಲಿರಿಸಲಾಗಿದೆ ಎಂದರು.

ವಿದ್ಯಾವಂತ ನಿರುದ್ಯೋಗಗಳಿಗೆ ಉದ್ಯೋಗ ನೀಡುವ ಸದುದ್ದೇಶದಿಂದ 7 ಹೊಸ ಟೆಕ್ಸ್​ಟೈನ್ಸ್​ ಸ್ಥಾಪನೆ ಹಾಗೂ ಕೌಶಲ್ಯಾಭಿವೃದ್ಧಿ ಯೋಜನೆಯಡಿ ತರಬೇತಿ ನೀಡಲು 3,000 ಕೋಟಿ ರೂ. ಮೀಸಲಿಡಲಾಗಿದೆ.

ಶಿಕ್ಷಣಕ್ಕೂ ಆದ್ಯತೆ ನೀಡಲಾಗಿದ್ದು, 15,000 ಶಾಲೆಗಳನ್ನು ಮೇಲ್ದರ್ಜೆಗೇರಿಸುವುದು, ಗಿರಿಜನ ಪ್ರದೇಶಗಳಲ್ಲಿ 750 ಏಕಲವ್ಯ ಮಾದರಿ ಶಾಲೆಗಳ ಸ್ಥಾಪನೆ, 100 ಹೊಸ ಸೈನಿಕ ಶಾಲೆಗಳ ಸ್ಥಾಪನೆಯ ಗುರಿ ಹೊಂದಿರುವುದು ಐತಿಹಾಸಿಕ ವಿಷಯವಾಗಿದೆ.

ಓದಿ: ಕೊಳಚೆ ಪ್ರದೇಶದ ನಿವಾಸಿಗಳಿಗೆ ಶೀಘ್ರ ಖಾಯಂ ಹಕ್ಕು ಪತ್ರ : ಸಚಿವ ವಿ.ಸೋಮಣ್ಣ

ಕೃಷಿ ಕ್ಷೇತ್ರವನ್ನು ಸಬಲಗೊಳಿಸಲು ಹಾಗೂ ಕೃಷಿ ಉತ್ಪನ್ನಗಳಿಗೆ ಯೋಗ್ಯ ಮಾರುಕಟ್ಟೆ ದೊರಕಿಸುವ ಸಲುವಾಗಿ 1,000 ಎಪಿಎಂಸಿಗಳಿಗೆ ಡಿಜಿಟಲ್ ಮಾರ್ಕೆಟಿಂಗ್ ವ್ಯವಸ್ಥೆ ಹಾಗೂ ಬೆಂಬಲ ಬೆಲೆ (ಎಂಎಸ್​​​ಪಿ) ಅಡಿ ಸರ್ಕಾರದಿಂದಲೇ ಧಾನ್ಯಗಳ ಖರೀದಿಗೆ ನಿರ್ಧರಿಸಿದೆ.

ಅಸಂಘಟಿತ ಕಾರ್ಮಿಕರಿಗೆ ಇಎಸ್ಐ ಸೌಲಭ್ಯ, ಕನಿಷ್ಠ ವೇತನ ಕಾಯಿದೆ ಸೌಲಭ್ಯ ಜಾರಿಗೊಳಿಸುವ ಮೂಲಕ ಕಾರ್ಮಿಕ ಹಿತ ಕಾಯಲು ಗುರಿಹೊಂದಲಾಗಿದೆ ಎಂದರು. ಕ್ಷೇತ್ರ ಸಂಪರ್ಕ ವ್ಯವಸ್ಥೆ, ನಗರ ಪ್ರದೇಶಗಳ ಸಾರಿಗೆ ಸಂಪರ್ಕ ಅಭಿವೃದ್ಧಿ ಪಡಿಸಲು ಗಮನ ನೀಡಲಾಗಿದೆ. ಮೆಟ್ರೋ ವಿಸ್ತರಣೆಗೆ ಹೆಚ್ಚು ಒತ್ತು ನೀಡಲಾಗಿದೆ.

ಬೆಂಗಳೂರು ನಗರಕ್ಕೆ ಇನ್ನೂ 2 ಮಾರ್ಗಗಳ ಮೆಟ್ರೋ ರೈಲು ಯೋಜನೆಗೆ ಅನುದಾನ ಒದಗಿಸಲಾಗಿದೆ. ಅತಿಮುಖ್ಯವಾಗಿ ಅಭಿವೃದ್ಧಿ ಅಂಶವೆಂದ್ರೆ ವಸತಿ ಸೌಕರ್ಯಗಳ ವಿತರಣೆ, ಕರ್ನಾಟಕವೂ ಸೇರಿ ಈಗ ಕೈಗೊಳ್ಳಲಾಗಿರುವ ವಸತಿ ಕಾರ್ಯಯೋಜನೆಗಳಿಗೆ ಹೆಚ್ಚು ಅನುದಾನ ದೊರಕಲಿದೆ.

ತೆರಿಗೆ ವಂಚನೆಯ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ. ಈ ಹಿನ್ನೆಲೆ ಕೇಂದ್ರ ಸರ್ಕಾರವು ಜಿಎಸ್​​ಟಿಯನ್ನು ಬಿಗಿಗೊಳಿಸಿ ಆದಾಯ ಹೆಚ್ಚಳಕ್ಕೆ ಕ್ರಮವಹಿಸಿದೆ ಎಂದು ಪತ್ರಿಕಾ ಹೇಳಿಕೆ ಮೂಲಕ ತಿಳಿಸಿದ್ದಾರೆ.

Last Updated : Feb 1, 2021, 6:52 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.