ETV Bharat / city

ಬೆಂಗಳೂರು ಸಿಲಿಂಡರ್ ಸ್ಫೋಟ ಪ್ರಕರಣ: ಸಮಯ ಪ್ರಜ್ಞೆಯಿಂದ ಬದುಕುಳಿದ ಕುಟುಂಬ - ಸಿಲಿಂಡರ್ ಸ್ಫೋಟದ ವೀಡಿಯೋ

ನಿನ್ನೆ ರಾತ್ರಿ ಗ್ಯಾಸ್ ಸೋರಿಕೆ ಅರಿತ ಸುಕುಮಾರ್ ಕುಟುಂಬ ಮನೆಯಿಂದ ಹೊರ ಬಂದಿತ್ತು. ಇದೇ ವೇಳೆ, ಮೊದಲ ಮಹಡಿಯಲ್ಲಿದ್ದ ಮಾಲೀಕರಾದ ರಾಮಕ್ಕ ಅವರ ಕುಟುಂಬ‌ ಸಹ ಹೊರಗಡೆ ಬಂದಿದೆ. ನೋಡ ನೋಡುತ್ತಿದ್ದಂತೆ ಗ್ಯಾಸ್​ ಸಿಲಿಂಡರ್ ಸ್ಫೋಟಗೊಂಡಿದ್ದು, ಜೀವಗಳು ಬದುಕುಳಿದಿವೆ.

cylinder blast at Bangalore
ಬೆಂಗಳೂರಿನಲ್ಲಿ ಸಿಲಿಂಡರ್ ಸ್ಫೋಟ
author img

By

Published : Jan 4, 2022, 9:24 AM IST

ಬೆಂಗಳೂರು: ಗ್ಯಾಸ್ ಸೋರಿಕೆಯಿಂದ ಸಿಲಿಂಡರ್​ ಸ್ಫೋಟಗೊಂಡು ಮಗು ಸೇರಿದಂತೆ 7 ಮಂದಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ಚಂದ್ರಾ ಲೇಔಟ್ ಠಾಣಾ ವ್ಯಾಪ್ತಿಯ ಅತ್ತಿಗುಪ್ಪೆ ಬಳಿಯ ಮನೆಯೊಂದರಲ್ಲಿ ನಿನ್ನೆ ರಾತ್ರಿ ನಡೆದಿತ್ತು. ಕುಟುಂಬಸ್ಥರ ಎಚ್ಚರಿಕೆ ನಡೆಯಿಂದ ಸಂಭವನೀಯ ದುರಂತ ತಪ್ಪಿದೆ.

ಸಿಲಿಂಡರ್ ಸ್ಫೋಟದ ಸಿಸಿಟಿವಿ ದೃಶ್ಯಾವಳಿ

ನಿನ್ನೆ ರಾತ್ರಿ ಗ್ಯಾಸ್ ಸೋರಿಕೆ ಅರಿತ ಸುಕುಮಾರ್ ಕುಟುಂಬ ಮನೆಯಿಂದ ಹೊರ ಬಂದಿತ್ತು. ಇದೇ ವೇಳೆ, ಮೊದಲ ಮಹಡಿಯಲ್ಲಿದ್ದ ಮಾಲೀಕರಾದ ರಾಮಕ್ಕ ಅವರ ಕುಟುಂಬ‌ ಸಹ ಹೊರಗಡೆ ಬಂದಿದೆ. ನೋಡ ನೋಡುತ್ತಿದ್ದಂತೆ ಗ್ಯಾಸ್​ ಸಿಲಿಂಡರ್ ಸ್ಫೋಟವಾಗಿದೆ. ಅಡುಗೆ ಮನೆಯ ಕಿಟಕಿಯಿಂದ ಹೊರಚಿಮ್ಮಿದ ಬೆಂಕಿಯ ಕೆನ್ನಾಲಿಗೆ‌ ಕಟ್ಟಡದ ಗೇಟಿನ ಬಳಿ ನಿಂತಿದ್ದ 7 ಜನರಿಗೂ ತಾಗಿ ಸಣ್ಣಪುಟ್ಟ ಗಾಯವಾಗಿತ್ತು. ಕೊನೆ ಕ್ಷಣದಲ್ಲಿ ಕುಟುಂಬ ಎಚ್ಚರಿಕೆ ವಹಿಸಿ ಮನೆಯಿಂದ ಹೊರ ಬಂದಿದ್ದು, ಎಲ್ಲರೂ ಬದುಕುಳಿದಿದ್ದಾರೆ. ಈ ಸಿಲಿಂಡರ್ ಸ್ಫೋಟದ ದೃಶ್ಯಾವಳಿ ಸಿಸಿಟಿವಿಯಲ್ಲಿ ಸೆರೆಯಾಗಿದೆ‌.

ಇದನ್ನೂ ಓದಿ: ಬೆಂಗಳೂರು: ಅತ್ತಿಗುಪ್ಪೆಯಲ್ಲಿ ಸಿಲಿಂಡರ್​ ಬ್ಲಾಸ್ಟ್​, ಮಗು ಸೇರಿ 7 ಮಂದಿಗೆ ಗಂಭೀರ ಗಾಯ

ಘಟನೆಯಲ್ಲಿ ಸುಕುಮಾರ್, ಹರ್ಷಾ, ಘನಶ್ರೀ ಹೇಮೇಶ್ವರ್, ಮನೆ ಮಾಲೀಕರಾದ ರಾಮಕ್ಕ ಸೇರಿದಂತೆ ಏಳು ಮಂದಿಗೆ ಗಂಭೀರ ಗಾಯಗಳಾಗಿವೆ. ಗಾಯಾಳುಗಳನ್ನು ಹೆಚ್ಚಿನ ಚಿಕಿತ್ಸೆಗಾಗಿ ನಗರದ ಇಎಸ್ಐ ಮತ್ತು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಪಶ್ಚಿಮ ವಿಭಾಗದ ಚಂದ್ರಾಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.