ಬೆಂಗಳೂರು: ಕೋತ್ವಾಲ್ ರಾಮಚಂದ್ರ ಸಂಸ್ಕೃತಿಯಿಂದ ಡಿಕೆಶಿ ಆಚೆ ಬರಬೇಕು ಎಂದು ಸಿ. ಪಿ. ಯೋಗೇಶ್ವರ್ ತಿರುಗೇಟು ನೀಡಿದ್ದಾರೆ. ನನ್ನ ವಿರುದ್ಧ ಅವರು ಗಾಳಿ ಸುದ್ದಿಗಳನ್ನು ಹರಿಬಿಡ್ತಿದ್ದಾರೆ. ಬಿಜೆಪಿಯಲ್ಲಿ ನಾನು ತತ್ವಾದರ್ಶಗಳನ್ನು ಇಟ್ಟುಕೊಂಡವನು. ಮೂರು ತಿಂಗಳ ಹಿಂದೆಯೇ ಬಿಎಸ್ವೈ ಹಾಗೂ ಪಕ್ಷದ ವರಿಷ್ಠರು ನನಗೆ ಮೇಲ್ಮನೆ ಸದಸ್ಯ ಮಾಡ್ತೀವಿ ಅಂತ ಭರವಸೆ ನೀಡಿದ್ದರು ಎಂದು ಸ್ಪಷ್ಟಪಡಿಸಿದರು.
ಡಿಕೆಶಿ ವಿಷಬೀಜ ಬಿತ್ತೋ ಕೆಲಸ ಮಾಡ್ತಿದ್ದಾರೆ. ನಾನು ಅವರ ಕಾಲಿಗೆ ಬೀಳೋ ಸಂದರ್ಭ ಯಾವತ್ತೂ ಬರಲ್ಲ. ಅವರು ಕೆಪಿಸಿಸಿ ಅಧ್ಯಕ್ಷರಾಗಿದ್ದು, ಘನತೆ, ಗಾಂಭೀರ್ಯತೆಯಿಂದ ಮಾತನಾಡಬೇಕು. ಈ ತರಹದ ಹೇಳಿಕೆಗಳು ಅವರ ಸ್ಥಾನ, ಗೌರವಕ್ಕೆ ಚ್ಯುತಿ ತರುತ್ತಿದೆ ಎಂದು ಕಿಡಿ ಕಾರಿದ್ದಾರೆ.
ಯಡಿಯೂರಪ್ಪ ಅವರು ಸಿಎಂ ಆಗುವುದಕ್ಕೆ ನನ್ನದೂ ಅಳಿಲು ಸೇವೆ ಇದೆ. ಬಿಎಸ್ವೈ ವಿರುದ್ಧ ಯಾವುದೇ ಸಂಚು ಅಥವಾ ಪಿತೂರಿ ಮಾಡುವ ಅವಶ್ಯಕತೆ ಇಲ್ಲ. ಅವರು ಮುಂದಿನ ಮೂರು ವರ್ಷ ಅಧಿಕಾರ ನಡೆಸಲಿದ್ದಾರೆ ಎಂದು ಹೇಳಿದರು.