ETV Bharat / city

ಮತ್ತೆ ಮಂದಿರ ಸುತ್ತಲು ಮುಂದಾದ ಡಿಕೆಶಿ: ಅಸ್ಸೋಂ ಕಡೆ ಪ್ರವಾಸ

ಕುಟುಂಬ ಸಮೇತರಾಗಿ ಅಸ್ಸೋಂನ ಗುವಾಹಟಿ ತಲುಪಿರುವ ಮಾಜಿ ಸಚಿವ ಡಿ.ಕೆ.ಶಿವಕುಮಾರ್, ಅಲ್ಲಿನ ಕಾಮಾಕ್ಯ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಲಿದ್ದಾರೆ

ಮಾಜಿ ಸಚಿವ ಡಿ.ಕೆ.ಶಿವಕುಮಾರ್
author img

By

Published : Aug 18, 2019, 11:46 AM IST

ಬೆಂಗಳೂರು: ಶಕ್ತಿ ದೇವತೆಗೆ ವಿಶೇಷ ಪೂಜೆ ಸಲ್ಲಿಸಲು ಮುಂದಾಗಿರುವ ಮಾಜಿ ಸಚಿವ ಡಿ.ಕೆ.ಶಿವಕುಮಾರ್, ನಿನ್ನೆ ಅಸ್ಸೋಂ ಕಡೆ ಪ್ರವಾಸ ಬೆಳೆಸಿದ್ದಾರೆ.

ಖ್ಯಾತ ಜ್ಯೋತಿಷಿ ಒಬ್ಬರ ಸಲಹೆ ಮೇರೆಗೆ ನಿನ್ನೆ ರಾತ್ರಿಯೇ ಕುಟುಂಬ ಸಮೇತರಾಗಿ ಅಸ್ಸೋಂನ ಗುವಾಹಟಿ ತಲುಪಿರುವ ಡಿಕೆಶಿ, ಅಲ್ಲಿನ ಕಾಮಾಕ್ಯ ದೇವಸ್ಥಾನದಲ್ಲಿ ರಾತ್ರಿಯೇ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಇಂದು ಕೂಡ ವಿಶೇಷ ಪೂಜಾ ಕಾರ್ಯದಲ್ಲಿ ತೊಡಗಲಿದ್ದಾರೆ ಎಂದು ತಿಳಿದು ಬಂದಿದೆ.

ಕಾಮಾಕ್ಯ ದೇವಸ್ಥಾನ ಅಷ್ಟಾದಶ ಶಕ್ತಿಪೀಠ ಎಂದೇ ಪ್ರಸಿದ್ಧವಾಗಿದ್ದು, ಶಕ್ತಿ ದೇವತೆಯ ಆರಾಧನೆಯಿಂದ ಮಾಟ ಮಂತ್ರ ಸೇರಿದಂತೆ ಇತರ ಸಂಕಷ್ಟಗಳಿಗೆ ಪರಿಹಾರ ಸಿಗುತ್ತದೆ ಎನ್ನುವ ನಂಬಿಕೆಯಿದೆ. ಅದರಲ್ಲೂ ವಿಶೇಷವಾಗಿ ಕಾನೂನು ಸಂಕಷ್ಟ ಎದುರಾಗಿ ಧೈರ್ಯ ಕುಂದಿದಾಗ ಮೂಲಾಧಾರ ಚಕ್ರ ಜಾಗೃತಿಗಾಗಿ ಕಾಮಾಕ್ಯದಲ್ಲಿ ವಿಶೇಷ ಪೂಜೆ ಸಲ್ಲಿಸುವ ಪ್ರತೀತಿ ಇದೆ. ಹೀಗಾಗಿ ಡಿಕೆಶಿ ಅಲ್ಲಿಗೆ ತೆರಳಿದ್ದಾರೆ ಎಂದು ಹೇಳಲಾಗುತ್ತಿದೆ.

ಕಾಮಾಕ್ಯ ರಕ್ತ ಕಲ್ಯಾಣಿಯಲ್ಲಿ ಪೂಜೆ ಸಲ್ಲಿಸಿದ ಬಳಿಕ, ಒಡಿಶಾದ ಭುವನೇಶ್ವರ್​ಗೆ ತೆರಳಿ ಈಶ್ವರ ಮಂದಿರದಲ್ಲಿ ಡಿಕೆಶಿ ಕುಟುಂಬ ವಿಷೇಶ ಪೂಜೆ ಸಲ್ಲಿಸಲಿದೆಯಂತೆ.

