ETV Bharat / city

ಮಧ್ಯರಾತ್ರಿ ಅಪರಿಚಿತರು ವಿಡಿಯೊ ಕಾಲ್ ಮಾಡುತ್ತಿದ್ದಾರಾ..? ಕರೆ ಸ್ವೀಕರಿಸುವ ಮುನ್ನ ಈ ಸ್ಟೋರಿ ನೋಡಿ

author img

By

Published : Dec 17, 2020, 8:09 PM IST

ಇತ್ತೀಚಿನ ದಿನಗಳಲ್ಲಿ ವಿಡಿಯೊ ಕಾಲ್ ಮಾಡಿ ಇಂತಹ ಪ್ರವೃತ್ತಿ ಮರೆಯುವರ ಸಂಖ್ಯೆ ಹೆಚ್ಚಾಗುತ್ತಿದೆ. ಕೆಲವರು ಮಯಾರ್ದೆ ಅಂಜಿ ಹಣ ನೀಡಿ ಸುಮ್ಮನಾದರೆ, ಇನ್ನೂ ಕೆಲವರು ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ದೂರು ನೀಡುತ್ತಿದ್ದಾರೆ.

call
ವಿಡಿಯೊ ಕಾಲ್

ಬೆಂಗಳೂರು: ರಾತ್ರಿ ವೇಳೆ ನಿಮಗೇನಾದರೂ ವಿಡಿಯೋ ಕಾಲ್ ಬರುತ್ತಿದೆಯಾ? ಅದರಲ್ಲಿಯೂ ಅಪರಿಚಿತರು ಕರೆ ಮಾಡುತ್ತಿದ್ದಾರಾ..? ಹಾಗಾದರೆ ಎಚ್ಚರ ಮುಂದೆ ಈ ತರಹದ ವಿಡಿಯೋ ಕಾಲ್ ಸ್ವೀಕರಿಸದೇ ಇರುವುದೇ ಒಳಿತು. ಯಾಕೆಂದರೆ ಮಹಿಳೆ ಅಶ್ಲೀಲ ವಿಡಿಯೋ ತೋರಿಸಿ ಹಣ ಕೀಳುವ ಸೈಬರ್ ಖದೀಮರ ಹಾವಳಿ ನಗರದಲ್ಲಿ ದಿನೇ ದಿನೆ ಹೆಚ್ಚಾಗುತ್ತಿದೆ.

ಮಾಹಿತಿ ನೀಡಿದ ಸೈಬರ್ ತಜ್ಞೆ ಶುಭಮಂಗಳ

ಹೊಸ ಹೊಸ ರೀತಿಯಲ್ಲಿ ವಂಚನೆ ಎಸಗುವ ಸೈಬರ್ ಖದೀಮರು ಇದೀಗ ಮಹಿಳೆಯ ಬೆತ್ತಲೆ ವಿಡಿಯೋ ಇರುವ ಹಾಗೆ ಕಾಲ್ ಮಾಡಿ ಲಕ್ಷ ಲಕ್ಷ ವಸೂಲಿ ಮಾಡುತ್ತಿದ್ದಾರೆ. ಅಕ್ರಮ ಹಣ ಸಂಪಾದನೆಗೆ ಹೊಸ ವೇದಿಕೆಯಾಗಿ ಬಳಸಿಕೊಳ್ಳುತ್ತಿದ್ದಾರೆ. ಫೇಸ್​ಬುಕ್, ಇನ್​ಸ್ಟಾಗ್ರಾಂ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ನಕಲಿ ಐಡಿ ರಚಿಸಿಕೊಳ್ಳುವ ವಂಚಕರು ಮುಗ್ದರಿಗೆ ಫ್ರೆಂಡ್ ರಿಕ್ವೆಸ್ಟ್​ ಕಳುಹಿಸುತ್ತಾರೆ. ರಿಕ್ವೆಸ್ಟ್ ಸ್ವೀಕರಿಸಿದ ನಂತರ ವಾಟ್ಸ್​ಆ್ಯಪ್​ ಸಂಖ್ಯೆ ಪಡೆದು ಖದೀಮರು ಸ್ನೇಹದ ಸೋಗಿನಲ್ಲಿ ಚಾಟ್ ಮಾಡುತ್ತಾರೆ. ಸಲುಗೆ ಹೆಚ್ಚಾಗುತ್ತಿದ್ದಂತೆ ಮಧ್ಯರಾತ್ರಿ ವಿಡಿಯೋ ಕಾಲ್ ಮಾಡಿ, ಬೆತ್ತಲೆ ವಿಡಿಯೋ ತೋರಿಸುತ್ತಾರೆ. ಕ್ಷಣಾರ್ಧದಲ್ಲಿ ಸ್ಕ್ರೀನ್ ಶಾಟ್ ಅಥವಾ ವಿಡಿಯೊ ರೆಕಾರ್ಡ್ ಮಾಡಿಕೊಳ್ಳುತ್ತಾರೆ. ಅದೇ ವಿಡಿಯೋ ಇಟ್ಟುಕೊಂಡು ಹಣಕ್ಕೆ ಬೇಡಿಕೆ ಇಡುತ್ತಾರೆ. ಹಣ ನೀಡದಿದ್ದರೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೊ ವೈರಲ್ ಮಾಡಿ ಮಾನ ಹರಾಜು ಹಾಕುವುದಾಗಿ ಧಮಕಿ ಹಾಕುತ್ತಾರೆ.

