ಬೆಂಗಳೂರು : ಅಪರಾಧ ತಡೆಗಟ್ಟುವ ನಿಟ್ಟಿನಲ್ಲಿ ದಕ್ಷಿಣ ವಿಭಾಗ ವಿನೂತನ ಕಾರ್ಯಕ್ರಮವನ್ನು ಆಯೋಜಿಸಿದ್ದರು.
ಕೊಲೆ, ದರೋಡೆ, ಕೊಲೆ ಯತ್ನ, ಸರಗಳ್ಳತನ ಪ್ರಕರಣಗಳನ್ನ ಮಟ್ಟ ಹಾಕಲೆಂದೆ ಅಪರಾಧ ಚಟುವಟಿಕೆ ಹೆಚ್ಚಿರುವ ಸ್ಥಳಗಳ ಯುವಕರೊಂದಿಗೆ ಡಿಸಿಪಿ ನೇತೃತ್ವದಲ್ಲಿ ಪಂದ್ಯ ಆಯೋಜನೆ ಮಾಡಿದ್ದು, ರೋಹಿಣಿ ಕಟೋಚ್ ಅವರೆ ಬ್ಯಾಟ್ ಹಿಡಿದು ಪಂದ್ಯಕ್ಕೆ ಚಾಲನೆ ನೀಡಿದರು.
ಅಪರಾಧ ಚಟುವಟಿಕೆಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಅಪರಾಧ ಚಟುವಟಿಗಳು, ಗುಂಪುಗಾರಿಕೆ ಹೆಚ್ಚಿರುವ ಏರಿಯಾಗಳ ಜನರ ಮನಃಪರಿವರ್ತನೆಗೋಸ್ಕರ ಮತ್ತು ಪೊಲೀಸರೊಂದಿಗೆ ಸಾಮರಸ್ಯ ಮೂಡಿಸಲು ಈ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು.
ಇನ್ನು ಆಟದಿಂದ ಫುಲ್ ಖುಷ್ ಆದ ಏರಿಯಾ ಯುವಕರು ಪೊಲೀಸರು ಅನ್ನೋ ಭಾವನೆ, ಹೆದರಿಕೆ ಬಿಟ್ಟು ಡಿಸಿಪಿ ಜೊತೆ ಕ್ರಿಕೆಟ್ ಆಡಿ ಸಂಭ್ರಮಪಟ್ಟರು. ಇನ್ನು ಗೆದ್ದ ತಂಡಕ್ಕೆ ಬಹುಮಾನ ಕೂಡ ನೀಡಲಾಯಿತು.