ETV Bharat / city

ಅವಹೇಳನಕಾರಿ ಪೋಸ್ಟ್​, ಬೆಂಗಳೂರು ಗಲಭೆ​: ಸಿಪಿಐ(ಎಂ) ಖಂಡನೆ - Bangalore News

ಬೆಂಗಳೂರು ಪೂರ್ವ ವಲಯದ ಪುಲಕೇಶಿನಗರದ ಶಾಸಕರ ಮನೆ, ಡಿ.ಜೆ.ಹಳ್ಳಿ ಪೋಲಿಸ್ ಠಾಣೆ ಮತ್ತು ಕೆ.ಜಿ.ಹಳ್ಳಿಯ ಹಲವೆಡೆ ಕಳೆದ ರಾತ್ರಿ ನಡೆದಿರುವ ದಾಳಿಗಳನ್ನು ಹಾಗೂ ಅದಕ್ಕೆ ಕಾರಣವೆಂದು ಹೇಳಲಾಗುತ್ತಿರುವ ಫೇಸ್‌ಬುಕ್ ಅವಹೇಳನಕಾರಿ ಪೋಸ್ಟಿಂಗ್ ಅನ್ನು ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸವಾದಿ) ಖಂಡಿಸಿದೆ.

CPI (M) condemns Bangalore riots and derogatory postings
ಬೆಂಗಳೂರು ಗಲಭೆ ಮತ್ತು ಅವಹೇಳನಕಾರಿ ಪೋಸ್ಟಿಂಗ್ಸ್​ಗೆ ಸಿಪಿಐ(ಎಂ) ಖಂಡನೆ
author img

By

Published : Aug 12, 2020, 10:31 PM IST

ಬೆಂಗಳೂರು: ಜನತೆ ಯಾವುದೇ ಊಹಾಪೋಹಗಳಿಗೆ ಹಾಗೂ ಕಿಡಿಗೇಡಿಗಳ ಅಪಪ್ರಚಾರಕ್ಕೆ ಕಿವಿಗೊಡದೆ ಶಾಂತಿ ಸೌಹಾರ್ದತೆ ಕಾಪಾಡಿಕೊಳ್ಳಬೇಕೆಂದು ಸಿಪಿಐ (ಎಂ) ಮನವಿ ಮಾಡಿದೆ.

ನಗರದ ಪೂರ್ವ ವಲಯದ ಪುಲಕೇಶಿನಗರದ ಶಾಸಕರ ಮನೆ, ಡಿ.ಜೆ.ಹಳ್ಳಿ ಪೋಲಿಸ್ ಠಾಣೆ ಮತ್ತು ಕೆ.ಜಿ.ಹಳ್ಳಿಯ ಹಲವೆಡೆ ಕಳೆದ ರಾತ್ರಿ ನಡೆದಿರುವ ದಾಳಿಗಳನ್ನು ಹಾಗೂ ಅದಕ್ಕೆ ಕಾರಣವೆಂದು ಹೇಳಲಾಗುತ್ತಿರುವ ಫೇಸ್‌ಬುಕ್ ಅವಹೇಳನಕಾರಿ ಪೋಸ್ಟಿಂಗ್ ಅನ್ನು ಮಾಧ್ಯಮ‌ ಪ್ರಕಟಣೆಯಲ್ಲಿ ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸವಾದಿ), ಕರ್ನಾಟಕ ರಾಜ್ಯ ಸಮಿತಿ ಮತ್ತು ಬೆಂಗಳೂರು ಉತ್ತರ ಹಾಗೂ ದಕ್ಷಿಣ ಜಿಲ್ಲಾ ಸಮಿತಿಗಳು ಖಂಡಿಸಿವೆ. ಪುಲಕೇಶಿನಗರದ ಶಾಸಕ ಅಖಂಡ ಶ್ರೀನಿವಾಸ್‌ಮೂರ್ತಿ ಅವರ ಸಂಬಂಧಿ ತನ್ನ ಫೇಸ್‌ಬುಕ್ ಖಾತೆಯಲ್ಲಿ ಹಾಕಿರುವ ಅವಹೇಳನಕಾರಿ ಪೋಸ್ಟ್​ ಆಧರಿಸಿ, ಪಿಎಫ್‌ಐ ಮತ್ತು ಎಸ್‌ಡಿಪಿಐ ಸಂಘಟನೆಗಳ ಪ್ರಚೋದನಕಾರಿ ಹೇಳಿಕೆಗಳಿಂದಾಗಿ ಉಂಟಾಗಿರುವ ಪರಿಸ್ಥಿತಿಯನ್ನು ತಿಳಿಗೊಳಿಸಲು ರಾಜ್ಯ ಸರ್ಕಾರ ಮತ್ತು ಪೋಲಿಸ್ ಇಲಾಖೆ ಅಗತ್ಯ ಕ್ರಮಗಳನ್ನು ಸಂಯಮದಿಂದ ಕೈಗೊಳ್ಳಬೇಕೆಂದು ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡಲು ಮುತುವರ್ಜಿ ವಹಿಸಬೇಕು. ಪ್ರಚೋದನಕಾರಿ ಹೇಳಿಕೆಗಳನ್ನು ನೀಡುವ ಮೂಲಕ ಶಾಂತಿ ಸುವ್ಯವಸ್ಥೆಗೆ ಧಕ್ಕೆ ಉಂಟುಮಾಡುವ ಎಲ್ಲಾ ವ್ಯಕ್ತಿಗಳು, ಶಕ್ತಿಗಳ ಮೇಲೆ ನಿರ್ದಾಕ್ಷಿಣ್ಯ ಕ್ರಮವಹಿಸಬೇಕು ಎಂದು ಸರ್ಕಾರಕ್ಕೆ ಸಿಪಿಐ (ಎಂ) ಆಗ್ರಹಿಸಿದೆ.