Intro:newsBody:ಮತ್ತೆ ಮಂದಿರ ಸುತ್ತಲೂ ಮುಂದಾದ ಮಾಜಿ ಸಚಿವ ಡಿಕೆಶಿ

ಬೆಂಗಳೂರು: ಕಾನೂನು ತೊಡಕಿನಿಂದ ಪಾರಾಗಲು ಶಕ್ತಿ ದೇವತೆಗೆ ವಿಶೇಷ ಪೂಜೆ ಸಲ್ಲಿಸಲು ಮುಂದಾದ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ನಿನ್ನೆ ಅಸ್ಸಾಂ ಕಡೆ ಪ್ರವಾಸ ಬೆಳೆಸಿದ್ದಾರೆ.
ಖ್ಯಾತ ಜ್ಯೋತಿಷಿ ಒಬ್ಬರ ಸಲಹೆ ಮೇರೆಗೆ ಕುಟುಂಬ ಸಹಿತ ಅಸ್ಸಾಂ ನ ಕಾಮಾಕ್ಯ ದೇವಸ್ಥಾನದಲ್ಲಿ ಇಂದು ವಿಶೇಷ ಪೂಜೆ ಸಲ್ಲಿಸಲಿದ್ದಾರೆ.
ಅಸ್ಸಾಂನ ಗೊಹಾಟಿಯಲ್ಲಿರುವ ಕಾಮಾಕ್ಯ ದೇವಸ್ಥಾನಕ್ಕೆ ನಿನ್ನೆ ರಾತ್ರಿಯೇ ಕುಟುಂಬ ಸಮೇತರಾಗಿ ತಲುಪಿರುವ ಡಿಕೆಶಿ ಅಲ್ಲಿ ನಿನ್ನೆ ರಾತ್ರಿಯೇ ವಿಶೇಷ ಪೂಜೆ ಸಲ್ಲಿಸಿದ್ದು, ಇಂದು ಬೆಳಿಗ್ಗೆ ಕೂಡ ಆದಷ್ಟು ಪೂಜಾ ಕಾರ್ಯದಲ್ಲಿ ತೊಡಗಲಿದ್ದಾರೆ.
ಕಾಮಕ್ಯ ದೇವಸ್ಥಾನ ಅಷ್ಟಾದಶ ಶಕ್ತಿ ಪೀಠ ಅಂತಲೆ ಪ್ರಸಿದ್ದವಾಗಿದೆ. ಮಾಟಮಂತ್ರ ಹಾಗೂ ಸಂಕಷ್ಟ ಹರ ಶಕ್ತಿ ದೇವತೆ ಅನ್ನೋ ನಂಬಿಕೆ ಇರುವ ದೇವಿಯ ಆರಾಧನೆಯಿಂದ ಸಮಸ್ಯೆ ಪರಿಹಾರವಾಗುತ್ತದೆ ಎಂಬ ನಂಬಿಕೆ ಹಲವರಲ್ಲಿ ಇದೆ.
ವಿಶೇಷವಾಗಿ ಕಾನೂನು ಸಂಕಷ್ಟ ಎದುರಾಗಿ ಧೈರ್ಯ ಕುಂದಿದಾಗ ಮೂಲಾದಾರ ಚಕ್ರ ಜಾಗೃತಿಗಾಗಿ ಕಾಮಾಕ್ಯ ದಲ್ಲಿ ವಿಶೇಷ ಪೂಜೆ ಸಲ್ಲಿಸುವ ಪ್ರತಿತಿ ಇದೆ. ಅಲ್ಲಿ ಪೂಜೆ ಸಲ್ಲಿಸಿದ್ರೆ ಸಂಕಷ್ಟ ಪರಿಹಾರದ ಜೊತೆಗೆ ಸಮಸ್ಯೆಯನ್ನ ಎದುರಿಸುವ ಧೈರ್ಯ ಕೊಡುತ್ತಾಳೆ ದೇವಿ ಅನ್ನೋ ನಂಬಿಕೆ ಇರುವ ಹಿನ್ನೆಲೆ ಡಿಕೆಶಿ ಅರ್ಥ ತೆರಳಿದ್ದಾರೆ.
ಈ ಹಿನ್ನೆಲೆಯಲ್ಲಿ ಕಾಮಾಕ್ಯ ರಕ್ತ ಕಲ್ಯಾಣಿಯಲ್ಲಿ ಡಿಕೆಶಿ ಕುಟುಂಬದ ವಿಶೇಷ ಪೂಜೆಗೆ ಸಕಲ ಸಿದ್ಧತೆ ಮೊದಲೇ ನಡೆಸಲಾಗಿದೆ.
ಓರಿಸ್ಸಾದಲ್ಲೂ ಪೂಜೆ
ಓರಿಸ್ಸಾದ ಭುವನೇಶ್ವರ್ ದ ಈಶ್ವರ ಮಂದಿರದಲ್ಲಿ ಡಿಕೆ ಶಿವಕುಮಾರ ವಿಷೇಶ ಪೂಜೆ ಸಲ್ಲಿಸಲಿದ್ದಾರೆ. ಭುವನೇಶ್ವರದ ದಲ್ಲಿ ವಿಷೇಶ ಪೂಜೆ ಸಲ್ಲಿಸಲಿರೋ ಡಿಕೆಶಿವಕುಮಾರ್ ತಮಗೆ ಎದುರಾಗಿರುವ ಸಮಸ್ಯೆ ಪರಿಹಾರಕ್ಕೆ ದೇವರಿಗೆ ಕೋರಲಿದ್ದಾರೆ.

Conclusion:news
ETV Bharat Logo

Copyright © 2024 Ushodaya Enterprises Pvt. Ltd., All Rights Reserved.