ಬೆಂಗಳೂರು: ನಗರದಲ್ಲಿಂದು 2,043 ಜನರಲ್ಲಿ ಕೋವಿಡ್ ಪಾಸಿಟಿವ್ ದೃಢಪಟ್ಟಿದೆ.
ಬೊಮ್ಮನಹಳ್ಳಿಯಲ್ಲಿ 246, ದಾಸರಹಳ್ಳಿ 60, ಬೆಂಗಳೂರು ಪೂರ್ವ 242, ಮಹಾದೇವಪುರ 281, ಆರ್ಆರ್ ನಗರ 195, ಬೆಂಗಳೂರು ದಕ್ಷಿಣ 167, ಬೆಂಗಳೂರು ಪಶ್ಚಿಮ 182 ಹಾಗು ಯಲಹಂಕದ 133 ಜನರಿಗೆ ಸೋಂಕು ವಕ್ಕರಿಸಿದೆ.
ನಿನ್ನೆ ನಗರದಲ್ಲಿ 1,992 ಪ್ರಕರಣಗಳು ಪತ್ತೆಯಾಗಿದ್ದವು. 199 ಮಂದಿ ಮೃತಪಟ್ಟಿದ್ದರು. ಈವರೆಗೆ 1,07,645 ಸಕ್ರಿಯ ಪ್ರಕರಣಗಳಿವೆ.
ಜೂನ್ 6ರಂದು 52,079 ಜನರ ಕೋವಿಡ್ ಸೋಂಕು ಪರೀಕ್ಷೆ ನಡೆಸಿದ್ದು, 40,826 ಜನರಿಗೆ ವ್ಯಾಕ್ಸಿನ್ ನೀಡಲಾಗಿದೆ. ಪಾಸಿಟಿವಿಟಿ ಪ್ರಮಾಣ 4.91% ಕ್ಕೆ ಇಳಿಕೆಯಾಗಿದ್ದು, ಮರಣ ಪ್ರಮಾಣ 7.89% ಇದೆ.
ಇದನ್ನೂ ಓದಿ: 63 ದಿನಗಳ ಬಳಿಕ 1 ಲಕ್ಷ ಗಡಿಯಿಂದ ಕೆಳಗಿಳಿದ ಕೋವಿಡ್: ಮೃತರ ಸಂಖ್ಯೆಯೂ ಇಳಿಕೆ