ಬೇಹುಗಾರಿಕೆ ವೈಫಲ್ಯ: ಸೂಕ್ಷ್ಮ ಸಂದರ್ಭವನ್ನು ಸಂವೇದನಾಶೀಲವಾಗಿ ಪರಿಗಣಿಸಿ, ಉಂಟಾಗಬಹುದಾದ ಅವಗಡಗಳನ್ನು ತಪ್ಪಿಸುವಲ್ಲಿ ರಾಜ್ಯ ಸರ್ಕಾರದ ಪೊಲೀಸ್​ ಬೇಹುಗಾರಿಕೆ ಸಂಪೂರ್ಣವಾಗಿ ವಿಫಲವಾಗಿರುವುದನ್ನು ಈ ಗಲಭೆಗಳು ತೋರ್ಪಡಿಸುತ್ತವೆ ಎಂದು ತಿಳಿಸಲಾಗಿದೆ.

ಬಲಪಂಥೀಯ ಅಂಶಗಳು: ಫೇಸ್‌ಬುಕ್ ಪೋಸ್ಟಿಂಗ್ ಮಾಡಿರುವ ವ್ಯಕ್ತಿಯ ಹಲವು ಪೋಸ್ಟಿಂಗ್‌ಗಳು ಬಲಪಂಥೀಯ ಸಂಘಪರಿವಾರದ ಸಾಮಾಜಿಕ ಮಾಧ್ಯಮದ ಪ್ರಚಾರದ ಅಂಶಗಳನ್ನು ಒಳಗೊಂಡಿರುವುದನ್ನು ಗಮನಿಸಬಹುದಾಗಿದೆ. ಮುಂಬರುವ ಬಿಬಿಎಂಪಿ ಚುನಾವಣೆಗಳಲ್ಲಿ ಈ ದುರುದ್ದೇಶಪೂರಿತ ಪೋಸ್ಟಿಂಗ್​ನಿಂದ ಉಂಟಾಗುವ ಪರಿಸ್ಥಿತಿಯ ದುರ್ಲಾಭ ಪಡೆಯಲು ಸಂಘ ಪರಿವಾರ ಮತ್ತು ಬಿಜೆಪಿಯು ನಡೆಸುತ್ತಿರುವ ಯತ್ನವನ್ನು ಜನತೆ ಮನಗಾಣಬೇಕು. ಇಂತಹ ಎಲ್ಲಾ ಸಂದರ್ಭದಲ್ಲೂ ಧರ್ಮಗಳ ನಡುವೆ ಕಂದಕ ಸೃಷ್ಠಿಸಿ ಅದರ ದುರ್ಲಾಭ ಪಡೆದು ತನ್ನ ರಾಜಕೀಯ ಇರುವಿಕೆಯನ್ನು ಸ್ಥಾಪಿಸಲು ಹೊರಟಿರುವ ಪಿಎಫ್‌ಐ ಮತ್ತು ಎಸ್‌ಡಿಪಿಐ ಸಂಘಟನೆಗಳ ದುರುದ್ದೇಶವನ್ನು ಜನತೆ ಅರಿಯಬೇಕೆಂದು ಹಾಗೂ ಈ ಎರಡೂ ಬಲಪಂಥೀಯ ಶಕ್ತಿಗಳ ವಿಭಜಕ ನೀತಿಗಳನ್ನು ಬೆಂಗಳೂರು ಹಾಗೂ ರಾಜ್ಯದ ಜನತೆ ತಿರಸ್ಕರಿಸಬೇಕು. ಇಂತಹ ಘಟನೆಗೆ ಕಾರಣವಾಗಿರುವ ಎಲ್ಲರ ಮೇಲೆ ಬಿಗಿ ಕ್ರಮವಹಿಸಿ, ಶಾಂತಿ ಸೌಹಾರ್ದತೆ ಸ್ಥಾಪಿಸಲು ರಾಜ್ಯ ಸರ್ಕಾರ ಅಗತ್ಯ ತುರ್ತು ಕ್ರಮ ವಹಿಸಬೇಕು. ಒಟ್ಟು ಪ್ರಕರಣದ ಹಿಂದಿರುವ ಶಕ್ತಿಗಳನ್ನು ಪತ್ತೆ ಹಚ್ಚಲು ಸ್ವತಂತ್ರ ನ್ಯಾಯಾಂಗ ತನಿಖೆಗೆ ಕ್ರಮ ವಹಿಸಬೇಕೆಂದು ರಾಜ್ಯ ಸಕಾ೯ರವನ್ನು ಸಿಪಿಐ(ಎಂ) ಒತ್ತಾಯಿಸಿದೆ.

ರಾಜ್ಯ ಸರ್ಕಾರದ ಜವಾಬ್ದಾರಿಯುತ ಸ್ಥಾನದಲ್ಲಿರುವ ಸಚಿವರು, ಶಾಸಕರು ಮತ್ತು ಆಡಳಿತಾರೂಢ ಬಿಜೆಪಿ ಪಕ್ಷದ ನಾಯಕರು ಜವಾಬ್ದಾರಿಯುತ ನಡವಳಿಕೆಗಳನ್ನು ಪ್ರದರ್ಶಿಸಿ, ಹೊಣೆಗಾರಿಕೆಯ ಹೇಳಿಕೆಗಳನ್ನು ನೀಡಬೇಕೇ ವಿನಃ ಪರಿಸ್ಥಿತಿಯನ್ನು ಹದಗೆಡಿಸುವ ನಿಟ್ಟಿನ ಹೇಳಿಕೆಗಳನ್ನು ನೀಡುವಂತಹ ಹೊಣೆಗೇಡಿತನವನ್ನು ಪ್ರದರ್ಶಿಸಬಾರದು. ಬೇಜವಾಬ್ದಾರಿ ಪೋಸ್ಟಿಂಗ್ಸ್ ಮತ್ತು ಹೊಣೆಗೇಡಿತನದ ಭಾವೋದ್ರೇಕದ ಉತ್ತೇಜನಗಳು ಮೂರು ಜನರ ಸಾವಿಗೆ, ಹತ್ತಾರು ಜನರ ನೋವಿಗೆ ಹಾಗೂ ಲಕ್ಷಾಂತರ ರೂಪಾಯಿ ಆಸ್ತಿ-ಪಾಸ್ತಿ ನಷ್ಟಕ್ಕೆ ಕಾರಣವಾಗಿದೆ. ಇಂತಹ ಸಂದರ್ಭದಲ್ಲಿ ಶಾಂತಿ, ಸೌಹಾರ್ದತೆಯನ್ನು ಕಾಪಾಡಲು ಅತ್ಯಂತ ತುರ್ತಾಗಿ ಸಂಯಮದ ನಡವಳಿಕೆಯನ್ನು ಪ್ರದರ್ಶಿಸಬೇಕೆಂದು ಸಿಪಿಐ(ಎಂ) ಮನವಿ ಮಾಡಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.