ETV Bharat / city

ವರ್ಷದ ಕೊನೆ ದಿನ... ರಾತ್ರಿ 9ರ ವರೆಗೆ ಕುಳಿತು ಬಾಕಿ ಇದ್ದ ಎಲ್ಲ ಕಡತ ವಿಲೇವಾರಿ ಮಾಡಿದ ಡಿಸಿಎಂ! - ಬಾಕಿ ಕಡತ ವಿಲೇವಾರಿ ಮಾಡಿದ ಡಿಸಿಎಂ ಅಶ್ವಥ್ ನಾರಾಯಣ್

2021 ವರ್ಷವನ್ನು ಇ - ಆಫೀಸ್ ವ್ಯವಸ್ಥೆಯ ಮೂಲಕ ನೂತನ ಆರಂಭಕ್ಕೆ ಎದುರು ನೋಡುತ್ತಿದ್ದೇನೆ. ಜನಪರ ಕಾರ್ಯಗಳ ಅನುಷ್ಠಾನಕ್ಕೆ ಈ ರೀತಿಯಲ್ಲಿ ಕ್ಷಿಪ್ರ ಮತ್ತು ಪಾರದರ್ಶಕವಾಗಿ ಕೆಲಸ ಮಾಡಲು ಸದಾ ಬದ್ಧನಾಗಿದ್ದೇನೆ ಎಂದು ಡಿಸಿಎಂ ಹೇಳಿದ್ದಾರೆ.

ಡಿಸಿಎಂ ಅಶ್ವಥ್ ನಾರಾಯಣ್
ಡಿಸಿಎಂ ಅಶ್ವಥ್ ನಾರಾಯಣ್
author img

By

Published : Dec 31, 2020, 10:38 PM IST

ಬೆಂಗಳೂರು: ಉನ್ನತ ಶಿಕ್ಷಣ ಖಾತೆ ಸಚಿವರೂ ಆಗಿರುವ ಡಿಸಿಎಂ ಅಶ್ವತ್ಥ ನಾರಾಯಣ್ ತಮ್ಮಲ್ಲಿದ್ದ ಎಲ್ಲ ಕಡತಗಳನ್ನು ವಿಲೇವಾರಿ ಮಾಡುವ ಮೂಲಕ 2020ಕ್ಕೆ ಬೈ ಹೇಳಿದ್ದಾರೆ.

ರಾತ್ರಿ 9 ಗಂಟೆವರೆಗೂ ಗೃಹ ಕಚೇರಿಯಲ್ಲೇ ಕುಳಿತು ಬಾಕಿ ಇದ್ದ ಸುಮಾರು 40 ಕಡತಗಳನ್ನು ಡಿಸಿಎಂ ಅಶ್ವತ್ಥ ನಾರಾಯಣ್ ಅವರು ವಿಲೇವಾರಿ ಮಾಡಿ 2020 ಕ್ಕೆ ಅಂತ್ಯ ಹಾಡಿ, ಹೊಸ ವರ್ಷ ಸ್ವಾಗತಿಸಿದರು.

ಈ ಕುರಿತು ಮಾತನಾಡಿದ ಅವರು, 2021 ವರ್ಷವನ್ನು ಇ-ಆಫೀಸ್ ವ್ಯವಸ್ಥೆಯ ಮೂಲಕ ನೂತನ ಆರಂಭಕ್ಕೆ ಎದುರು ನೋಡುತ್ತಿದ್ದೇನೆ. ಜನಪರ ಕಾರ್ಯಗಳ ಅನುಷ್ಠಾನಕ್ಕೆ ಈ ರೀತಿಯಲ್ಲಿ ಕ್ಷಿಪ್ರ ಮತ್ತು ಪಾರದರ್ಶಕವಾಗಿ ಕೆಲಸ ಮಾಡಲು ಸದಾ ಬದ್ಧನಾಗಿದ್ದೇನೆ. ಇವತ್ತಿನವರೆಗೆ ಇದ್ದ ಎಲ್ಲ ಕಡತ ವಿಲೇವಾರಿ ಮಾಡಿದ್ದು, ನನ್ನ ವ್ಯಾಪ್ತಿಯ ಯಾವುದೇ ಇಲಾಖೆಯಲ್ಲಿ ಯಾವ ಕಡತವೂ ಬಾಕಿ ಬಿದ್ದಿಲ್ಲ. ಇದರಿಂದ ನನ್ನ ಕರ್ತವ್ಯದ ಬಗ್ಗೆ ಸಂಪೂರ್ಣತೆಯ ಭಾವ ಬಂದಿದೆ ಎಂದು ತಿಳಿಸಿದ್ದಾರೆ.

ಈಗಾಗಲೇ ಉನ್ನತ ಶಿಕ್ಷಣ ಇಲಾಖೆ ಸಂಪೂರ್ಣವಾಗಿ ಇ-ಆಫೀಸ್ ಮೂಲಕವೇ ನಡೆಯುತ್ತಿದೆ. ಹೊಸ ವರ್ಷದ ಮೊದಲ ದಿನದಿಂದ ಎಲ್ಲ ವಿಶ್ವವಿದ್ಯಾಲಯಗಳ ವ್ಯವಹಾರಗಳು ಸಂಪೂರ್ಣವಾಗಿ ಇ-ಆಫೀಸ್ ಮೂಲಕವೇ ನಡೆಯುತ್ತವೆ. ಎಲ್ಲ ಕಡತ ಮತ್ತು ಪತ್ರಗಳು ಇ-ಆಫೀಸ್ ಮೂಲಕವೇ ನಡೆಯಲಿದೆ ಎಂದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.