ಇದನ್ನೂ ಓದಿ: ಅಕ್ರಮ ಸಂಬಂಧ ವಿಚಾರಕ್ಕೆ ಪತಿಯ ಹತ್ಯೆ: ಪತ್ನಿ-ಪ್ರಿಯಕರ ಸೇರಿ ಮೂವರ ಬಂಧನ

ಇತ್ತೀಚಿನ ದಿನಗಳಲ್ಲಿ ವಿಡಿಯೊ ಕಾಲ್ ಮಾಡಿ ಇಂತಹ ಪ್ರವೃತ್ತಿ ಮೆರೆಯುವವರ ಸಂಖ್ಯೆ ಹೆಚ್ಚಾಗುತ್ತಿದೆ. ಕೆಲವರು ಮಯಾರ್ದೆಗೆ ಅಂಜಿ ಹಣ ನೀಡಿ ಸುಮ್ಮನಾದರೆ, ಇನ್ನೂ ಕೆಲವರು ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ದೂರು ನೀಡುತ್ತಿದ್ದಾರೆ.

ಇನ್​ಸ್ಪೆಕ್ಟರ್, ಪತ್ರಕರ್ತನಿಗೂ ಬೆದರಿಕೆ..

ಇತ್ತೀಚೆಗೆ ಎಸಿಬಿ ಇನ್​ಸ್ಪೆಕ್ಟರ್ ದಯಾನಂದ್ ಎಂಬುವರಿಗೆ ವಿಡಿಯೋ ಕರೆ ಮಾಡಿ ಬೆತ್ತಲೆ ವಿಡಿಯೋ ತೋರಿಸಿದ ಅಪರಿಚಿತರು ರೆಕಾರ್ಡ್ ಮಾಡಿಕೊಂಡು ಹಣ ನೀಡುವಂತೆ ಬ್ಲ್ಯಾಕ್ ಮೇಲ್ ಮಾಡಿ 11 ಸಾವಿರ ರೂಪಾಯಿ ವಸೂಲಿ ಮಾಡಿದ್ದರು. ಅದೇ ರೀತಿ ಪತ್ರಿಕೆಯೊಂದರ ಪತ್ರಕರ್ತನಿಗೆ ಕರೆ ಮಾಡಿ ಇದೇ ತಂತ್ರ ಬಳಸಿದ್ದಾರೆ.

ಸೈಬರ್ ಕ್ರೈಂ ತಜ್ಞರು ಹೇಳುವುದು ಏನು ?

ಮೊದಲಿಗೆ ಅಪರಿಚಿತರು ವಿಡಿಯೋ ಕಾಲ್ ಮಾಡಿದರೆ ಕರೆ ಸ್ವೀಕರಿಸಬೇಡಿ. ಆನ್​ಲೈನ್​ನಲ್ಲಿ ಪರಿಚಯಗೊಂಡ ಸ್ನೇಹಿತರ ಅಥವಾ ಅನಾಮಧೇಯ ವ್ಯಕ್ತಿಗಳ ಅಕೌಂಟ್​ಗಳು ನಿಜಕ್ಕೂ ಅಸಲಿಯೇ ಎಂಬುದರ ಬಗ್ಗೆ ಖಾತ್ರಿಪಡಿಸಿಕೊಳ್ಳಬೇಕು. ಸಾಮಾಜಿಕ ಜಾಲತಾಣದಲ್ಲಿ ಖಾತೆಯ ಮಾಹಿತಿ ವೈಯಕ್ತಿಕ, ಭಾವಚಿತ್ರ, ವಿಡಿಯೇ ಕಳುಹಿಸುವಾಗ ಎಚ್ಚರವಹಿಸಬೇಕು. ಈ ರೀತಿ ಬ್ಲಾಕ್ ಮೇಲ್ ಮಾಡಿದ ವಿಡಿಯೋಗಳನ್ನು ಡಾರ್ಕ್​ವೆಬ್​ನಲ್ಲಿ ಮಾರಾಟ ಮಾಡಿ ಅಕ್ರಮವಾಗಿ ಹಣ ಸಂಪಾದನೆ ಮಾಡುತ್ತಿದ್ದು, ಅವರ ವಂಚನೆ ಜಾಲಕ್ಕೆ ಸಿಲುಕದಿರಿ ಎಂದು ಸಾರ್ವಜನಿಕರಿಗೆ ಸೈಬರ್ ತಜ್ಞೆ ಶುಭಮಂಗಳ ತಿಳಿವಳಿಕೆ ನೀಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.